ನಾರಾವಿ : ಕೆಸರ್‌ಡ್ ಒಂಜಿ ದಿನ

naravi kesardonji dinaನಾರಾವಿ : ಸಮಾಜಕ್ಕೆ ಶಾಪದಂತೆ ಅಂಟಿ ಕೊಂಡಿರುವ ದುಷ್ಟಶಕ್ತಿಗಳನ್ನು ದೂರವಿಡುವ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಯುವಕರು ಸಂಘಟನಾತ್ಮಕವಾಗಿ ಒಗ್ಗೂಡಬೇಕಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ದ.ಕ ಜಿಲ್ಲಾ ಯುವಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜ ಹೇಳಿದರು.
ನಾರಾವಿ ಸೂರ್ಯ ಪ್ರೆಂಡ್ಸ್ ಆಶ್ರಯದಲ್ಲಿ ದೇವಸ ಬೈಲ್‌ನಲ್ಲಿ ಆಯೋಜಿಸಲಾಗಿದ್ದ ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೇಸರಿ ತ್ಯಾಗದ ಸಂಕೇತವಾಗಿದ್ದು, ಹಿಂದೂ ಸಮಾಜ ಅಸ್ಪ್ರಶ್ಯತೆ, ಜಾತಿ ತಾರತಮ್ಯವನ್ನು ಮೆಟ್ಟಿ ನಿಂತು ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮದ ಮೂಲಕ ಒಂದಾಗಿದೆ ಎಂದರು. ದೀಪಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ತಂತ್ರಿಯವರು ಶುಭಹಾರೈಸಿದರು. ವೇದಿಕೆಯಲ್ಲಿ ಮಾಜಿ ತಾ.ಪಂ ಸದಸ್ಯ ಜಯಂತ್ ಕೋಟ್ಯಾನ್, ವೇಣೂರು ಗ್ರಾ .ಪಂ ಸದಸ್ಯ ರಾಜೇಶ್ ಮೂಡುಕೋಡಿ, ಶೀನಪ್ಪ ಹೆಗ್ಡೆ, ಸುಧಾಕರ ಭಂಡಾರಿ, ಉದ್ಯಮಿಗಳಾದ ವಸಂತ್ ಭಟ್, ನಿರಂಜನ್ ಅಜ್ರಿ, ಗ್ರಾ.ಪಂ ಮಾಜಿ ಅಧ್ಯಕ್ಷ ಡಾಕಯ್ಯ ಪೂಜಾರಿ, ಲಕ್ಷ್ಮೀ ಶೆಟ್ಟಿ, ಗ್ರಾ.ಪಂ ಸದಸ್ಯರಾದ ಉದಯ್ ಹೆಗ್ಡೆ, ರಾಜವರ್ಮ ಜೈನ್, ಸೂರ್ಯ ಪ್ರೆಂಡ್ಸ್ ಗೌರವಾಧ್ಯಕ್ಷ ಪ್ರಸಾದ್, ಅಧ್ಯಕ್ಷ ಸಂಚಿತ್ ಭಂಡಾರಿ, ಕಾರ್ಯದರ್ಶಿ ಮೋಹನ್, ರತ್ನಾವತಿ ಹೆಗ್ಡೆ, ಮೋಹನ್ ಅಂಡಿಂಜೆ, ಸುಜಲತಾ, ಕೃಷ್ಣಪ್ಪ ಪೂಜಾರಿ ಮಿತ್ತೊಟ್ಟು, ರಾಮ್‌ಪ್ರಸಾದ್ ಮರೋಡಿ, ಭಾಸ್ಕರ್ ಹೆಗ್ಡೆ, ಗ್ರಾ.ಪಂ ಸದಸ್ಯರಾದ ವಸಂತಿ ಗಿರಿಜ, ಕಿಟ್ಟು ಲೈನ್ ಮ್ಯಾನ್, ಯಮುನ, ಶೇಖರ್ ಪೂಜಾರಿ ಗೌರ್‌ಮೆಂಟ್, ನಾರಾಯಣ ಪೂಜಾರಿ, ಸದಾನಂದ ಹೆಗ್ಡೆ, ಹಾಗೂ ಸೂರ್ಯ ಪ್ರೆಂಡ್ಸ್‌ನ ಸರ್ವ ಸದಸ್ಯರು ಹಾಜರಿದ್ದರು. ಕೂಟದಲ್ಲಿ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಭಾಸ್ಕರ್ ಹೆಗ್ಡೆ ಸ್ವಾಗತಿಸಿ, ಕು-ರಶ್ಮಿತಾ ಧನ್ಯವಾದವಿತ್ತರು. ಸತೀಶ್ ಹಾಗೂ ಅಶೋಕ್ ಎಮ್.ಕೆ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.