ವಾರ ಭವಿಷ್ಯ

 ಜ.06-2-2020 ರಿಂದ   ಜ.12-2-2020 ರವರೆಗೆ

 • ಮೇಷ :

  ಮನೆ,ವಾಹನ, ವಸ್ತ್ರಾಭರಣ, ಭೂಮಿ ಇತ್ಯಾದಿಗಳ ಬಗ್ಗೆ ಚಿಂತಿಸುವುದು ಅಗತ್ಯವಿಲ್ಲ. ಶುಭಕಾಲ ಕೂಡಿ ಬರುವವರೆಗೆ ತಾಳ್ಮೆ ಅಗತ್ಯ. ದೈವಾನುಗ್ರಹ ಇರುವುದು ಇಷ್ಟಾರ್ಥ ನೆರವೇರುವುದು ದುಃಖದ ಸುದ್ದಿಗಳು ಸಾಧ್ಯ.

 •    ವೃಷಭ
  ಕೃಷಿ ಹಾಗೂ ಘಟಕಗಳಲ್ಲಿ ಉತ್ಪಾದಿಸಿದ ದ್ರವ್ಯಗಳು ನಷ್ಟವಾಗದಂತೆ ಜಾಗ್ರತೆ ಅಗತ್ಯ. ಮಾತಿನಲ್ಲಿ ನಯವಿನಯಗಳಿರಲಿ. ಆರೋಗ್ಯದ ಬಗ್ಗೆ ಅಧಿಕ ಕಾಳಜಿ ಅಗತ್ಯ. ಧನಸಂಪತ್ತಿನ ಜಾಗ್ರತೆಯಿರಲಿ.

   

  ಮಿಥುನ :

  ಆಕಸ್ಮಿಕ ಸುಖ,ಸಂತೋಷವನ್ನು ಅನುಭವಿಸುವ ಸಮಯ ಒದಗುವುದು. ಸಂಚಾರ ಕಾಲದಲ್ಲಿ ಧನ, ಆಭರಣಗಳ ಬಗ್ಗೆ ನಿಗಾವಹಿಸಿ. ವ್ಯಾಪಾರದಲ್ಲಿ ಸುಖವನ್ನು ಅನುಭವಿಸುತ್ತೀರಿ ಮನೆಯ ಕಾರ್ಯದಲ್ಲಿ ಆಕಸ್ಮಿಕ ವಿಘ್ನಗಳು ಬಾರದಂತೆ ಜಾಗೃತರಾಗಿರಿ.

 • ಕರ್ಕಾಟಕ : 

  ವ್ಯಾಪಾರದಲ್ಲಿ ಅಧಿಕ ಪೈಪೋಟಿಗಳು ಸಾಧ್ಯ. ಧೈರ್ಯದಿಂದ ಎದುರಿಸಿ. ಇಷ್ಟಸಂತಾನ ದುಃಖವಿರುವುದು. ಭೋಗ ಸುಖಕ್ಕಾಗಿ ಖರ್ಚುವೆಚ್ಚಗಳಲ್ಲಿ ಹಿಡಿತವಿರಲಿ. ಸಂಪತ್ತು ಸಂಗ್ರಹಿಸಿ ಸುಖ ಜೀವನವನ್ನನುಭವಿಸುವಿರಿ.

 • ಸಿಂಹ : 

  ದೀರ್ಘಕಾಲದ ನಿಮ್ಮ ಜನಸೇವೆಯನ್ನು ಗುರುತಿಸದಿರುವುದಕ್ಕೆ ಪಶ್ಚಾತಾಪ ಪಡುವುದು ಅಗತ್ಯವಿಲ್ಲ. ಇನ್ನು ಸಮಾಜ ಸೇವಕನೆನಿಸಿಕೊಳ್ಳಿ ಕಾಲ ಕೂಡಿ ಬರುವವರೆಗೆ. ವಿದ್ಯೆ,ಮಾತು, ಧನಸಂಪತ್ತು, ಕೀರ್ತಿ ಕುಟುಂಬದ ವಿಷಯಗಳಲ್ಲಿ ಜಯವನ್ನು ಸಾಧಿಸುವಿರಿ. ಸಂಶೋಧನಾ ರಂಗದಲ್ಲಿ ತಾತ್ಕಾಲಿಕ ಹಿನ್ನಡೆ.

 • ಕನ್ಯಾ : 

  ಬಂಧುಗಳೊಂದಿಗೆ ವ್ಯಾಪಾರದಿಂದ ಕ್ಲೇಶಗಳು ಉದ್ಬವಿಸದಂತೆ ವ್ಯವಹರಿಸಿ ಉದ್ಯೋಗದಲ್ಲಿ ಬುದ್ಧಿವಂತಿಕೆಯಿಂದ ಜಯವನ್ನು ಸಾಧಿಸುವಿರಿ. ಕಲಹ ಬಾರದಂತೆ ಎಚ್ಚರ ವಹಿಸಿಸಿದರೆ ಇಷ್ಟ ಸಿದ್ಧಿಸುವುದು.

  ತುಲಾ  :

 • ಉದ್ಯೋಗದಲ್ಲಿ ಭಾಗ್ಯವಂತರಾಗುವಿರಿ. ಲಾಭದ ಯೋಚನೆಯಿಂದ ಸ್ಥಾನ ನಾಶವಾಗದಂತೆ ಜಾಗ್ರತೆ ಅಗತ್ಯ. ವ್ಯವಹಾರದಲ್ಲಿ ಧನಲಾಭವಾಗುವುದು. ಕೀರ್ತಿ, ಸಂತೋಷಕ್ಕಾಗಿ ವ್ಯಯ ಮಾಡಿದರೆ ನಷ್ಟದ ಭೀತಿ ಇರುವುದು. ಕೀರ್ತಿಯ ಬಯಕೆಯಿಂದ ಪುತ್ರನಲ್ಲಿ ಮನಸ್ತಾಪ ಬಾರದಿರಲಿ. ಬಯಸಿದ ಸಂತಾನ ಸುಖ ಇರುವುದು. ಅಶುಭವಾರ್ತೆ ನಿರೀಕ್ಷೆ.

 • ವೃಶ್ಚಿಕ :

  ಆಕಸ್ಮಿಕ ಅನಿರೀಕ್ಷಿತ ಕಲಹಕ್ಕೆ ಅವಕಾಶ ನೀಡದಿರಿ. ಬುದ್ದಿವಂತಿಕೆಯ ಕಾರ್ಯಗಳಿಂದ ಧನಲಾಭ, ಲಾಭಕ್ಕಾಗಿ ಸಂಗ್ರಹಿಸಿದ ದ್ರವ್ಯಗಳ ಬಗ್ಗೆ ನಷ್ಟವಾಗದಂತೆ ಜಾಗ್ರತೆ. ಧನವ್ಯಯ ಆಗದಂತೆ ಆರೋಗ್ಯವನ್ನು ರಕ್ಷಿಸಿಕೊಳ್ಳಿ. ಉದ್ಯೋಗಕ್ಕೆ ಸಂಬಂಧಿಸಿದ ಶತ್ರುಗಳು ಹಿಮ್ಮೆಟ್ಟುವರು. ಲಾಭದ ವ್ಯವಹಾರದಲ್ಲಿ ಆಕಸ್ಮಿಕ ಶತ್ರು ಭಯವಿರುವುದು. ಶುಭಕಾರ್ಯಗಳ ಸುಖ, ಅಪಾಯಗಳ ಬಗ್ಗೆ ಜಾಗ್ರತೆ.

 • ಧನು : 

  ಜಲ ವಿದ್ಯುತ್ ಅಪಾಯಗಳಿಂದ ದೂರ ಸರಿಯಿರಿ. ಉದ್ಯೋಗದಲ್ಲಿ ಬುದ್ದಿವಂತಿಕೆಯಿಂದ ಸಮಸ್ಯೆಗಳನ್ನು ಎದುರಿಸಿ. ಸಂತೋಷದಿಂದ ಉದ್ಯೋಗದಲ್ಲಿ ನಿರತರಾಗಿ ಲಾಭವನ್ನು ಅನುಭವಿಸುವಿರಿ. ಕುಟುಂಬದ ಚಿಂತೆಯಿಂದ ಆರೋಗ್ಯವನ್ನು ನಿರ್ಲಕ್ಷಿಸದಿರಿ. ಪ್ರತಿಷ್ಠೆಗಾಗಿ ಸುಖದ ವಸ್ತುಗಳ ಖರೀದಿಯಿಂದ ಧನನಷ್ಟವಾದೀತು. ಮಿತ್ರನ ಸಹಾಯದಿಂದ ಸಂಪತ್ರು, ಅಭಿವೃದ್ಧಿ. ಶುಭಕಾರ್ಯಗಳು ಸಾಧ್ಯ.

 • ಮಕರ : 

  ಆಕಸ್ಮಿಕ ಅಪಕೀರ್ತಿ, ಅವಮಾನ ಆಯಾಸಗಳು ಸಾಧ್ಯ. ಜಾಗ್ರತೆಯಾಗಿ ವ್ಯವಹರಿಸಿ. ಸಂಶಯ ಜಗಳಕ್ಕೆ ಅವಕಾಶ ನೀಡದಿರಿ. ಧನನಷ್ಟವಾದೀತು. ಉದ್ಯೋಗ ಸುಖ, ಶುಭಕಾರ್ಯ, ಧನಸಂಗ್ರಹದ ಯೋಚನೆಗಳಿಂದ ಸುಖವನ್ನು ಅನುಭವಿಸುವಿರಿ. ಆಕಸ್ಮಿಕ ಮಿತ್ರನಿಂದ ಮೋಸಕ್ಕೆ ಒಳಗಾಗದಿರಿ. ಧಾರ್ಮಿಕ ಕಾರ್ಯಗಳಿಗೆ ಅಧಿಕ ವ್ಯಯದಿಂದ ಕಷ್ಟಕ್ಕೆ ಬಲಿಯಾಗದಿರಿ.

 • ಕುಂಭ : 

  ಶುಭಕಾರ್ಯ ಇಷ್ಟಾರ್ಥ ಸಿದ್ದಿ. ಬುದ್ದಿ ಸ್ಥಿರವಾಗಿರಲಿ. ಧಾರ್ಮಿಕ ಸಂಸ್ಥೆಗಳಲ್ಲಿ ಸ್ಥಾನ ಲಾಭ, ಸಂತೋಷ. ಆಗಾಗ ಲಾಭದ ಫಲಗಳನ್ನು ಅನುಭವಿಸುವಿರಿ. ಪ್ರವಾಸ ಸುಖ ಅನುಭವಿಸುವಿರಿ. ಮಹಾಕಾರ್ಯಗಳಲ್ಲಿ ವಾಹನ ವಸ್ತ್ರಾಭರಣಗಳಿಂದ ಅಪಜಯವಾಗದಂತೆ ಜಾಗ್ರತೆ.

 • ಮೀನ  :

  ಅಸ್ಥಿರ ಲಾಭದ ಯೋಚನೆಯಿಂದ ಹಿಂದೆ ಸರಿಯಿರಿ, ಅವಮಾನವಾದೀತು. ಮಹತ್ವಾಕಾಂಕ್ಷೆ ಯೋಚನೆಯಲ್ಲಿ ಕಲಹ ಹುಟ್ಟದಿರಲಿ. ವಿಹಾರದಲ್ಲಿ ಧನನಾಶವಾಗದಂತೆ ಜಾಗ್ರತೆ ಅಗತ್ಯ. ಇಷ್ಟ ಸಿದ್ದಿಸುವುದು. ವೈಯಕ್ತಿಕ ವಿಷಯಗಳಿಂದ ಕೀರ್ತಿ ಪಡೆಯುವಿರಿ. ದೈಹಿಕ ಪುಷ್ಠಿ, ಸ್ವಲಾಭದ ಫಲಗಳನ್ನು ಅನುಭವಿಸುವಿರಿ.
  .

Copy Protected by Chetan's WP-Copyprotect.