ಸುರ್ಯ ದೇವಾಲಯದಿಂದ 14 ಬಡ ಕುಟುಂಬಗಳಿಗೆ ಶೌಚಾಲಯದ ಕೊಡುಗೆ: ಶಾಸಕ ಬಂಗೇರ ಹಸ್ತಾಂತರ

Advt_NewsUnder_1
Advt_NewsUnder_1
Advt_NewsUnder_1

Surya devasthanadinda swacchatheಸುರ್ಯ : ರಾಷ್ಟ್ರೀಯ ಸ್ವಚ್ಚತಾ ಅಭಿಯಾನಕ್ಕೆ ಪೂರಕವಾಗಿ ಬಯಲು ಶೌಚಾಲಯ ಮುಕ್ತ ಸಮಾಜ ನಿರ್ಮಾಣ ಯೋಜನೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಗಾಂಧಿ ಜಯಂತಿಯ ಶುಭದಿನದಂದು ಮಣ್ಣಿನ ಹರಕೆಯ ಪ್ರಖ್ಯಾತ ಕ್ಷೇತ್ರ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ವತಿಯಿಂದ ಪ.ಜಾತಿ, ಪಂಗಡದ 14 ಕುಟುಂಬಗಳಿಗೆ ಶೌಚಾಲಯಗಳನ್ನು ನಿರ್ಮಿಸಿ ಕೊಡುಗೆಯಾಗಿ ನೀಡುವುದರ ಮೂಲಕ ಅರ್ಥಪೂರ್ಣ ಸಮಾಜ ಮುಖಿ ಕಾರ್ಯಕ್ರಮವನ್ನು ನಡೆಸಲಾಯಿತು.
ಶೌಚಾಲಯ ವ್ಯವಸ್ಥೆ ಇಲ್ಲದ ಸುರ್ಯ ಪರಿಸರದ ಆರ್ಥಿಕವಾಗಿ ಹಿಂದುಳಿದ ಈ ಕುಟುಂಬಗಳಿಗೆ ದೇವಸ್ಥಾನದ ವತಿಯಿಂದ ಪ್ರತಿ ಕುಟುಂಬಕ್ಕೆ ತಲಾ ರೂ.36 ಸಾವಿರ ದಂತೆ ಒಟ್ಟು ರೂ.5 ಲಕ್ಷ ವೆಚ್ಚದಲ್ಲಿ ಸುವ್ಯವಸ್ಥಿತ ರೀತಿಯಲ್ಲಿ ಶೌಚಾಲಯ ವನ್ನು ನಿರ್ಮಿಸಿ ಕೊಡುಗೆಯಾಗಿ ನೀಡಲಾಯಿತು. ಅ.2 ಗಾಂಧಿ ಜಯಂತಿ ಯಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಕೆ.ವಸಂತ ಬಂಗೇರ ಅವರು ಫಲಾನು ಭವಿಗಳಿಗೆ ಸೌಲಭ್ಯ ಹಸ್ತಾಂತರಿಸಿ ಮಾತನಾಡಿ, ಸುಭಾಶ್ಚಂದ್ರರು ಬಹಳಷ್ಟು ಕಷ್ಟದಲ್ಲಿ ಈ ದೇವಸ್ಥಾನವನ್ನು ನಡೆಸಿಕೊಂಡು ಬಂದವರು ಈಗ ದೇವಾಲಯದ ಆದಾಯವನ್ನು ಸಮಾಜ ದ ಹಿತಕ್ಕಾಗಿ ವಿನಿಯೋಗಿ ಸುತ್ತಿರುವುದು ಇತರರಿಗೆ ಮಾದರಿ ಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿ ಸಿದರು.
ಇವತ್ತು 14 ಮಂದಿ ಬಡ ಕುಟುಂಬದವರಿಗೆ ರೂ.5 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿಕೊಟ್ಟಿ ದ್ದಾರೆ. ಕಳೆದ ಐದು ವರ್ಷಗಳಿಂದ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸುತ್ತಿದ್ದಾರೆ. ಇಲ್ಲಿ ನಿತ್ಯ ಅನ್ನದಾನ ನಡೆಯುತ್ತಿದೆ. ನಡ ಶಾಲೆಗೆ ರೂ.1.50 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ನೀಡಿದ್ದಾರೆ. ಇಂತಹ ಕಾರ್ಯಕ್ರಮ ಕ್ಷೇತ್ರದಿಂದ ನಿರಂತರ ವಾಗಿ ನಡೆಸುವ ಶಕ್ತಿ ದೇವರು ನೀಡಲಿ ಎಂದು ಹಾರೈಸಿದರು.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ಸುರ್ಯ ಗುತ್ತು ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಬಿ.ಎಸ್. ಮುಕುಂದ ಸುವರ್ಣ, ನ್ಯಾಯವಾದಿ ನೋಟರಿ ಶಶಿಕಿರಣ್ ಜೈನ್ ಉಪಸ್ಥಿತರಿದ್ದರು. ಶಾಸಕ ವಸಂತ ಬಂಗೇರ ಹಾಗೂ ಗುತ್ತಿಗೆದಾರ ನಾಗರಾಜ್ ಇವರನ್ನು ಕ್ಷೇತ್ರದ ವತಿಯಿಂದ ಅಭಿನಂದಿಸ ಲಾಯಿತು. ಪ್ರೋ| ಸತೀಶ್ಚಂದ್ರ ಸುರ್ಯ ಗುತ್ತು ಸ್ವಾಗತಿಸಿದರು. ಬೆಳ್ತಂಗಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಬಿ. ಮುನಿರಾಜ ಅಜ್ರಿ ಕಾರ್ಯಕ್ರಮ ನಿರೂಪಿಸಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ. ರಾಜಶೇಖರ ಅಜ್ರಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.