ಜೈ ಶ್ರೀ ರಾಮ್ ಗೆಳೆಯರ ಬಳಗ ಬಂದಾರು ಸಾಮೂಹಿಕ ದೀಪಾವಳಿ ಆಚರಣೆ ಹಿಂದೂ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವ

bandaru deepavali acharaneಬಂದಾರು : ಅತ್ಯಂತ ಪುರಾತನ ಹಿಂದೂ ಧರ್ಮದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಸಂಸ್ಕೃತಿ, ಸಂಪ್ರದಾಯ, ಧಾರ್ಮಿಕ ನಂಬಿಕೆಯನ್ನು ಉಳಿಸಿ ಬೆಳೆಸಲು ಯುವಕರು ಮುಂದೆ ಬರಬೇಕಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಉಡುಪಿ ಜಿಲ್ಲಾ ವಕ್ತಾರರಾದ ವಿಜಯ ಕುಮಾರ್ ಹೇಳಿದರು.
ಅವರು ಜೈ ಶ್ರೀ ರಾಮ್ ಗೆಳೆಯರ ಬಳಗ ಶ್ರೀ ರಾಮ ನಗರ ಬಂದಾರು ಇದರ ನೇತೃತ್ವದಲ್ಲಿ ನಡೆದ ಸಾಮೂಹಿಕ ದೀಪಾವಳಿ ಆಚರಣೆ, ಗೋಪೂಜೆ, ಲಕ್ಷ್ಮೀಪೂಜೆ ಕಾರ್ಯಕ್ರಮದ ಧಾರ್ಮಿಕ ಸತ್ಸಾಂಗದಲ್ಲಿ ಮಾತನಾಡಿದರು.
ಈ ಸಂಧರ್ಭದಲ್ಲಿ ಪ್ರತಿಯೊಬ್ಬರು ಮಣ್ಣಿನ ದೀಪ ಬೆಳಗಿಸಿದರು. ಗೋಪೂಜೆ, ಲಕ್ಷ್ಮೀಪೂಜೆ, ಭಜನೆ, ಸತ್ಸಂಗದೊಂದಿಗೆ ಸಾಮೂಹಿಕ ದೀಪಾವಳಿ ಅರ್ಥಪೂರ್ಣವಾಗಿ ಆಚರಿಸಿ ಸಾಮೂಹಿಕ ಭೋಜನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಷನ್ಮುಗನ್, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಬಿ. ಕೆ, ಸದಸ್ಯರಾದ ವಿಜಯಿ, ಕುಂಬಾರ ಸೇವಾ ಟ್ರಸ್ಟ್ ನೂತನ ಅಧ್ಯಕ್ಷ ಪದ್ಮ ಕುಂಬಾರ, ಕಾರ್ಯದರ್ಶಿ ವಾಸಪ್ಪ ಕುಂಬಾರ, ಮಾಜಿ ಅಧ್ಯಕ್ಷ ಗುರುವಪ್ಪ ಕುಂಬಾರ, ಜ್ಯೋತಿಷ್ಯರಾದ ಸುಬ್ರಾಯ ಹೊಳ್ಳ, ಜೈ ಶ್ರೀ ರಾಮ್ ಗೆಳೆಯರ ಬಳಗದ ಅಧ್ಯಕ್ಷ ಚಂದ್ರಶೇಖರ್ ಬಿ.ಕೆ, ಕಾರ್ಯದರ್ಶಿ ಕೃಷ್ಣ ಹಾಗೂ ಸರ್ವ ಸದಸ್ಯರು, ಪ್ರಮುಖರಾದ ರಾಮಣ್ಣ ಮಡಿವಾಳ, ಪ್ರಕಾಶ್ ಬಿ.ಕೆ, ಶಿವರಾಮ್, ಶೀನಪ್ಪ, ಕಾಂತಪ್ಪ, ಬಾಬು ಕುಂಬಾರ ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.