ವೇಣೂರು ಬಾಹುಬಲಿ ಮೂರ್ತಿಗೆ ಪಾದಾಭಿಷೇಕ

venur padha poojeವೇಣೂರು: ರಾಜ್ಯದ ಕ್ರಾಂತಿಕಾರಿ ಸಂತ ೧೦೮ ಮುನಿಶ್ರೀ ಪ್ರಸಂಗಸಾಗರ ಮಹಾರಾಜರ ಚಾತುರ್ಮಾಸ್ಯದ ಪ್ರಯುಕ್ತ ಅ.31ರಂದು ಶ್ರೀ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ ನೆರವೇರಿತು.
ಮೂಡಬಿದಿರೆ ಜೈನ ಮಠದ ಭಾರತಭೂಷಣ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ| ಪದ್ಮಪ್ರಸಾದ್ ಅಜಿಲ ಉಪಸ್ಥಿತರಿದ್ದರು. ಸೇವಾಕರ್ತರಾದ ಡಾ| ಬಿ.ಪಿ. ಇಂದ್ರ ಮತ್ತು ಮಕ್ಕಳು ಬಾಹುಬಲಿ ಸ್ವಾಮಿಯ ಪಾದಪೂಜೆ ನೆರವೇರಿಸಿದರು. ಚಾತುರ್ಮಾಸ್ಯ ವ್ಯವಸ್ಥಾಪನ ಸಮಿತಿ ಪದಾಧಿಕಾರಿಗಳು ಹಾಗೂ ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದರು. ಚಾತುರ್ಮಾಸ್ಯದ ಸಮಾರೋಪ ಸಮಾರಂಭ ಜರಗಲಿದೆ. ಚಿತ್ರ: ರಾಜ್ ಸ್ಟುಡಿಯೋ, ವೇಣೂರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.