ಸರ್ವರ್ ಸಮಸ್ಯೆ : ಪಡಿತರಕ್ಕಾಗಿ ಕಾರ್ಡುದಾರರ ಪರದಾಟ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

padithara samasyeಮ್ಯಾನುವೆಲ್ ವ್ಯವಸ್ಥೆ ಇದೆ
ಈ ಬಗ್ಗೆ ತಾಲೂಕಿನ ಆಹಾರ ನಿರೀಕ್ಷಕ ವಿಶ್ವ ಅವರನ್ನು ಸುದ್ದಿ ಮಾತನಾಡಿಸಿದಾಗ ಬೆಳ್ತಂಗಡಿ ತಾಲೂಕಿನಲ್ಲಿ 64 ನ್ಯಾಯಬೆಲೆ ಅಂಗಡಿಗಳ ಪೈಕಿ 41 ಅಂಗಡಿಗಳಿಗೆ ಬಯೋಮೆಟ್ರಿಕ್ ಯಂತ್ರ ಅಳವಡಿಸಲಾಗಿದ್ದು, ಕೆಲವೊಂದು ದಿನ ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆಗೆ ಅಡ್ಡಿಯಾಗಿದೆ. ಈ ಸಮಸ್ಯೆ ಬಂದಾಗ ಈ ಹಿಂದಿನಂತೆ ಮ್ಯಾನುವೆಲ್ ವ್ಯವಸ್ಥೆಯಲ್ಲಿ ಪಡಿತರ ವಿತರಣೆ ಮಾಡುವಂತೆ ಪಡಿತರ ಅಂಗಡಿಯವರಿಗೆ ತಿಳಿಸಿದ್ದೇವೆ. ಈಗ ಸಮಸ್ಯೆ ಪರಿಹಾರವಾಗಿ ಪಡಿತರ ವಿತರಣೆ ಸಮರ್ಪಕವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಬೆಳ್ತಂಗಡಿ : ಪಡಿತರ ದುರುಪಯೋಗವನ್ನು ತಡೆಗಟ್ಟಲು ಸರಕಾರ ಜಾರಿಗೆ ತಂದ ಬಯೋ ಮೆಟ್ರಿಕ್ ಪದ್ಧತಿ ಗ್ರಾಮೀಣ ಪ್ರದೇಶಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಗ್ರಾಹಕರು ಹಾಗೂ ಪಡಿತರ ಅಂಗಡಿಯವರು ಸಮಸ್ಯೆಗೆ ಸಿಲುಕಿದ್ದು, ಪಡಿತರ ಪಡೆಯಲು ಗ್ರಾಹಕರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಹಕಾರಿ ಸಂಘದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯ ವ್ಯವಸ್ಥೆಗಾಗಿ ರಾಜ್ಯ ಸರಕಾರವು ಪಿ.ಒ.ಎಸ್ ಮೂಲಕ ಥಂಬ್(ಹೆಬ್ಬೆರಳು) ಒತ್ತಿ ಪಡಿತರ ಪಡೆದುಕೊಳ್ಳುವ ಕಟ್ಟು ನಿಟ್ಟಿನ ಕ್ರಮವನ್ನು ಜಾರಿಗೆ ತಂದಿದ್ದು, ಬೆಳ್ತಂಗಡಿ ತಾಲೂಕಿನ 64 ನ್ಯಾಯಬೆಲೆ ಅಂಗಡಿಗಳ ಪೈಕಿ ಈಗಾಗಲೇ 41 ಅಂಗಡಿಗಳಲ್ಲಿ ಇದನ್ನು ಅಳವಡಿಸಿ ಪಡಿತರವನ್ನು ವಿತರಿಸಲಾಗುತ್ತಿದೆ.
ಪಡಿತರ ಕಾರ್ಡ್ ಹೊಂದಿದವರು ಆಹಾರ ಇಲಾಖೆಯಲ್ಲಿ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿ ಥಂಬ್ ನೀಡಬೇಕು. ಆ ಪ್ರಕಾರ ಪಡಿತರ ಕಾರ್ಡ್‌ನ ಮೂಲಕ ಅಕ್ಕಿ ಮತ್ತು ಸೀಮೆ ಎಣ್ಣೆ ಇನ್ನಿತರ ಆಹಾರ ಪದಾರ್ಥಗಳನ್ನು ಪಡೆದುಕೊಳ್ಳುವವರು ಬಯೋ ಮೆಟ್ರಿಕ್ ಮೇಷಿನಲ್ಲಿ ಥಂಬ್ ಒತ್ತಬೇಕು. ಈ ವ್ಯವಸ್ಥೆಗಾಗಿ ಸಹಕಾರಿ ಸಂಸ್ಥೆಗಳಲ್ಲಿ ಹೊಸ ಕಂಪ್ಯೂಟರ್ ಮತ್ತು ಪಿ.ಒ.ಎನ್ ಮೆಷಿನ್‌ನನ್ನು ಅಳವಡಿಸಲಾಗಿದೆ. ಅದಲ್ಲದೆ ಇಂಟರ್‌ನೆಟ್ ಕನೆಕ್ಷನ್ ಮಾಡಲಾಗಿದೆ.
ಆದರೆ ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಸರಿಯಾಗಿ ದೊರೆಯದ ಕಾರಣ ಆಹಾರ ಇಲಾಖೆಯಲ್ಲಿನ ಸರ್ವರ್‌ನ ಸಮಸ್ಯೆಯಿಂದಾಗಿ ಪಡಿತರದಾರನ ಥಂಬ್ ಕೆಲವೊಮ್ಮೆ ಗಂಟೆಗಟ್ಟಲೆ ಸ್ವೀಕಾರವಾಗುವುದಿಲ್ಲ. ಏಕಕಾಲದಲ್ಲಿ ರಾಜ್ಯಾದ್ಯಂತ ಎಲ್ಲಾ ಕಡೆಗಳಲ್ಲಿ ಒಂದೇ ಸರ್ವರ್‌ನ ಬಳಕೆಯಾಗುವುದರಿಂದ ಓವರ್ ಲೋಡ್ ಆಗುತ್ತಿದ್ದು, ಓರ್ವ ಪಡಿತರದಾರನ ಥಂಬ್ ಸ್ವೀಕಾರ ಆಗಬೇಕಾದಲ್ಲಿ 1 ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದಾಗಿ ಕಾರ್ಡುದಾರರು ಗಂಟೆ ಗಟ್ಟಲೆ ಸಾಲು ನಿಲ್ಲಬೇಕಾದ ಸ್ಥಿತಿ ಗ್ರಾಮೀಣ ಪ್ರದೇಶದಲ್ಲಿದೆ.
ಇದಕ್ಕೊಂದು ಉದಾರಣೆ ಕಣಿಯೂರು ಪದ್ಮುಂಜ ಪಡಿತರ ಅಂಗಡಿಯಲ್ಲಿ ಇತ್ತೀಚೆಗೆ ಕಂಡು ಬಂದಿದೆ. ನೂರಾರು ಮಂದಿ ಪಡಿತರಕ್ಕಾಗಿ ಸರತಿ ಸಾಲಿನಲ್ಲಿ ಬಂದು ಕಾದು ಕುಳಿತ್ತಿದ್ದರು. ಅಂದು ಮೂರು ಮಂದಿಗೆ ಮಾತ್ರ ಪಡಿತರ ನೀಡಲು ಸಾಧ್ಯವಾಗಿದೆ. ಇಲ್ಲಿ 803 ಮಂದಿ ಪಡಿತರ ಗ್ರಾಹಕರಿದ್ದು, ಸಾಮಾನ್ಯ ರೀತಿಯಲ್ಲಿ ಪಡಿತರ ವಿತರಿಸುವಾಗ ದಿನಕ್ಕೆ ನೂರು ಮಂದಿಗೆ ವಿತರಿಸಲು ಸಾಧ್ಯವಾಗುತ್ತಿತ್ತು. ಬಯೋಮೆಟ್ರಿಕ್ ಬಂದ ನಂತರ ದಿನಕ್ಕೆ 50 ಮಂದಿಗೆ ಪಡಿತರ ವಿತರಿಸಲು ಕಷ್ಟವಾಗಿದೆ ಎಂಬ ಮಾಹಿತಿಯನ್ನು ಕಾಸಿಂ ಪದ್ಮುಂಜ ನೀಡಿದ್ದಾರೆ. ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಈ ಎಲ್ಲಾ ಸಮಸ್ಯೆಗಳು ತಲೆದೋರಲು ಕಾರಣವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.