ಪ್ರಧಾನಿ ಧರ್ಮಸ್ಥಳ ಭೇಟಿ : 1 ಲಕ್ಷ ಜನರಿಗೆ ವ್ಯವಸ್ಥೆ

Dharmasthala

dharmasthala1

Dharmasthala2ಬೆಳ್ತಂಗಡಿ : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅ.29 ರಂದು ಭಾನುವಾರ ಮುಂಜಾನೆ 11.00 ಗಂಟೆಗೆ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದು ಧರ್ಮಸ್ಥಳ ಮತ್ತು ಉಜಿರೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅಪರಾಹ್ನ 1.00 ಗಂಟೆಗೆ ಅವರು ಧರ್ಮಸ್ಥಳದಿಂದ ತೆರಳಲಿದ್ದಾರೆ ಎಂದು ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಕಾರ್‍ಯನಿರ್ವಾಹಕ ನಿರ್ದೇಶಕ ಡಾ| ಎಲ್.ಹೆಚ್ ಮಂಜುನಾಥ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾರ್ವಜನಿಕರಿಗೆ ಭಾನುವಾರ ಮಧ್ಯಾಹ್ನ 1.30 ರವರೆಗೆ ದರ್ಶನದ ಅವಕಾಶವಿರುವುದಿಲ್ಲ, ಅಕಸ್ಮಾತ್ ಅರಿಯದೇ ಕ್ಷೇತ್ರಕ್ಕೆ ಬಂದವರಿಗೆ ಭಾನುವಾರ ಮಧ್ಯಾಹ್ನ 1.30 ರವರೆಗೆ ದೇವಸ್ಥಾನದ ರಥಬೀದಿಗೆ ಪ್ರವೇಶವಿರುವುದಿಲ್ಲ, ಧರ್ಮಸ್ಥಳ ಮುಖ್ಯದ್ವಾರ ಮತ್ತು ಪ್ರವೇಶ ದ್ವಾರಗಳಲ್ಲಿ ಭಾನುವಾರ ಮಧ್ಯಾಹ್ನ 1.30 ರವರೆಗೆ ಪ್ರವೇಶವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಧರ್ಮಸ್ಥಳ ಉಜಿರೆ ಸಂಚಾರ ವ್ಯವಸ್ಥೆ :
ಧರ್ಮಸ್ಥಳ ಉಜಿರೆ ನಡುವೆ ಭಾನುವಾರ ಮುಂಜಾನೆ 9.00 ಗಂಟೆಯ ನಂತರ ಯಾವುದೇ ವಾಹನ ಸಂಚಾರವನ್ನು ನಿಷೇದಿಸಲಾಗಿದೆ. ಕೊಕ್ಕಡ ಕಡೆಯಿಂದ ಉಜಿರೆಗೆ ಕಾರ್ಯಕ್ರಮಕ್ಕೆ ಹೋಗ ಬಯಸುವವರು 9 ಗಂಟೆಯೊಳಗಾಗಿ ಉಜಿರೆ ತಲುಪತಕ್ಕದ್ದು. ಇಲ್ಲವೇ ಕೊಕ್ಕಡ-ನೆಲ್ಯಾಡಿ-ಉಪ್ಪಿನಂಗಡಿ-ಗುರುವಾಯನಕೆರೆ-ಬೆಳ್ತಂಗಡಿಯಾಗಿ ಉಜಿರೆಯನ್ನು ಪ್ರವೇಶಿಸಬಹುದು. ಚಾರ್ಮಾಡಿ, ಮಂಗಳೂರು ಕಡೆಯಿಂದ ಬರುವ ರಸ್ತೆಗಳು ಮುಕ್ತವಾಗಿರುತ್ತದೆ ಎಂದು ಹೇಳಿದರು.
ಪ್ರಧಾನಮಂತ್ರಿಗಳ ಉಜಿರೆ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಸೂಚನೆ :
ಪ್ರಧಾನಮಂತ್ರಿಗಳ ಕಾರ್ಯಕ್ರಮಕ್ಕೆ ಆಗಮಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿರುತ್ತದೆ. ಕಾರ್ಯಕ್ರಮವನ್ನು ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು ಸಾರ್ವಜನಿಕರಿಗೆ ಉಜಿರೆ ಕಡೆಯಿಂದ, ಬೆಳಾಲು ರಸ್ತೆಯ ಕಡೆಯಿಂದ ಕ್ರೀಡಾಂಗಣಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಮುಂಜಾನೆಯಿಂದಲೇ ಉಜಿರೆಯಿಂದ ಕಾಲೇಜು ಕಡೆಗಿರುವ ದ್ವಿಸಂಚಾರ ರಸ್ತೆಯಲ್ಲಿ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಕಾರ್ಯಕ್ರಮಕ್ಕೆ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು ವಾಹನದಲ್ಲಿ ಆಗಮಿಸಿ ಜನಾರ್ಧನ ಸ್ವಾಮಿ ರಥಬೀದಿಯಲ್ಲಿ ಇಳಿದು ನಡೆದುಕೊಂಡು ಕ್ರೀಡಾಂಗಣಕ್ಕೆ ಬರುವುದು. ಎಲ್ಲ ಸಾರ್ವಜನಿಕರು 10.30 ರೊಳಗಾಗಿ ಕ್ರೀಡಾಂಗಣವನ್ನು ಪ್ರವೇಶಿಸಿ ಆಸೀನರಾಗಬೇಕು ಎಂದರು.
ವಿ.ಐ.ಪಿ. ಪಾಸ್ ಹೊಂದಿರುವವರು ಉಜಿರೆ ಕಾಲೇಜ್ ಬಸ್‌ನಿಲ್ದಾಣದ ಸಮೀಪ ರಚಿಸಲಾಗಿರುವ ದ್ವಾರದಿಂದ ಪ್ರವೇಶಿಸುವುದು. ವಾಹನಗಳಲ್ಲಿ ಬರುವ ವಿಐಪಿ ಪಾಸುದಾರರು ಇಲ್ಲಿಯೇ ಇಳಿದು ತಮ್ಮ ವಾಹನವನ್ನು ಅಜ್ಜರಕಲ್ಲು ವಾಹನ ನಿಲುಗಡೆಗೆ ಕಳುಹಿಸುವುದು. ಎಲ್ಲ ಪಾಸುದಾರರು ತಮಗೆ ಒದಗಿಸಲಾದ ಪಾಸ್ ಮತ್ತು ಫೋಟೋಐಡಿಯನ್ನು ತರುವುದು. ವಾಹನದಲ್ಲಿ ಬರುವ ವಿಐಪಿ ಪಾಸುದಾರರು ವಾಹನ ಪಾಸ್ ಪಡಕೊಂಡಿರಬೇಕು ಎಂದರು. ಕ್ರೀಡಾಂಗಣದಲ್ಲಿ ನೀರಿನ ಬಾಟಲ್ ಮತ್ತು ಚೀಲಗಳನ್ನು ನಿಷೇದಿಸಲಾಗಿದೆ. ಕ್ರೀಡಾಂಗಣದಲ್ಲಿ ಪ್ರತ್ಯೇಕ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.
ವಾಹನ ನಿಲುಗಡೆ :
ಬೆಳ್ತಂಗಡಿ ಕಡೆಯಿಂದ ಬರುವವರಿಗೆ ಜನಾರ್ಧನ ಸ್ವಾಮಿ ಪ್ರಾಥಮಿಕ ಶಾಲೆ, ಉಜಿರೆ, ಅಜ್ಜರಕಲ್ಲು ಮೈದಾನ. ಇತರರಿಗೆ ಜನಾರ್ಧನ ಸ್ವಾಮಿರಥ ಬೀದಿಯಲ್ಲಿ ವ್ಯವಸ್ಥೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.