ಪಡಂಗಡಿ : ಬೈಕ್‌ಗೆ ಪಿಕಪ್ ಡಿಕ್ಕಿ – ಗಾಯ

venur

venur1ಪಡಂಗಡಿ : ರಾಜ್ಯ ಹೆದ್ದಾರಿ 70ರ ಪಡಂಗಡಿ ಬಳಿ ಇಂದು(ನ.06) ಬೆಳಿಗ್ಗೆ 9.30ರ ಸುಮಾರಿಗೆ ಬೈಕ್‌ಗೆ ಪಿಕಪ್ ವಾಹನ ಡಿಕ್ಕಿ ಹೊಡೆದ ಘಟನೆ ಸಂಭವಿಸಿದ್ದು, ಸವಾರ ಗಾಯಗೊಂಡಿದ್ದಾರೆ.
ಬೈಕ್ ಸವಾರ ವೇಣೂರು ಕಡೆಗೆ ತೆರಳುತ್ತಿದ್ದ ವೇಳೆ ವೇಣೂರು ಕಡೆಯಿಂದ ಬಂದ ಪಿಕಪ್(ಕೆಎ 19 ಎಎ9443) ಪಡಂಗಡಿ ಬಳಿ ಚಾಲಕ ಪಿಕಪ್‌ನ್ನು ಏಕಾಏಕಿ ಬಲ ಬದಿಗೆ ತಿರುಗಿಸಿದ್ದು, ಈ ವೇಳೆ ಎದುರಿನಿಂದ ಬಂದ ಬೈಕ್‌ಗೆ ಪಿಕಪ್ ವಾಹನ ಡಿಕ್ಕಿ ಹೊಡೆಯಿತು ಎನ್ನಲಾಗಿದೆ.
ಘಟನೆಯಲ್ಲಿ ಬೈಕ್ ಜಖಂ ಗೊಂಡಿದ್ದು, ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಕಪ್ ಚಾಲಕನ ನಿರ್ಲಕ್ಷವೇ ಘಟನೆಗೆ ಕಾರಣವೆನ್ನಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.