ವಾರ ಭವಿಷ್ಯ

  ಮೇ.6-8-2020 ರಿಂದ   ಮೇ. 12-8-2020 ರವರೆಗೆ

 • ಮೇಷ :

  ಸಾಹಸ ಪ್ರಯತ್ನ ವ್ಯಾಪಾರ ಗುಣಗಳಿಂದ ಯಶಸ್ಸು ಪಡೆಯುವಿರಿ. ತಲೆ ಕೊರೆಯುವ ವ್ಯವಹಾರದ ವಿಚಾರವನ್ನು ಹಚ್ಚಿಕೊಳ್ಳದಿರಿ. ಸುಖ ಸಂತೋಷ ಅನುಭವಿಸುವಿರಿ.

 •    ವೃಷಭ
  ವ್ಯಾಪಾರ ವ್ಯವಹಾರ ನಡೆಸುವ ಸಮಯದಲ್ಲಿ ಎಲ್ಲಾ ರೀತಿಯ ವರ್ತನೆಯು ನಾಜೂಕಾಗಿರಲಿ. ಪೂರ್ವದ ಶತ್ರುತ್ವ ಅಥವಾ ಸಂಶಯವನ್ನು ಕೆದಕುವುದು ಬೇಡ. ನಷ್ಟಗಳಿಗೆ ಅವಕಾಶವಿಲ್ಲದಿರಲಿ ಇಷ್ಟ ಸಿದ್ದಿಸುವುದು.

  ಮಿಥುನ :

  ಮಹತ್ವಾಕಾಂಕ್ಷೆಯ ಹೊಸ ವ್ಯವಹಾರಕ್ಕಾಗಿ ಆತುರ ಬೇಡ. ಸಂಪತ್ತಿನ ಕೊರತೆಯಾಗದು ಶಿಸ್ತು ಬದ್ಧವಾಗಿ ಇದ್ದು, ಆರೋಗ್ಯದ ಬಗ್ಗೆ ಜಾಗ್ರತೆ ಅಗತ್ಯ.

   

 • ಕರ್ಕಾಟಕ : 

  ಸಾಹಸ ಕಾರ್ಯಕ್ಕಾಗಿ ಅಧಿಕ ವ್ಯಯದಿಂದ ನಷ್ಟಸಾಧ್ಯ. ಅಪಾಯದ ಪರಿಸ್ಥಿತಿಗಳಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ. ಅನಿಷ್ಟ ಸಮಸ್ಯೆಗಳನ್ನು ಎದುರಿಸುವುದು ಅಗತ್ಯ.

 • ಸಿಂಹ : 

  ಧರ್ಮಕಾರ್ಯಗಳ ಬಗ್ಗೆ ನಿಮ್ಮ ನಿರ್ಧಾರವು ಧೃಢವಾಗಿರಲಿ. ಮನೆ, ವಾಹನ, ಭೂಮಿ, ವಸ್ತ್ರಾಭರಣಗಳ ಸುಖವನ್ನು ಅನುಭವಿಸುವಿರಿ. ಅಪಾಯದ ಸೂಚನೆಗಳನ್ನು ಗ್ರಹಿಸಿ ಜಾಗ್ರತರಾಗಿರಿ.

 • ಕನ್ಯಾ : 

  ಸುಖಕ್ಕೆ ಸಂಬಂಧಿಸಿದ ಯೋಜನೆಯಲ್ಲಿ ಸೋಲನ್ನೇ ಎದುರುಗೊಳ್ಳುವಿರಿ. ಸಂಶಯವು ನಿವಾರಣೆಯಾಗಿ ಗೆಲುವು ನಿಮ್ಮದಾಗುವುದು. ಕಲಹ ರಹಿತ ವ್ಯವಹಾರದಿಂದ ಪುಷ್ಠಿಗೊಳ್ಳುವಿರಿ.

  ತುಲಾ  :

 • ಮಿತ್ರನ ಮಾರ್ಗದರ್ಶನದಂತೆ ನಡೆದು ಭಾಗ್ಯವಂತರಾಗುವಿರಿ. ಉದ್ಯೋಗದಲ್ಲಿ ಮಿತ್ರನಿಂದಲೇ ದುಃಖವೂ ಎದುರಾದೀತು. ಎದೆಗುಂದದಿರಿ ಸುಖವನ್ನು ಅನುಭವಿಸುವಿರಿ.

 • ವೃಶ್ಚಿಕ :

  ಸಂಶಯದಿಂದ ಭಯಪಟ್ಟು ಕಲಹಕ್ಕೆ ಅವಕಾಶ ಆಗದಿರಲಿ. ಅಪಾಯವಿರುವ ವ್ಯಾಪಾರಕ್ಕೆ ವ್ಯಯ ಮಾಡಿ ನಷ್ಟ ಕಷ್ಟಗಳನ್ನು ಆಹ್ವಾನಿಸದಿರಿ. ವಿಘ್ನಗಳು ಬೆನ್ನ ಹಿಂದೆ ಇರುವುದರಿಂದ ಪ್ರಾಮಾಣಿಕರಾಗಿ ವ್ಯವಹರಿಸಿ.

 • ಧನು : 

  ಋಣಾತ್ಮಕವಾಗಿ ಚಿಂತಿಸುವುದರಿಂದ ಮನಸ್ಸು ದುರ್ಬಲವಾಗುವುದು ಭಯ ಹುಟ್ಟುವುದು. ಪ್ರಯತ್ನದಿಂದ ಜಯವನ್ನು ಸಾಧಿಸುವಿರಿ. ಸಮಸ್ಯೆಯನ್ನು ಎಳೆದುಕೊಳ್ಳದಿರಿ. ಸಂತಾನ ಸುಖವಿರುವುದು.

 • ಮಕರ : 

  ಅಮೂಲ್ಯ ವಸ್ತುಗಳ ಬಗ್ಗೆ ಜಾಗ್ರತೆ ಅಗತ್ಯ. ಉದ್ಯೋಗ ಸುಖವನ್ನು ಅನುಭವಿಸುವಿರಿ. ಅತಿ ಬುದ್ದಿವಂತಿಕೆಯಿಂದ ಅನಿಷ್ಟ ಸಾಧ್ಯ. ಮನೆ, ವಾಹನ, ಭೂಮಿಗಳಿಗೆ ವ್ಯಯದಲ್ಲಿ ಅಧಿಕ ಸಾಲ ಮಾಡದಿರಿ.

 • ಕುಂಭ : 

  ಸಾಧನೆಯ ಫಲವಾಗಿ ಭೋಗ ಜೀವನ ನಿಮ್ಮದಾಗುವುದು. ಅಧಮ ಉತ್ತಮ ಕೆಲಸಗಳ ಬಗ್ಗೆ ಬುದ್ಧಿವಂತಿಕೆಯಿರಲಿ. ಸೋಲುಗಳನ್ನು ಎದುರಿಸಿ ಸಂತೋಷವನ್ನು ಅನುಭವಿಸುವಿರಿ.

 • ಮೀನ  :

  ವ್ಯಾಪಾರ ಗುಣದಿಂದ ಮನೆಯ ಶಾಂತಿ ಕೆಡದಂತಿರಲಿ. ಕಲಹಗಳಿಗೆ ಅವಕಾಶ ಇಲ್ಲದಿರಲಿ. ಶಿಸ್ತಿನ ಕೆಲಸದಿಂದ ಮಾತ್ರ ಇಷ್ಟಾರ್ಥ ಸಿದ್ಧಿ, ಖರ್ಚು ವೆಚ್ಚಗಳಲ್ಲಿ ಮಿತಿಯಿರಲಿ.

Copy Protected by Chetan's WP-Copyprotect.