ರಾಷ್ಟ್ರ ರಾಜಧಾನಿಯಲ್ಲಿ ಉಜಿರೆ ತಂಡದ ನೃತ್ಯ ಪ್ರದರ್ಶನ

Ujire vani nruthya kala kendraಉಜಿರೆ : ನವದೆಹಲಿಯ ಅಖಿಲ ಭಾರತ ಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಸಮಿತಿ ಆಹ್ವಾನದ ಮೇರೆಗೆ ಉಜಿರೆ ಮತ್ತು ಧರ್ಮಸ್ಥಳದ ಶ್ರೀ ವಾಣಿ ನೃತ್ಯ ಕಲಾಕೇಂದ್ರದ ವಿದ್ಯಾರ್ಥಿಗಳು ನೃತ್ಯ ವಿದುಷಿ ಶಾಂತಾ ಪಡ್ವೆಟ್ನಾಯ ಅವರ ನೇತೃತ್ವದಲ್ಲಿ ಅ. 1ರಂದು ನವದೆಹಲಿಯ ಕನ್ನಡ ಕಲಾ ಸಂಘದ ಸಭಾಂಗಣದಲ್ಲಿ ನೃತ್ಯ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಹಾಗೂ ಮುಕ್ತಕಂಠದ ಪ್ರಶಂಸೆಗೆ ಪಾತ್ರರಾದರು. ಶ್ರೀ ವಾಣಿ ನೃತ್ಯ ಕಲಾಕೇಂದ್ರದ ಶಿಷ್ಯೆಯರಾದ ಸಿಂಚನಾ, ವರ್ಷಿತಾ, ಕೃತಿ, ಶ್ರೀಕಾಂತ್, ಬೇಬಿ ತನ್ವಿ, ಶ್ರವಣ್, ಪ್ರಹತಿ, ಚಿನ್ಮಯಿ, ಶ್ರೇಯಾ ಉಪಾಧ್ಯಾಯ, ನಿಶ್ಮಿತಾ, ಸೌಜನ್ಯ ವಿ. ಪಡ್ವೆಟ್ನಾಯ, ವಿಂದ್ಯಾಲಕ್ಷ್ಮೀಶ್ ಮೊದಲಾದವರು ನೃತ್ಯ ಪ್ರದರ್ಶನ ನೀಡಿದ್ದಾರೆ. ಸಮಾರಂಭದಲ್ಲಿ ಶ್ರೀ ವಾಣಿ ನೃತ್ಯ ಕಲಾ ಕೇಂದ್ರದ ನೃತ್ಯ ಶಿಕ್ಷಕಿ ವಿದುಷಿ ಶಾಂತಾ ಪಡ್ವೆಟ್ನಾಯರನ್ನು ಗಣ್ಯ ಅತಿಥಿಗಳು ರಾಷ್ಟ್ರೀಯ ನಾಟ್ಯಕಲಾ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.