ಧರ್ಮಸ್ಥಳ : ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಧರ್ಮಸ್ಥಳ ಮತ್ತು ಪುದುವೆಟ್ಟು, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಬೆಳ್ತಂಗಡಿ ಇದರ ಸಹಯೋಗದಲ್ಲಿ ಡಿ.15 ರಂದು ಧರ್ಮಸ್ಥಳ ಸಹಕಾರ ಸಂಘದ ಅಟಲ್ ಜೀ ಸಭಾ ಭವನದಲ್ಲಿ ಕೃಷಿಕರಿಗೆ ಅಡಿಕೆ ಎಲೆಚುಕ್ಕಿ ರೋಗ, ಕೃಷಿ ನಿರ್ವಹಣೆ ಮತ್ತು ಹೈನುಗಾರಿಕೆ ಜಾನುವಾರು ಚರ್ಮ, ಗಂಟು ರೋಗ ನಿರ್ವಹಣೆ ಹಾಗೂ ಇಲಾಖೆಯ ಮಾಹಿತಿ ಶಿಬಿರ ನಡೆಯಿತು.
ಹಿರಿಯ ಕೃಷಿಕರಾದ ಪುರಂದರ ರಾವ್ ಮತ್ತು ಹೊನ್ನಪ್ಪ ಗೌಡ ಶಿಬಿರ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸ್ಥಳ ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ. ವಹಿಸಿದ್ದರು.
ಮಂಗಳೂರು ಪಶು ಅರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಾದೇಶಿಕ ಸಂಶೋಧಕ ಹಾಗೂ ಮುಖ್ಯ ಪಶು ವೈದ್ಯಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಹೈನುಗಾರಿಕೆ ಬಗ್ಗೆ,ವಿಟ್ಲ ಕೃಷಿ ವಿಜ್ಞಾನ ಸಂಶೋಧನೆ ಕೇಂದ್ರದ ಪುರಂದರ ಕೃಷಿ ಮಾಹಿತಿಯನ್ನು ತೋಟಗಾರಿಕೆ ಇಲಾಖೆಯ ಮಹಾವೀರ ತೋಟಗಾರಿಕೆ ಕುರಿತು ರೈತರಿಗೆ ಮಾಹಿತಿ ನೀಡಿದರು. ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯ ಮೋನಪ್ಪ ಗೌಡ, ಉಪಾಧ್ಯಕ್ಷ ಶ್ರೀನಿವಾಸ ರಾವ್, ಅಭಿವೃದ್ಧಿ ಅಧಿಕಾರಿ ಉಮೇಶ ಕೆ., ಪುದುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಗೌಡ, ಧರ್ಮಸ್ಥಳ ಸಹಕಾರ ಸಂಘದ ಉಪಾಧ್ಯಕ್ಷ ಅಜಿತ್ ಕುಮಾರ್ ಮತ್ತು ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸತೀಶ್ ಹೊಳ್ಳ ಎನ್. ಮತ್ತು ಸಿಬ್ಬಂದಿಗಳು, ಸಂಘದ ಸದಸ್ಯರು, ಧರ್ಮಸ್ಥಳ ಮತ್ತು ಪುಡುವೆಟ್ಟು ಗ್ರಾಮದ ರೈತರು ಭಾಗವಹಿಸಿದ್ದರು.