ನೇತ್ರಾವತಿ -ಶರಾವತಿ ಹೊನಲು ಬೆಳಕಿನ ಜೋಡುಕರೆ ಕಂಬಳ

Nethravathi kambalaಇಂದಬೆಟ್ಟು : ಕಳೆದ 9 ವರ್ಷಗಳಿಂದ ಕಾರಣಾಂತರಗಳಿಂದ ನಿಂತು ಹೋಗಿದ್ದ ನೇತ್ರಾವತಿ- ಶರಾವತಿ ಜೋಡುಕರೆ ಕಂಬಳವನ್ನು ಊರವರ ಒತ್ತಾಸೆ ಮತ್ತು ಕಂಬಳಾಭಿಮಾನಿಗಳ ಸಹಕಾರದೊಂದಿಗೆ ಮತ್ತೆ ಪ್ರಾರಂಭಿಸುವ ಇಚ್ಚೆಯಂತೆ ಅ. 29 ರಂದು ಬೆಳ್ಳೂರುಬೈಲು-ಇಂದಬೆಟ್ಟು-ಕಡಿರುದ್ಯಾವರದ ನೇತ್ರಾವತಿ ನದಿ ಕಿನಾರೆಯ ವಿಶಾಲ ಕಂಬಳ ಕ್ರೀಡಾಂಗಣದಲ್ಲಿ ನೇತ್ರಾವತಿ- ಶರಾವತಿ ಜೋಡುಕರೆ ಕಂಬಳ ಆಯೋಜಿಸಲಾಗಿತ್ತು. ಸುದೀಶ್ ಕುಮಾರ್ ಆರಿಗ ಕಂಬಳದ ಉದ್ಘಾಟನೆ ನೆರವೇರಿಸಿದರು.
ಕಳೆದ 9 ವರ್ಷಗಳಿಂದ ನಿಂತುಹೋಗಿದ್ದ ನೇತ್ರಾವತಿ ಶರಾವತಿ ಕಂಬಳಕ್ಕೆ ಮರುಜೀವ ಕೊಟ್ಟ ಕಂಬಳ ಸಮಿತಿ ಗೌರವಾಧ್ಯಕ್ಷರೂ ಆಗಿರುವ, ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್ ಜಿ. ಗೌಡ ಅಧ್ಯಕ್ಷತೆಯೊಂದಿಗೆ ಸಂಪೂರ್ಣ ನೇತೃತ್ವ ವಹಿಸಿದ್ದರು.
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಕಂಬಳ ಸಮಿತಿ ಪ್ರ. ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಬ್ರಿಜೇಶ್ ಚೌಟ, ಮಂಗಳೂರು ಕ್ಷೇತ್ರದ ಕಾರ್ಯಾಧ್ಯಕ್ಷ ನಿತಿನ್ ಶೆಟ್ಟಿ ಅಗರಿ ಕಾಂತಾಡಿಗುತ್ತು, ಬಿಜೆಪಿ ಉಪಾಧ್ಯಕ್ಷ ವಿಜಯಗೌಡ ವೇಣೂರು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಅಲ್ಪಸಂಖ್ಯಾತರ ಮೋರ್ಚಾದ ಜಿಲ್ಲಾಧ್ಯಕ್ಷ ಜೋಯನಾಥ್ ಡಿಸೋಜಾ, ಒಬಿಸಿ ರಾಜ್ಯ ಪ್ರ. ಕಾರ್ಯದರ್ಶಿ ರವಿಚಂದ್ರ, ಬಿಜೆಪಿ ತಾ. ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಕಡಿರುದ್ಯಾವರ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಕಿಶೋರ್ ಕುಮಾರ್ ವಳಂಬ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್ ಬಂಗಾಡಿ, ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಹರೀಶ್ ಮೋರ್ತಾಜೆ ನಾವೂರು, ಧಾರ್ಮಿಕ ಧತ್ತಿ ಇಲಾಖೆ ನಾಮನಿರ್ದೇಶಿತ ಸದಸ್ಯ ಮುಕುಂದ ಸುವರ್ಣ, ತಾ.ಪಂ. ಸದಸ್ಯರಾದ ಶಶಿಧರ ಎಂ. ಕಲ್ಮಂಜ, ಲಕ್ಷ್ಮೀನಾರಾಯಣ ಕೊಕ್ಕಡ, ಮಾಜಿ ಸದಸ್ಯೆ ಸುಗುಣಾ, ಲಯನ್ಸ್ ಕ್ಲಬ್ ಮಾಧ್ಯಮ ಕಾರ್ಯದರ್ಶಿ ಲ| ಅಶ್ರಫ್ ಆಲಿಕುಂಞಿ ಮುಂಡಾಜೆ, ಇಂದಬೆಟ್ಟು ಗ್ರಾ.ಪಂ. ಸದಸ್ಯರಾದ ಪಳನಿ ಸ್ವಾಮಿ, ವಿಜಯ ಗೌಡ ಕಾಡುಮನೆ, ಮೋಹನ ಗೌಡ ಬಾಯ್ತ್ಯಾರು, ಕಡಿರುದ್ಯಾವರ ಗ್ರಾ.ಪಂ. ಸದಸ್ಯೆ ರೇಣುಕಾ, ಲಾಯಿಲ ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ಮಲ್ಲಿಗೆಮನೆ ಕಾಸಿಂ ಸಾಹೇಬ್, ಉಜಿರೆ ಸುಹಾನಾ ಐಸ್‌ಕ್ರೀಂನ ಮಾಲಕ ಸತೀಶ್ ಬೆದ್ರಬೆಟ್ಟು, ನಾವೂರ ಶ್ರೀ ದುರ್ಗಾ ಕನ್ಸ್ಟ್ರಕ್ಷನ್ಸ್ ಮಾಲಿಕ ಶ್ರೀನಿವಾಸ್ ಗುಡಿಗಾರ್, ಉದ್ಯಮಿಗಳಾದ ಅಜಯ್ ಎ. ಜೆ, ಮಾಜಿ ತಾ.ಪಂ.ಸ. ಚಂದು ಎಲ್, ಜಿ.ಪಂ. ಸದಸ್ಯ ಶೇಖರ್ ಕುಕ್ಕೇಡಿ, ಧರ್ಮಜಾಗರಣ ವಿಭಾಗದ ದಿನಕರ ಆದೇಲು, ಬಿಜೆಪಿ ಸಾಮಾಜಿಕ ಜಾಲತಾಣ ಮುಖ್ಯಸ್ಥ ವಿಜಯ ಅತ್ತಾಜೆ, ಕಣಿಯೂರು ಗ್ರಾ.ಪಂ. ಅಧ್ಯಕ್ಷ ಸುನಿಲ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಸನ್ಮಾನ: ಗೌರವಾರ್ಪಣೆ:
ಸಂಜೆ ನಡೆದ ಸಭಾ ಕಾರ್ಯಕ್ರಮದ ವೇಳೆ ಕಂಬಳ ಸಮಿತಿ ಗೌರವಾಧ್ಯಕ್ಷ ರಂಜನ್ ಜಿ. ಗೌಡ, ಅಧ್ಯಕ್ಷ ಕೃಷ್ಣ ಗೌಡ ಡೆಮ್ಮೆಜಾಲು, ಪ್ರ. ಕಾರ್ಯದರ್ಶಿ ಪುರಂದರ ಇಂದಬೆಟ್ಟು, ಉಪಾಧ್ಯಕ್ಷರಾದ ರಮೇಶ್ ಕೆಂಗಾಜೆ, ಅರುಣ್ ಕುಮಾರ್ ಕಲ್ಲಾಜೆ, ಮೋನಪ್ಪ, ಮತ್ತು ವಿಶ್ವನಾಥ ಗೌಡ ದೇವಪಾಲ್, ಕಾರ್ಯದರ್ಶಿ ದಿನೇಶ್ ಕಟನಿಬದಿ, ಕೋಶಾಧಿಕಾರಿ ರಾಜೇಶ್ ಗೌಡ ಹೆಬ್ಬಾರ್‌ಪಲ್ಕೆ, ಆರ್ಥಿಕ ಸಮಿತಿ ಸದಸ್ಯರಾದ ವಸಂತ ಗೌಡ, ಬಾಲಕೃಷ್ಣ ಗೌಡ ಮನ್ನಡ್ಕ, ಸಂಜೀವ ಮನ್ನಡ್ಕ, ಉಮರ್ ಫಾರೂಕ್, ಗಣೇಶ್ ಕಟನಿಬದಿ, ಭರತ್ ಕುಮಾರ್ ಹಾನಿಬೆಟ್ಟು, ಬೇಬಿ ಗೌಡ ಮನ್ನಡ್ಕ, ಅವಿನಾಶ್, ಗೋಪಾಲಕೃಷ್ಣ ಓಡ್ರಬೆಟ್ಟು, ಜಯಂತ ಬೊಟ್ಟು ಬೆಳ್ಳೂರು ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಂಬಳದ ಪ್ರಧಾನ ತೀರ್ಪುಗಾರ ಗುಣಪಾಲ ಕಡಂಬು ಸನ್ಮಾನ ನೆರವೇರಿಸಿದರು. ಸಹಕರಿಸಿದ ಎಲ್ಲರನ್ನೂ ಈ ವೇಳೆ ಗುರುತಿಸಲಾಯಿತು.
ಆನಂದ ಅಡೀಲು ಪ್ರಸ್ತಾವನೆ ಮಾಡಿದರು. ಸತೀಶ್ ಮನ್ನಡ್ಕ ಕಾರ್ಯಕ್ರಮ ನಿರೂಪಿಸಿದರು. ಸಂಜೀವ ಮನ್ನಡ್ಕ ವಂದಿಸಿದರು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕಂಬಳ ತೀರ್ಪುಗಾರರು, ಸಮಿತಿಯ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದು ಸಹಕಾರ ನೀಡಿದರು. ಸಾವಿರಾರು ಕಂಬಳಾಭಿಮಾನಿಗಳು ಪಾಲ್ಗೊಳ್ಳುವ ಮೂಲಕ ಕ್ರೀಡಾ ಸಂಘಟಕರಲ್ಲಿ ಹೊಸ ಹುರುಪು ಮತ್ತು ಕ್ರಿಯಾಶೀಲತೆ ತಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.