ನಾರಾವಿ: 1923 ರಲ್ಲಿ ಪ್ರಾರಂಭವಾದ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದ ಗ್ರಾಮೀಣ ಭಾಗದ ಶಿಕ್ಷಣದ ಕನಸನ್ನು ನನಸಾಗಿಸುತ್ತಾ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಊರ ಪರವೂರಿನ ವಿದ್ಯಾಭಿಮಾನಿಗಳ ಪ್ರೀತಿಗೆ ಪಾತ್ರರಾದ ಜ್ಞಾನದೇಗುಲ ಸಂತ ಪಾವ್ಲರ ಅನುದಾನಿತ ಹಿ.ಪ್ರಾ. ಶಾಲಾ ಶತಮಾನೋತ್ಸವದ ಸಂಭ್ರಮವು ಡಿ.16 ರಂದು ಜರುಗಿತು.
ಶತಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ಮಂಗಳೂರು ಧರ್ಮಪ್ರಾಂತ್ಯದ ವಿಗಾರ್ ಜನರಲ್ ಮೊನ್ಸಿಂಞೋರ್ ಮಾಕ್ಸಿಂ ಎಲ್ ನೊರೋನ್ಹಾ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್, ನಾರಾವಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಆಶಾಲತಾ, ಉದ್ಯಮಿ ಹಾಗೂ ಹಳೆ ವಿದ್ಯಾರ್ಥಿ ಸಂತೋಷ್ ವಿನ್ಸೆಂಟ್ ಅಗೇರಾ, , ಬೆಳ್ತಂಗಡಿ ವಲಯದ ಪ್ರಧಾನ ಕಥೋಲಿಕ ಧರ್ಮಗುರು ವಂ|ಫಾ| ಅಲ್ಫೋನ್ಸ್ ಕರ್ಡೋಜ, ಮಾಜಿ ಸಂಚಾಲಕ ವಂ|ಫಾ| ಸ್ಟ್ಯಾನಿ ರೊಡ್ರಿಗಸ್, ವಂ|ಫಾ| ಲುವಿಸ್ ಕುಟಿನ್ಹಾ, ನಾರಾವಿ ಸಂತ ಅಂತೋನಿ ಕಾಲೇಜು ನಿಕಟ ಪೂರ್ವ ಪ್ರಾಂಶುಪಾಲ ವಂ|ಫಾ| ಅರುಣ್ ವಿಲ್ಸನ್ ಲೋಬೋ, ನಾರಾವಿ ಜೆರೋಸಾ ಕಾನ್ವೆಂಟ್ ಸುಪೀರಿಯರ್ ವಂ|ಭ| ಮಾರಿ ಸೆಲಿನ್ ಮಿಸ್ಕಿತ್, ನಾರಾವಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಿನ್ಸೆಂಟ್ ರೊಡ್ರಿಗಸ್ , ಕಾರ್ಯದರ್ಶಿ ರೀಟಾ ಪಿಂಟೋ ಉಪಸ್ಥಿತರಿದ್ದರು.
ಸಂತ ಅಂತೋನಿ ಕಾಲೇಜಿನ ಪ್ರಾಂಶುಪಾಲರಾದ ವಂ.ಫಾ| ಆಲ್ವಿನ್ ಸೆರಾವೊ, ಸಂತ ಪಾವ್ಲ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಸಿ| ಸುಪ್ರೀತಾ ಕ್ರಾಸ್ತಾ, ನಾರಾವಿ ಚರ್ಚ್ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲಿಡ್ವಿನ್ ಲೋಬೊ, ಸಂತ ಪಾವ್ಲರ ಅನುದಾನಿತ ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸೋಫಿಯಾ ಫೆರ್ನಾಂಡಿಸ್, ಶತಮಾನೋತ್ಸವ ಸಮಿತಿ ಸದಸ್ಯರು ಭಾಗವಹಿಸಿದರು.
ಸಂಚಾಲಕ ವಂ.ಫಾ| ಸೈಮನ್ ಡಿಸೋಜ ಸ್ವಾಗತಿಸಿದರು.