ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿಯಲ್ಲಿ ಭಜನಾ ಸಪ್ತಾಹ ಭಜನೆಯಿಂದ ದುಷ್ಟ ಶಕ್ತಿಗಳ ನಿಗ್ರಹ : ಸ್ವಾಮೀಜಿ

Macchina bajana sapthahaಮಚ್ಚಿನ : ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ ಬಳ್ಳಮಂಜ ಇದರ 40ನೇ ವರ್ಷದ ಭಜನಾ ಸಪ್ತಾಹವು ಅ. 28ರಿಂದ ನ. 4ರವರೆಗೆ ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿ, ಪ್ರತಿ ಮನೆಯಲ್ಲಿ ಭಜನೆಯನ್ನು ಮಾಡಿದರೆ ಮನೆಯಲ್ಲಿರುವ ದುಷ್ಟ ಶಕ್ತಿಗಳನ್ನು ದೂರ ಮಾಡಲು ಸಾಧ್ಯ. ನಮ್ಮ ಭಾಷೆ, ಸಂಸ್ಕೃತಿಗೆ ನಾಡಿನೆಲ್ಲೆಡೆ ಗೌರವವಿದೆ. ವಿದೇಶಿಯರು ನಮ್ಮ ಸಂಸ್ಕೃತಿಯತ್ತ ವಾಲುತ್ತಿದ್ದಾರೆ. ಆದರೆ ನಾವು ವಿದೇಶಿಗರ ವೇಷಭೂಷಣಕ್ಕೆ ಮಾರು ಹೋಗುತ್ತಿದ್ದೇವೆ ಎಂದರು. ಅಧ್ಯಕ್ಷತೆಯನ್ನು ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಧರಣೇಂದ್ರ ಜೈನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರ ಬಳ್ಳಮಂಜದ ಅನುವಂಶಿಯ ಆಡಳಿತ ಮೊಕ್ತೇಸರ ಡಾ| ಎಂ. ಹರ್ಷ ಸಂಪಿಗೆತ್ತಾಯ, ಅರ್ಚಕ ನಾರಾಯಣ ಪುತ್ರಯಾ, ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ ಅಧ್ಯಕ್ಷ ರಾಜೇಶ್ ಕುಲಾಲ್ ಉಪಸ್ಥಿತರಿದ್ದರು. ಹರೀಶ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಪುಷ್ಪಕ್ ವರದಿ ವಾಚಿಸಿ, ಬಾಲಕೃಷ್ಣ ಭಟ್ ನಿರೂಪಿಸಿ, ಕಿಶೋರ್ ಧನ್ಯವಾವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.