ಬಂಗಾಡಿ: ಉಳ್ಳಾಕುಳ ಮೂಲಸ್ಥಾನ ಕರುವಲ್ಲ ಕಲ್ಲಗುಂಡದ ಜೀರ್ಣೋದ್ಧಾರದ ಭಾಗವಾಗಿ ಬಾಲಾಲಯ ಕಾಮಗಾರಿಯ ಭೂಮಿ ಪೂಜೆ

0

ಬಂಗಾಡಿ : ಇತಿಹಾಸ ಪ್ರಸಿದ್ಧ ಬಂಗಾಡಿ ಸೀಮೆಯ ಧರ್ಮ ದೇವತೆಗಳಾದ ಉಳ್ಳಾಕುಳ ಮೂಲಸ್ಥಾನ ಕರುವಲ್ಲ ಕಲ್ಲಗುಂಡದ ಜೀರ್ಣೋದ್ಧಾರದ ಭಾಗವಾಗಿ ಬಾಲಾಲಯ ಕಾಮಗಾರಿಯ ಭೂಮಿ ಪೂಜೆಯು ಡಿ.25ರಂದು ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ ಆನಂದ್ ಭಟ್ ರವರ ಪೌರೋಹಿತ್ಯದಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯಿತು.

ಬಂಗಾಡಿ ಅರಮನೆಯ ಯಶೋಧರ ಬಲ್ಲಾಳ್, ಇಂದಬೆಟ್ಟು ಗುತ್ತಿನ ಮನೆಯ ಅಜಿತ್ ಕುಮಾರ್ ಜೈನ್, ಅರ್ಧನಾರೀಶ್ವರ ದೇವಸ್ಥಾನ ಮತ್ತು ಹಾಡಿದೈವ ಕ್ಷೇತ್ರ ಕುತ್ರಬೆಟ್ಟು ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸರ್ವ ಸದಸ್ಯರು, ಗಣ್ಯರು ಹಾಗೂ ಊರ ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಅಷ್ಟಮಂಗಲ ಪ್ರಶ್ನ ಚಿಂತನೆಯ ಪ್ರಕಾರವಾಗಿ ಜ.8 ರಿಂದ ಜ.11ರವರೆಗೆ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಪರಿಹಾರ ಕರ್ಮಾಂಗ ಮತ್ತು ಉಳ್ಳಾಕುಳ ಹಾಗೂ ಪರಿವಾರ ದೈವಗಳ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here