ಮುನಿಶ್ರೀ ಚಾತುರ್ಮಾಸ್ಯ : ತಡೆಗೋಡೆ ಉದ್ಘಾಟನೆ ಜೈನ ಸಮುದಾಯದ ವಿಶೇಷ ಅನುದಾನಕ್ಕೆ ಸಿ.ಎಂ ಗೆ ಮನವಿ : ಶಾಸಕ ಬಂಗೇರ

munishri tadegode udhgataneವೇಣೂರು : ಇಲ್ಲಿಯ ಜೈನ ಧರ್ಮದವರ ಸಭಾಭವನಕ್ಕೆ ಈಗಾಗಲೇ 50 ಲಕ್ಷ ರೂ. ಅನುದಾನ ಒದಗಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಪಸಂಖ್ಯಾತರ ಅನುದಾನದಡಿಯಲ್ಲಿ ಜೈನ ಧರ್ಮದ ಬಸದಿ, ಸಭಾಭವನಗಳಿಗೆ ಪ್ರತ್ಯೇಕ ಅನುದಾನ ಒದಗಿಸಿ ಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗುವುದು ಎಂದು ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರ ಹೇಳಿದರು. ಅವರು ವೇಣೂರು ಮಹಾವೀರ ನಗರದಲ್ಲಿ ಮುನಿಶ್ರೀ  ಯವರ ಚಾತುರ್ಮಾಸ್ಯದ ಹಿನ್ನೆಲೆಯಲ್ಲಿ ಅಂದಾಜು 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಕಾಂಕ್ರೀಟ್ ತಡೆಗೋಡೆ ಉದ್ಘಾಟಿಸಿ, ಮುನಿಶ್ರೀ ಪ್ರಸಂಗಸಾಗರ ಮಾಹಾರಾಜರನ್ನು ಭೇಟಿಯಾಗಿ ಅವರು ಮಾತನಾಡಿದರು. ನಾರಾವಿ ಜಿ.ಪಂ ಸದಸ್ಯ ಪಿ. ಧರಣೇಂದ್ರ ಕುಮಾರ್, ವೇಣೂರು ಗ್ರಾ.ಪಂ ಮಾಜಿ ಅಧ್ಯಕ್ಷ ಸತೀಶ್ ಹೆಗ್ಡೆ, ವಲಯ ಅರಣ್ಯ ಅಧಿಕಾರಿ ಪ್ರಶಾಂತ್ ಕುಮಾರ್ ಪೈ, ಉಪವಲಯ ಅರಣ್ಯಾಧಿಕಾರಿ ಯಶೋಧರ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭಾಸ್ಕರ ಬಲ್ಯಾಯ, ಕುಕ್ಕೇಡಿ ಗ್ರಾ.ಪಂ ಉಪಾಧ್ಯಕ್ಷ ಅಶೋಕ್ ಪಾಣೂರು, ವೇಣೂರು ಗ್ರಾ.ಪಂ ಸದಸ್ಯರಾದ ಶಹನಾಜ್, ಜೆಸ್ಸಿ ಟೀಚರ್, ಇಸ್ಮಾಯಿಲ್ ಕೆ. ಪೆರಿಂಜೆ,  ಚಾತುರ್ಮಾಸ್ಯ ವ್ಯವಸ್ಥಾಪನ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಿತಿ ಪ್ರ.ಕಾರ್ಯದರ್ಶಿ ಮಹಾವೀರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.