ಕಾಂಗ್ರೆಸ್ ಜಿಲ್ಲಾ ಸಮಿತಿಗೆ ತಾಲೂಕಿನ ಒಂಭತ್ತು ಮಂದಿ ನೇಮಕ

congress1ಬೆಳ್ತಂಗಡಿ : ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾರ್ ಅವರು ಅ.30ರಂದು ಮಂಗಳೂರಿನಲ್ಲಿ ಕೆಪಿಸಿಸಿಯಿಂದ ಅನುಮೋದನೆಗೊಂಡ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಬೆಳ್ತಂಗಡಿ ತಾಲೂಕಿನಿಂದ ಒಂಭತ್ತು ಮಂದಿ ಜಿಲ್ಲಾ ಸಮಿತಿ ಪದಾಧಿಕಾರಿಗಳಾಗಿ ನೇಮಕಗೊಂಡಿದ್ದಾರೆ.
ಖಾಯಂ ಆಹ್ವಾನಿತರಾಗಿ ಶಾಸಕ ಕೆ. ವಸಂತ ಬಂಗೇರ, ಉಪಾಧ್ಯಕ್ಷರಾಗಿ ಬಿ.ಎಂ ಅಬ್ದುಲ್ ಹಮೀದ್ ಉಜಿರೆ, ಲೋಕೇಶ್ವರಿ ವಿನಯಚಂದ್ರ ಕಡಿರುದ್ಯಾವರ, ಪ್ರಧಾನ ಕಾರ್ಯದರ್ಶಿಗಳಾಗಿ ಕೆ.ಕೆ ಶಾಹುಲ್ ಹಮೀದ್, ಎ.ಸಿ ಮ್ಯಾಥ್ಯು ಶಿಬಾಜೆ, ಇಚ್ಚಿಲ ಸುಂದರ ಗೌಡ ಉಜಿರೆ, ಕಾರ್ಯದರ್ಶಿಗಳಾಗಿ ಜಗದೀಶ್ ಡಿ. ಬೆಳ್ತಂಗಡಿ, ಮೋಹನ ಶೆಟ್ಟಿಗಾರ್ ಉಜಿರೆ, ಜಗದೀಶ್ ಹೆಗ್ಡೆ ನಾವರ, ಪಿ.ಕೆ ಚಂದ್ರಶೇಖರ್ ಬಳೆಂಜ ಇವರನ್ನು ನೇಮಕಗೊಳಿಸಲಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.