ತಣ್ಣೀರುಪಂತ ಗ್ರಾ.ಪಂ : ಮುಂಚೇರಿ – ಭೋವು ಕಲ್ಲಕಟ್ಟಣಿ ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ

Advt_NewsUnder_1
Advt_NewsUnder_1
Advt_NewsUnder_1

Kallakattani rasthe shilanyasaತಣ್ಣೀರುಪಂತ: ಗಿರಿಜನ ಉಪಯೋಜನೆಯಲ್ಲಿ ಸುಮಾರು ರೂ.20 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಯಾಗಲಿರುವ ತಣ್ಣೀರುಪಂತ ಗ್ರಾಮದ ಮುಂಚೇರಿ-ಭೋವು ಮತ್ತು ಕಲ್ಲಕಟ್ಟಣಿ ರಸ್ತೆಯ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಅ.21ರಂದು ಶಾಸಕ ಕೆ. ವಸಂತ ಬಂಗೇರ ಅವರು ನೆರವೇರಿಸಿದರು.
ನಂತರ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ರಸ್ತೆ ಅಭಿವೃದ್ಧಿ ಕಾಮಗಾರಿ ಶೀಘ್ರವಾಗಿ ನಡೆಯಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ತಾ.ಪಂ. ಸದಸ್ಯೆ ಕೇಶವತಿ, ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷ ಜಯವಿಕ್ರಮ್, ಉಪಾಧ್ಯಕ್ಷ ಕೇಶವ ನಾಯ್ಕ್, ಗ್ರಾ.ಪಂ. ಸದಸ್ಯರುಗಳಾದ ಅಯೂಬ್, ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ, ಅಬ್ದುಲ್ ರಹಿಮಾನ್, ಶ್ರೀಮತಿ ಮೈಮುನ, ಶ್ರೀಮತಿ ಸುಮ, ಇಸ್ಮಾಯಿಲ್ ಬೋವು, ಕಣಿಯೂರು ಗ್ರಾ.ಪಂ. ಅಧ್ಯಕ್ಷ ಸುನೀಲ್ ಸಾಲ್ಯಾನ್, ಬಾರ್ಯ ಗ್ರಾ.ಪಂ. ಉಪಾಧ್ಯಕ್ಷ ಅಬ್ದುಲ್ ರಜಾಕ್, ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಪ್ರಸಾದ ಅಜಿಲ, ಸ್ಥಳೀಯರಾದ ದುಗ್ಗಪ್ಪ ಗೌಡ ಪೊಸಂದೋಡಿ, ಅಬೂಬಕ್ಕರ್ ಸಿದ್ಧಿಕ್, ಪ್ರಭಾಕರ ಗೌಡ, ದಿನೇಶ್ ಗೌಡ ಪೊಸಂದೋಡಿ, ಇಸುಬು ಕೆರೆಕೋಡಿ, ಹಮೀದ್, ಉಮ್ಮರ್ ಮುಂಚೇರಿ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.