ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘ ಅಂತರ್ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟನೆ

naike seva sangada samudaya bhavana udhgataneಬೆಳ್ತಂಗಡಿ : ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್, ಟಿ.ವಿ ಪ್ರಭಾವದಿಂದಾಗಿ ಕ್ರೀಡೆಗಳು ಮಾಯವಾಗುತ್ತಿದ್ದು ಇದಕ್ಕೆ ಇಂದು ನಲಿಕೆ ಸಮುದಾಯ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ. ಜೊತೆಗೆ ನಲಿಕೆ ಸಮಾಜಭಾಂದವರು ದೈವಾರಾಧನೆ ವೃತ್ತಿಯೊಂದಿಗೆ ಶಿಕ್ಷಣಕ್ಕೆ ಆದ್ಯತೆ ನೀಡಿ ಸಮಾಜದಲ್ಲಿ ಗೌರವ ಸ್ಥಾನಮಾನ ಗಳಿಸಬೇಕು ಎಂದು ಸುಳ್ಯ ಕಲ್ಮಡ್ಕ ಸ.ಹಿ.ಪ್ರಾ.ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ವಜ್ರಾಕ್ಷಿ ಎಂ. ಹೇಳಿದರು.
ಅವರು ನ.5 ರಂದು ಗುರುವಾಯನಕೆರೆ ಪಣೆಜಾಲು ನಲಿಕೆಯವರ ಸಮುದಾಯ ಭವನದ, ಶ್ರೀ ಗುರು ಉಳ್ಳಾಲ್ತಿ ಕ್ರಿಡಾಂಗಣ ಬಳಿ ನಲಿಕೆಯವರ ಸಮಾಜ ಸೇವಾ ಸಂಘ ಬೆಳ್ತಂಗಡಿ ತಾಲೂಕು ಇದರ ನೂತನ ಸಮುದಾಯ ಭವನದ ಉದ್ಘಾಟನಾ ಸಮಾರಂಭದ ನಿಮಿತ್ತ ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘದ ವತಿಯಿಂದ ನಡೆದ ಸ್ವಜಾತಿ ಭಾಂದವರ ಅಂತರ್ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ್ ಬಳಂಜ ಮುಖ್ಯ ಅತಿಥಿಗಳಾಗಿ ಮಾತನಾಡಿ ಧಾರ್ಮಿಕ ನಂಬಿಕೆಯುಳ್ಳ ನಲಿಕೆ ಸಮುದಾಯವು ಸಮಾಜದಲ್ಲಿ ಹೆಚ್ಚು ಗೌರವ ಸ್ಥಾನವನ್ನು ಪಡೆದಿದೆ. ಇಂದು ಬೆಳ್ತಂಗಡಿ ತಾಲೂಕಿನಲ್ಲಿ ರಾಜ್ಯಕ್ಕೆ ಮಾದರಿಯಾಗುವಂತೆ ಸಮುದಾಯ ಭವನವನ್ನು ನಿರ್ಮಿಸಿದ್ದು ಇದು ತಾಲೂಕಿಗೂ ಹೆಮ್ಮೆಯ ವಿಷಯವಾಗಿದೆ. ತಾಲೂಕಿನ ನಲಿಕೆ ಸಮಾಜದ ಸಾಧನೆಯನ್ನು ಇತರ ತಾಲೂಕಿನ ನಲಿಕೆ ಸಮುದಾಯ ಅನುಸರಿಸಿ ಪ್ರತೀ ತಾಲೂಕಿನಲ್ಲಿ ಇಂತಹ ಸಮುದಾಯ ಭವನ ನಿರ್ಮಾಣಗೊಳ್ಳಲಿ ಇದಕ್ಕೆ ಸಮಾಜದ ಅನೇಕ ಬಂದುಗಳು ಶ್ರಮದಾನ ನಡೆಸಿರುವ ವಿಷಯ ಅತೀವ ಸಂತೋಷವನ್ನುಂಟು ಮಾಡಿದ್ದು ಇವರು ಇತರರಿಗೆ ಮಾರ್ಗದರ್ಶಕ ರಾಗಿದ್ದಾರೆ ಎಂದರು. ತಾಲೂಕು ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ನಲಿಕೆ ಮಾತನಾಡಿ ಶಾಸಕರ ಹಾಗೂ ಇತರ ಜನಪ್ರತಿನಿಧಿಗಳ ಹಾಗೂ ಸಮಾಜದ ಹಾಗೂ ನಲಿಕೆ ಸಮಾಜದ ಸಹಕಾರದಿಂದ ಈ ಸಮುದಾಯ ಭವನ ನಿರ್ಮಾಣಗೊಂಡಿದ್ದು ಡಿಸೆಂಬರ್ ತಿಂಗಳಲ್ಲಿ ಈ ಸಮುದಾಯ ಭವನವನ್ನು ಉದ್ಘಾಟಿಸಲಾಗುವುದು ಎಂದರು. ನಲಿಕೆ ಸಮಾಜ ಸೇವಾ ಸಂಘದ ಯುವ ವೇದಿಕೆ ಅಧ್ಯಕ್ಷ ಹರೀಶ್ ನಾವೂರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಲಿಕೆ ಸಮಾಜಸೇವಾ ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷ ರಮೇಶ್ ಕಡಂಬು, ಮಡಿಕೇರಿ ಅಜಿಲ ಯಾನೆ ನಲಿಕೆ ಸಮಾಜದ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ಕೆ. ಕೊಯಿನಾಡು, ಬೆಳ್ತಂಗಡಿ ತಾಲೂಕು ನಲಿಕೆ ಸಮಾಜ ಸೇವಾ ಸಂಘದ ಮಹಿಳಾ ವೇದಿಕೆ ಅಧ್ಯಕ್ಷೆ ಜಯಂತಿ ಗೋಪಾಲ ಉಪಸ್ಥಿತರಿದ್ದರು. ಶಿಕ್ಷಕ ರಮೇಶ್ ಬಿ.ಕೆ ಗೇರುಕಟ್ಟೆ ಸ್ವಾಗತಿಸಿ ತಾಲೂಕು ಯುವ ವೇದಿಕೆಯ ಕಾರ್ಯದರ್ಶಿ ರಮೇಶ್ ಕೇಳ್ತಾಜೆ ವಂದಿಸಿದರು. ಸುಬ್ರಯ ಕಲ್ಮಂಜ ಕಾರ್ಯಕ್ರಮ ನಿರೂಪಿಸಿದರು. ಮಹಿಳೆಯರಿಗೆ ತ್ರೋಬಾಲ್, ಹಗ್ಗಜಗ್ಗಾಟ, ಗುಂಡೆಸೆತ ಹಾಗೂ ಬಾಲಕ ಬಾಲಕಿಯರಿಗೆ ಕಬಡ್ಡಿ, ಲಕ್ಕಿ ಗೇಮ್, ತ್ರೋಬಾಲ್ ಸ್ಪರ್ಧೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.