ಫ್ರೆಂಡ್ಸ್ ಮಡಂತ್ಯಾರು ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮುಕ್ತ ಕೆಸರುಗದ್ದೆ ಹಗ್ಗಜಗ್ಗಾಟ

kesar 1ಫ್ರೆಂಡ್ಸ್ ಮಡಂತ್ಯಾರು ತಂಡದಲ್ಲಿ ಎಲ್ಲ ಜಾತಿ ಮತ್ತು ವಯೋಮಾನದ ಜನರು ಬಹಳ ಸಂಘಟಿತವಾಗಿ ಕೆಲಸ ಮಾಡುತ್ತಿದ್ದು, ಈ ಸಂಘಟನೆ ಕೇವಲ ಕ್ರೀಡೆಗೆ ಮಾತ್ರ ಮೀಸಲಾಗಿರದೆ ಮಡಂತ್ಯಾರಿನ ಎಲ್ಲ ಸಮಾಜಮುಖಿಃ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಗುರುತಿಸಿಕೊಂಡು ಮಡಂತ್ಯಾರಿನ ಹೆಮ್ಮೆಯನ್ನು ಎಲ್ಲ ರಂಗದಲ್ಲೂ ಎತ್ತಿಹಿಡಿಯಬೇಕು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಈ ಕ್ರೀಡೆ ಹಮ್ಮಿಕೊಂಡಿರುವುದು ಸಂತೋಷ ತಂದಿದೆ.
-ಕಾರ್ಯಕ್ರಮ ಉದ್ಘಾಟಕ ಉದ್ಯಮಿ ಜಯಂತ ಶೆಟ್ಟಿ ಮಡಂತ್ಯಾರು.

ಫ್ರೆಂಡ್ಸ್ ಮಡಂತ್ಯಾರು ತಮ್ಮ ಸಂಘಟನೆಯ ಮೂಲಕ ಎಲ್ಲ ಪ್ರಾಯದ ಜನರನ್ನೂ ಸಮಾನ ವಾಗಿ ಹೊಂದಿದ್ದು, ಜಾತಿ, ಮತ, ಧರ್ಮದ ವ್ಯತ್ಯಾಸವಿಲ್ಲದೆ ಮಡಂತ್ಯಾರಿನಲ್ಲಿ ಕ್ರೀಡಾ ಜಗತ್ತನ್ನು ಸೃಷ್ಟಿಸಿದೆ. ಕೆಲ ವರ್ಷಗಳ ವಿರಾಮ ನೀಡಿದರೂ ಮತ್ತೆ ಈ ಹಗ್ಗ ಜಗ್ಗಾಟ ಪಂದ್ಯಾಟ ಏರ್ಪಡಿ ಸುವ ಮೂಲಕ ಮತ್ತೊಮ್ಮೆ ಕಾರ್ಯಚಟುವಟಿಕೆಗೆ ಚಾಲನೆ ನೀಡಿದೆ. ಕಾರ್ಯಕ್ರಮದ ಜೊತೆಗೆ ನಾವು ಸ್ವಚ್ಚತೆಯ ಬಗ್ಗೆಯೂ ಆದ್ಯತೆ ನೀಡಬೇಕಾಗಿದೆ. ಇಲ್ಲಿ ಕಾರ್ಯಕ್ರಮ ನಡೆದು ಮುಗಿದ ಬಳಿಕ ಸ್ಥಳವನ್ನು ಸದಸ್ಯರಾದ ನೀವೇ ಸ್ವಚ್ಚಗೊಳಿಸಿ ಮಾದರಿಯಾಗಬೇಕು.
-ದ.ಕ. ಜಿಲ್ಲಾ ಕಂಬಳ ಸಮಿತಿ ತೀರ್ಪುಗಾರ ರಾಜೀವ ಶೆಟ್ಟಿ ಎಡ್ತೂರು.

ಮಡಂತ್ಯಾರು : ಫ್ರೆಂಡ್ಸ್ ಮಡಂತ್ಯಾರು ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ 7 ನೇ ವರ್ಷದ ಪುರುಷರ 550 ಕೆ.ಜಿ. ವಿಭಾಗದ ಮುಕ್ತ ಕೆಸರುಗದ್ದೆ ಹಗ್ಗಜಗ್ಗಾಟ ಸ್ಪರ್ಧೆ ನ. 5 ರಂದು ಮಡಂತ್ಯಾರು ಕಾಲೇಜು ರಸ್ತೆಯ ಕೊರೆಯ ಕಂಪೌಂಡ್‌ನಲ್ಲಿ ವಿಜೃಂಭಣೆಯಿಂದ ಜರುಗಿತು.
ಪಂದ್ಯಾಟವನ್ನು ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಉದ್ಘಾಟಿಸಿದರು. ಫ್ರೆಂಡ್ಸ್ ಮಡಂತ್ಯಾರು ಅಧ್ಯಕ್ಷ ರೋಶನ್ ಸೇರಾ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿದ್ದ ಉದ್ಯಮಿ. ಎಂ.ಆರ್. ಸುಪಾರಿ ಟ್ರೇಡರ್‍ಸ್ ಮಾಲಿಕ ಹೈದರ್, ಮಡಂತ್ಯಾರು ಗ್ರಾ.ಪಂ ಅಧ್ಯಕ್ಷ ಗೋಪಾಲಕೃಷ್ಣ ಕೆ. ಶುಭ ಕೋರಿದರು. ವೇದಿಕೆಯಲ್ಲಿ ಮಡಂತ್ಯಾರು ಉತ್ತಮ್ ಕ್ರಿಕೆಟರ್‍ಸ್‌ನ ಪುರುಷೋತ್ತಮ ಶೆಟ್ಟಿ, ತಾ.ಪಂ. ಮಾಜಿ ಸದಸ್ಯ ವಿನ್ಸೆಂಟ್ ಡಿಸೋಜಾ, ಸರಕು ಸಾಗಾಟ ವಾಹನ ಮಾಲಕ ಬಶೀರ್, ಮಂಗಳೂರು ರೊಸಾರಿಯೋ ಹೈಸ್ಕೂಲ್ ಶಿಕ್ಷಕ ರೋಶನ್ ಲೋಬೋ, ಮಚ್ಚಿನ ವಿ.ಎ. ಸಹಾಯಕ ಸದಾಶಿವ, ಮಡಂತ್ಯಾರಿನ ಉದ್ಯಮಿ ಮೇಕ್ಸಿಂ ಕೊರೆಯ, ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಸಂಚಾಲಕ ಫ್ರಾನ್ಸಿಸ್ ವಿ.ವಿ, ಫ್ರೆಂಡ್ಸ್ ಮಡಂತ್ಯಾರು ಗೌರವಾಧ್ಯಕ್ಷ ರಫಾಯಲ್ ಡಿಸೋಜಾ, ಕಾರ್ಯದರ್ಶಿ ವಲೇರಿಯನ್ ಮೋರಾಸ್, ಕೋಶಾಧಿಕಾರಿ ಸತೀಶ ಪೂಜಾರಿ ಇವರುಗಳು ಉಪಸ್ಥಿತರಿದ್ದರು. ಫ್ರೆಂಡ್ಸ್ ಮಡಂತ್ಯಾರು ಇದರ ಸದಸ್ಯ ಬ್ಲೇನಿ ಡಿಸೋಜಾ ಸಹಿತ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದು ಸಹಕಾರ ನೀಡಿದರು.
ಕೆಸರುಗದ್ದೆ ಕ್ರೀಡಾಂಗಣವನ್ನು ರೋಬರ್ಟ್ ಡಿಸೋಜಾ ಒಲಂಪಿಯಾ ಮಡಂತ್ಯಾರು ಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು.
ಶಿಕ್ಷಕ ರೋಶನ್ ಲೋಬೋ ಕಾರ್ಯಕ್ರಮ ನಿರೂಪಿಸಿ, ಗೌರವ ಸಲಹೆಗಾರ, ಮಡಂತ್ಯಾರು ಗ್ರಾ.ಪಂ. ಸದಸ್ಯ ಅಬ್ದುಲ್ ರಹಿಮಾನ್ ಪಡ್ಪು ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.