ಬದ್ಯಾರಿನಲ್ಲಿ `ಜಾವಾಂಯ್ ನಂ.1′ ಚಿತ್ರದ ಚಿತ್ರೀಕರಣ

Konkani film press meet

Konkani filmಬೆಳ್ತಂಗಡಿ: ಹ್ಯಾರಿ ಫೆರ್ನಾಂಡೀಸ್ ನಿರ್ದೇಶನದಲ್ಲಿ ಬೆಳ್ತಂಗಡಿ ಪರಿಸರದಲ್ಲಿ ಚಿತ್ರೀಕರಣ ನಡೆಯುತ್ತಿರುವ ಕೊಂಕಣಿ ಭಾಷಾ ಚಲನಚಿತ್ರ `ಜಾವಾಂಯ್ ನಂ.1′ (ಅಳಿಯ ನಂ.1) ಮುಂದಿನ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರದ ನಟ ಸ್ಟಾನಿ ಅಲ್ಬಾರಿಸ್ ತಿಳಿಸಿದ್ದಾರೆ.
ಚಿತ್ರಿಕರಣ ನಡೆಯುತ್ತಿರುವ ಬದ್ಯಾರಿನ ರಿಚ್ಚರ್ಡ್ ಗೋವಿಯಸ್ ಅವರ ಮನೆಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಸ್ಟಾನಿಯವರು ಸಂಗಾತಿ ಕ್ರಿಯೇಶನ್ಸ್‌ನ ಬ್ಯಾನರಿನಡಿ ಈ ಚಲನ ಚಿತ್ರ ನಿರ್ಮಿಸಲಾಗುತ್ತಿದೆ. ವಾಲ್ಟರ್ ಡಿ’ಸೋಜ, ಸಿರಿಲ್ ಕ್ಯಾಸ್ಟಲಿನೊ, ಲಿಯೋ ಫೆರ್ನಾಂಡೀಸ್ ಚಿತ್ರದ ನಿರ್ಮಾಪಕರಾಗಿದ್ದಾರೆ. ಸೆ.೧18ರಿಂದ ಉಜಿರೆ, ಬೆಳ್ತಂಗಡಿ, ಬದ್ಯಾರ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಅಗತ್ಯ ಬಿದ್ದರೆ ಮೂಡಬಿದ್ರೆ, ಮುಂಬಯಿಯಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂದರು.
ನಾಯಕ ನಟನಾಗಿ ಕೇವಿನ್ ಡಿ’ಮೆಲ್ಲೋ, ನಾಯಕಿಯಾಗಿ ಜೆಸಿಂತಾ ರೊಡ್ರಿಗಸ್, ರಂಜಿತಾ ಲೂಯಿಸ್ ಹಾಗೂ ಕೊಂಕಣಿ ಸಿನಿಮಾದಲ್ಲಿ ಪ್ರಥಮ ಬಾರಿಗೆ ಹಿಂದಿ-ಮರಾಠಿ ಸಿನಿಮಾಗಳಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ನಟಿ ವರ್ಷಾಉಸ್ಗಾಂವಕರ್ ನಟಿಸಿದ್ದಾರೆ. ನಟರಾದ ಗೋವಾದ ಪ್ರಿನ್ಸ್ ಜೇಕಬ್, ರಾನ್ಸ್ ಲಂಡನ್, ಸ್ಟಾನಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸುಮಾರು ರೂ.60ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಡಿಸೆಂಬರ್ ಕ್ರಿಸ್‌ಮಸ್‌ಗೆ ಮುನ್ನಾ ಅವಿಭಜಿತ ಜಿಲ್ಲೆಯ ಎಲ್ಲಾ ಚಿತ್ರಮಂದಿರಗಳಲ್ಲಿ ಹಾಗೂ ಗೋವಾ, ಮುಂಬಯಿಯಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದರು.
ಶಫೀಕ್ ಶೇಕ್ ಛಾಯಾಗ್ರಹಣ, ಜೇರಿ ಬೊಂದೇಲ್, ಲಾಯ್ಡ್ ರೇಗೋ ಹಾಡು ಬರೆದಿದ್ದು, ಜೇರಿ ಬೊಂದೇಲ್ ಸಂಗೀತ, ಅಭಿಷೇಕ್ ಸಂಕಲನ ಮಾಡಿದ್ದಾರೆ. ಅತ್ತೆ, ಸೊಸೆ, ಅಳಿಯ ಇವರ ನಡುವೆ ಸಮಾಜದಲ್ಲಿ ನಡೆಯುವ ಘಟನೆಗಳನ್ನು ಆಧಾರಿಸಿ ಕಥೆಯನ್ನು ಸಂಯೋಜಿಸಲಾಗಿದೆ. ಯುವ ಪೀಳಿಗೆಗೆ ಕೊಂಕಣಿ ಭಾಷೆಯ ಮೇಲೆ ಅಭಿಮಾನ ಉಂಟಾಗಬೇಕು ಎಂಬ ಉದ್ದೇಶದಿಂದ ಪಕ್ಕಾ ಕಮರ್ಷಿಯಲ್ ಆಗಿ ಚಿತ್ರ ನಿರ್ಮಿಸಲಾಗಿದೆ. ಅಲ್ಲದೆ ಬರುವ ಜನವರಿಯಲ್ಲಿ ಇದೇ ತಂಡದಿಂದ `ಅನ್‌ಮಗೆ’ ಎಂಬ ತುಳು ಚಿತ್ರವನ್ನು ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ವಿವರಿಸಿದರು.
ನಟಿ ವರ್ಷಾಉಸ್ಗಾಂವಕರ್ ಚಿತ್ರದ ಬಗ್ಗೆ ವಿವರಿಸಿ, ಇಲ್ಲಿಯ ಪರಿಸರದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು. ಚಿತ್ರದ ತಂಡದ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.