ವೇಣೂರು ದೇಗುಲದ ಜೀರ್ಣೋದ್ಧಾರ ಸಮಿತಿ ಬರ್ಖಾಸ್ತು ಹಿನ್ನೆಲೆ ಹಾಳಾಗುತ್ತಿದೆ ಕೋಟ್ಯಂತರ ಮೌಲ್ಯದ ಮರಳು, ಮರಮಟ್ಟುಗಳು!

venur temple 1

venur templeಐತಿಹಾಸಿಕ ಹಿನ್ನೆಲೆಯ ಅಜಿಲ ಸೀಮೆಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಜನತೆ ಪ್ರಾಮಾಣಿಕ ಸಹಕಾರ ನೀಡಿದ್ದಾರೆ. ಆದರೆ ಕೆಲ ರಾಜಕೀಯ ಹಿತಶತ್ರುಗಳ ಕುತಂತ್ರದಿಂದ ಪುಣ್ಯದ ಕಾರ್ಯವೊಂದು ನಿಲ್ಲುವಂತಾಗಿದ್ದು ಬೇಸರದ ಸಂಗತಿ.
ಕೆ. ವಿಜಯ ಗೌಡ, (ಜೀರ್ಣೋದ್ಧಾರ ಸಮಿತಿಯ ಪ್ರ. ಕಾರ್ಯದರ್ಶಿ ಆಗಿದ್ದವರು)

ಹಾಳಾಗುವ ಸೊತ್ತುಗಳಿಗೆ ವ್ಯವಸ್ಥಾಪನ ಸಮಿತಿಯೇ ಹೊಣೆ
ವೇಣೂರು ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಕೆಲವರು ರಾಜೀನಾಮೆ ನೀಡಿರುವ ವಿಷಯ ಗಮನಕ್ಕೆ ಬಂದಿದೆ. ಈಗಾಗಿ ಅನೂರ್ಜಿತಗೊಂಡ ಸಮಿತಿಯನ್ನು ಬರ್ಖಾಸ್ತುಗೊಳಿಸಿ ದೇವಸ್ಥಾನದ ಆಡಳಿತಕ್ಕೆ ಲೆಕ್ಕಪತ್ರಗಳನ್ನು, ಖಾತೆಗಳನ್ನು ಹಸ್ತಾಂತರಿಸುವಂತೆ ಆದೇಶಿಸಿದ್ದೇವೆ ಹೊರತು ಜೀರ್ಣೋದ್ಧಾರ ಸಮಿತಿಯಲ್ಲಿ ಯಾವುದೇ ಅವ್ಯವಹಾರ ಕಂಡು ಬಂದಿಲ್ಲ. ಈ ಸಮಿತಿಯಿಂದ ಆಗಿರುವ ಅಭಿವೃದ್ಧಿ ಕೆಲಸಗಳು ಮತ್ತು ಬಾಕಿಯಿರುವ ಕೆಲಸಗಳ ಸ್ಪಷ್ಟ ಚಿತ್ರಣ ಈಗಿರುವ ವ್ಯವಸ್ಥಾಪನ ಸಮಿತಿ ನೀಡಬೇಕು. ಅಲ್ಲದೆ ಅರ್ಧದಲ್ಲಿರುವ ನಿಂತಿರುವ ಕೆಲಸಗಳನ್ನು ವ್ಯವಸ್ಥಾಪನ ಸಮಿತಿ ಮುಂದುವರಿಸಿಕೊಂಡು ಹೋಗಬಹುದು. ವ್ಯವಸ್ಥಾಪನ ಸಮಿತಿಗೆ ಜೀರ್ಣೋದ್ಧಾರ ಸಮಿತಿಯ ಅಗತ್ಯ ಕಂಡು ಬಂದರೆ ಸಮಿತಿಯ ಸ್ಪಷ್ಟ ಉದ್ದೇಶ ಹಾಗೂ ಅಭಿವೃದ್ಧಿ ಕಾರ್ಯಗಳ ಚಿತ್ರಣದೊಂದಿಗೆ ಇಲಾಖೆಗೆ ಅರ್ಜಿ ಸಲ್ಲಿಸಬಹುದು. ಪದೇ ಪದೇ ಜೀರ್ಣೋದ್ಧಾರ ಸಮಿತಿಗಳನ್ನು ರಚಿಸುವುದು ಸಮಜಂಸವಲ್ಲ. ರಚಿಸಲ್ಪಡುವ ಜೀರ್ಣೋದ್ಧಾರ ಸಮಿತಿಯ ಸ್ಪಷ್ಟ ಚಿತ್ರಣ, ಉದ್ದೇಶ ತಿಳಿಸುವುದು ಅವಶ್ಯಕ. ಜೀರ್ಣೋದ್ಧಾರ ಸಮಿತಿಯಲ್ಲಿ ಏನಾದರೂ ತಪ್ಪುಗಳಾಗಿದ್ದರೆ ವ್ಯವಸ್ಥಾಪನ ಸಮಿತಿ ಪರಿಶೀಲನೆ ನಡೆಸಿ ಇಲಾಖೆಗೆ ತಿಳಿಸಬಹುದು. ಅಲ್ಲದೆ ಅರ್ಧದಲ್ಲಿ ನಿಂತಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಬಹುದು. ಅದು ಬಿಟ್ಟು ಅಭಿವೃದ್ಧಿ ಕಾರ್ಯಗಳು ಸೊತ್ತುಗಳು ಹಾಳಾಗುತ್ತಿದೆ ಎಂದರೆ ಅದಕ್ಕೆ ವ್ಯವಸ್ಥಾಪನ ಸಮಿತಿಯೇ ನೇರ ಹೊಣೆ.
ಪ್ರಮೀಳ ಸಹಾಯಕ ಆಯುಕ್ತರು, ಧಾರ್ಮಿಕದತ್ತಿ ಇಲಾಖೆ

ವೇಣೂರು: ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀಣೋದ್ದಾರ ಸಮಿತಿ ಬರ್ಖಾಸ್ತುಗೊಂಡಿದ್ದು, ಪರಿಣಾಮವಾಗಿ ಇದೀಗ ಕೋಟ್ಯಂತರ ರೂ. ಮೌಲ್ಯದ ಮರಳು ಹಾಗೂ ಮರಮಟ್ಟುಗಳು ಹಾಳಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದು ಸುಮಾರು ಎರಡು, ಮೂರು ವರ್ಷಗಳ ಹಿಂದೆ ಶೇಖರಣೆ ಮಾಡಿಡಲಾಗಿದ್ದ ಮರಳು ರಾಶಿಗಳು, ಕೆತ್ತಲಾದ ಮರಮಟ್ಟುಗಳು, ಮರದ ದಿಮ್ಮಿಗಳು ಹಾಗೂ ದೇವರ ಧ್ವಜಸ್ತಂಭ ಹಾಳಾಗುತ್ತಿದೆ.
2014ರ ಸಪ್ಟೆಂಬರ್ ತಿಂಗಳಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕಾಗಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಿ ರೂ. 12 ಕೋಟಿ ವೆಚ್ಚದ ಜೀಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಈ ಸಮಿತಿಯು ಗರ್ಭಗುಡಿಯ ಮಹಡಿ, ತೀರ್ಥ ಮಂಟಪದ ಮಹಡಿ, ಜನಾರ್ದನ ದೇವರ ಗುಡಿಯ ಮಹಡಿ, ಹಲಗೆ, ರೀಪು, ಪಕ್ಕಾಸು ಸೇರಿದಂತೆ ಮರದ ಲಕ್ಷಾಂತರ ರೂ. ಮೌಲ್ಯದ ಕೆಲಸವನ್ನು ಪೂರ್ಣಗೊಳಿಸಿತ್ತು. ಅಲ್ಲದೆ ಶೇ. 60ರಷ್ಟು ಶಿಲೆಯ ಕೆಲಸವನ್ನೂ ಪೂರ್ಣಗೊಳಿಸಿತ್ತು. ಸುಮಾರು 150 ಲೋಡ್ ಮರಳನ್ನು ರಾಶಿ ಹಾಕಿ ಜೀರ್ಣೋದ್ಧಾರ ಕಾರ್ಯಕ್ಕೆ ತಯಾರಿ ನಡೆಸಿತ್ತು ಎನ್ನಲಾಗಿದೆ. ದಾನಿಗಳ ಸಹಕಾರದಿಂದ ನೂತನ ಧ್ವಜಸ್ತಂಭವನ್ನು ನಿರ್ಮಿಸಿ ಎಳ್ಳೆಣ್ಣೆಯಲ್ಲಿ ಹಾಕಲಾಗಿತ್ತು. ರೂ. 4.50 ಲಕ್ಷ ವೆಚ್ಚದ ಶೌಚಾಲಯದ ಕಾರ್ಯವೂ ಭಾಗಶಃ ಪೂರ್ಣಗೊಂಡಿತ್ತು, ಈ ಸಂದರ್ಭದಲ್ಲಿಯೇ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಪೂರಕವಾಗಿ ಕಾಂಕ್ರಿಟ್ ತಡೆಗೋಡೆಗೂ ಚಾಲನೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಪ್ರಮುಖ ಪದಾಧಿಕಾರಿಗಳು ಸಮಿತಿಗೆ ರಾಜೀನಾಮೆ ನೀಡಿದ್ದೇ ದೇವಸ್ಥಾನದ ಅಭಿವೃದ್ಧಿ ಕಾರ್ಯ ಅರ್ಧದಲ್ಲಿ ನಿಲ್ಲಲು ಕಾರಣವಾಗಿದೆ ಎಂಬುದು ಸಾರ್ವಜನಿಕರ ಅಳಲು. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಧಾರ್ಮಿಕದತ್ತಿ ಇಲಾಖಾಧಿಕಾರಿಗಳು ಸಮಿತಿಯನ್ನು ಇಲಾಖೆ ಬರ್ಖಾಸ್ತು ಮಾಡುವಂತೆ ಸೂಚಿಸಿ ಜೀರ್ಣೋದ್ಧಾರ ಸಮಿತಿಯ ಎಲ್ಲಾ ಖಾತೆ, ಲೆಕ್ಕಪತ್ರಗಳನ್ನು ದೇವಸ್ಥಾನದ ಆಡಳಿತ ಸಮಿತಿಗೆ ಹಸ್ತಾಂತರಿಸುವಂತೆ ಆದೇಶ ನೀಡಿದ್ದಾರೆ. ಇದರಂತೆ ಜೀಣೋದ್ಧಾರ ಸಮಿತಿಯ ಪದಾಧಿಕಾರಿಗಳು ಲೆಕ್ಕಪತ್ರವನ್ನು ಆಡಳಿತ ಸಮಿತಿಗೆ ಹಸ್ತಾಂತರಿಸಿದ್ದಾರೆ. ಈ ಎಲ್ಲದರ ಮಧ್ಯೆ ದೇಗುಲದ ಅಭಿವೃದ್ಧಿ ಸ್ಥಗಿತಗೊಂಡಿದೆ. ಕಳೆದ ಸುಮಾರು 4 ತಿಂಗಳ ಹಿಂದೆ ನೂತನ ವ್ಯವಸ್ಥಾಪನ ಸಮಿತಿ ರಚನೆಯಾಗಿದ್ದರೂ ಇನ್ನೂ ಜೀರ್ಣೋದ್ಧಾರ ಸಮಿತಿ ಪುನರ್ ರಚನೆಗೆ ಮನಸ್ಸು ಮಾಡಿಲ್ಲ.
ಬೆಳೆಬಾಳುವ ಮರದ ಕೆತ್ತನೆಗಳು, ಮರದ ದಿಮ್ಮಿಗಳು, ಮರಳು ರಾಶಿ ಕಳೆದ ಮೂರು ಬಾರಿಯ ಮಳೆ ಬಿಸಿಲಿಗೆ ರಕ್ಷಣೆಯಿಲ್ಲದೆ ಹಾಳಾಗುತ್ತಿದೆ. ವೈಜ್ಞಾನಿಕವಾಗಿ ದೇವರ ಧ್ವಜಸ್ತಂಭವನ್ನು ಇಂತಿಷ್ಟು ಸಮಯ ಮಾತ್ರ ಎಳ್ಳೆಣ್ಣೆಯಲ್ಲಿ ಹಾಕಿ ಇಡಬೇಕೆಂಬ ನಿಯಮ ಇದ್ದರೂ ಅದು ಪಾಲನೆ ಆಗದೆ ನಿರುಪಯುಕ್ತ ಆಗಿದೆ ಎಂಬ ಆರೋಪ ಭಕ್ತಾಧಿಗಳದ್ದು. ಜೀರ್ಣೋದ್ಧಾರ ಕಾರ್ಯ ಅರ್ಧದಲ್ಲೇ ನಿಂತು ಕೋಟ್ಯಂತರ ಮೌಲ್ಯದ ಮರಮಟ್ಟುಗಳು, ಮರಳು ಹಾಳಾಗಿದೆ., ಭಕ್ತಾಧಿಕಗಳ ಹಣ ಪೋಳಾಗಿದೆ. ಅಧಿಕಾರಕ್ಕೆ ಬಂದಿರುವ ನೂತನ ವ್ಯವಸ್ಥಾಪನ ಸಮಿತಿಯೂ ಅಭಿವೃದ್ಧಿ ಕಾರ್ಯಕ್ಕೆ ಕೈ ಹಾಕಿಲ್ಲ. ಇನ್ನಾದರೂ ಈ ಸಮಿತಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡುತ್ತಾ ಅಥವಾ ಜೀರ್ಣೋದ್ಧಾರ ಸಮಿತಿ ರಚಿಸಿ ಈ ಮೂಲಕ ಅಭಿವೃದ್ಧಿಗೆ ಮುನ್ನುಡಿ ನೀಡುತ್ತಾ ಕಾದುನೋಡಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.