ಕಾಶಿಪಟ್ಣ ಕೇಳ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಲಕ್ಷಾರ್ಚನೆ

Kasipatna karthika deepostavaಕಾಶಿಪಟ್ಣ: ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಗ್ರಾಮದ ಕೇಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷಾರ್ಚನೆ ಹಾಗೂ ಕಾರ್ತಿಕ ದೀಪೋತ್ಸವವು ನ. 6 ರಂದು ವಿಜೃಂಭಣೆಯಿಂದ ನೆರವೇರಿತು. ಧಾರ್ಮಿಕ ಸಭಾಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕಾಶಿಪಟ್ಣ ಗ್ರಾ.ಪಂ ಅಧ್ಯಕ್ಷ ಸತೀಶ್ ಕೆ ವಹಿಸಿದರು. ಸಭೆಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕರಾದ ವೇದಮೂರ್ತಿ ಮತ್ತು ಅನಂತ ಪದ್ಮನಾಭ ಅಶ್ರಣ್ಣರು ತಮ್ಮ ಆಶೀರ್ವಚನದಲ್ಲಿ ದೀಪವು ಬೆಳಗಿಸಿ ಕತ್ತಲನ್ನು ಹೊಗಲಾಡಿಸುವಲ್ಲಿ ಎಣ್ಣೆ ಮತ್ತು ಬತ್ತಿಯು ಹೇಗೆ ಮಿತ್ರತ್ವವನ್ನು ಹೊಂದಿರುತ್ತದೆಯೂ ಹಾಗೆಯೇ ಮನುಷ್ಯರು ಪರಪ್ಪರ ಸ್ನೇಹತ್ವ, ಐಕ್ಯತೆದಿಂದ ಬದುಕಬೇಕು, ಕಲಿಯುಗದಲ್ಲಿ ಶ್ರೇಯಸ್ಸಿಗೆ ಸಾಂಗಿಕ ಶಕ್ತಿ ಮುಖ್ಯ ಎಂದರು. ಮುಖ್ಯ ಅತಿಥಿಗಳಾಗಿ ಕೃಷ್ಣ ಭಟ್ ಕಾಂತಜೆ, ಶ್ರೀನಿವಾಸ ಕಿಣಿ ನಾರಾವಿ, ನಾಗೇಶ್ ಬಿ ಶೆಟ್ಟಿ ಮೂಡಬಿದ್ರೆ ಇವರು ಭಾಗವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಯರಾದ ಪ್ರಕಾಶ್ ನಾವೂರ ಹಾಗೂ ಯಕ್ಷಗಾನ ಕಲಾವಿದ ಕುಮಾರ ಗೌಡ ಇವರನ್ನು ಸಮ್ಮಾನಿಸಲಾಯಿತು. ಪೆರಾಡಿಯ ದೀವಿತ್ ಶ್ರೀಧರ ಕೋಟ್ಯಾನ್ ಇವರಿಂದ ಏಕವ್ಯಕ್ತಿ ಯಕ್ಷಗಾನ ಪ್ರಯೋಗ ನೆರವೇರಿತು. ನಂತರ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೊಡುವಿಕೆಯಿಂದ ಚಂದ್ರಾವಳಿ ವಿಲಾಸ ಎಂಬ ಯಕ್ಷಗಾನ ನಡೆಯಿತು. ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಮೋಕ್ತಸರರಾದ ಆನಂತ ಆಶ್ರಣ್ಣ ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಊರಿನ ಹಿರಿಯರಾದ ನಾರಾಯಣ ಭಟ್ ಕೇಳ ಹಾಗೂ ವಿಕ್ರಮ್ ಕುಮಾರ್ ಕೇಳ ಅರಮನೆ ಉಪಸ್ಥಿತರಿದ್ದರು. ಶಂಕರ ಭಟ್ ಬಾಲ್ಯ ಸ್ವಾಗತಿಸಿ ಕರುಣಾಕರ ಸುವರ್ಣ ವಂದಿಸಿ ವಿಶುಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.