ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎನ್ ನಾರಾಯಣ ಗೌಡ) ಅಧ್ಯಕ್ಷ: ಶ್ರೀನಿವಾಸ ಗೌಡ ಪಟ್ರಮೆ – ಕಾರ್ಯದರ್ಶಿ: ಶಾಹಿದ್ ಪಾದೆ

suddi COLORpdf BLDY.p65ಬೆಳ್ತಂಗಡಿ: ಕರ್ನಾಟಕ ರಕ್ಷಣಾ ವೇದಿಕೆಯ ತಾ| ಅಧ್ಯಕ್ಷರಾಗಿ ಶ್ರೀನಿವಾಸ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಶಾಹಿದ್ ಪಾದೆ ಇವರನ್ನು ಸಂಘಟನೆ ಯ ರಾಜ್ಯಾಧ್ಯಕ್ಷ ನೇಮಕಗೊಳಿಸಿದ್ದಾರೆ.
ಸಂಘಟನೆಯ ದ. ಕ ಜಿಲ್ಲಾಧ್ಯಕ್ಷ ಲ| ಅನಿಲ್‌ದಾಸ್ ಮತ್ತು ಜಿಲ್ಲಾ ಉಸ್ತುವಾರಿಯಾಗಿರುವ ತೇಗೂರು ಜಗದೀಶ್ ಅರಸ್ ಅವರ ಶಿಫಾರಸ್ಸಿನಂತೆ ಈ ಆಯ್ಕೆ ನಡೆಯಿತು. ಅ. 3 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್‌ನಲ್ಲಿ ನಡೆದ ಕಾರ್ಯಕರ್ತರ ತಾಲೂಕು ಮಟ್ಟದ ಸಮಾಲೋಚನಾ ಸಭೆಯಲ್ಲಿ ತೇಗೂರು ಜಗದೀಶ್ ಅರಸ್ ಈ ತೀರ್ಪು ಪ್ರಕಟಿಸಿದರು. ಶ್ರೀನಿವಾಸ ಗೌಡ ಪಟ್ರಮೆ ಅವರು ಉಜಿರೆಯ ಓಡಲ ಉಂಡ್ಯಾಪು ನಗರದಲ್ಲಿ ನೆಲೆಸಿದ್ದು ಉದ್ಯಮಿಯಾಗಿ, ಸಾಮಾಜಿಕ ವ್ಯಕ್ತಿಯಾಗಿ ಎಲ್ಲರಿಗೂ ಪರಿಚಿತರಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಯಾಗಿರುವ ಶಾಹಿದ್ ಪಾದೆ ಅವರು ವಿದ್ಯಾ ವೆಲ್ಫೇರ್ ಅಸೋಸಿಯೇಶನ್ ಇದರ ಅಧ್ಯಕ್ಷರಾಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಉಳಿದಂತೆ ತಾಲೂಕು ಮಟ್ಟದ ಸಮಿತಿಯನ್ನು ರಚಿಸಲು ಇವರಿಗೆ ಜವಾಬ್ಧಾರಿ ನೀಡಲಾಗಿರುತ್ತದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.