ವರದಿಗಾರ ಮತ್ತು ಸುದ್ದಿ ಪತ್ರಿಕೆ ಮಾನಹಾನಿಕರ ವರದಿ ಪ್ರಕಟಿಸಿದೆ ಎಂದು ಧರ್ಮಸ್ಥಳ ಠಾಣೆಗೆ ದೂರು ನೀಡಿದ ಯುವತಿ ಮಾನಹಾನಿಕರ ವರದಿಯಲ್ಲ ಸ್ಪಷ್ಟನೆ – ಪೋಲಿಸರಿಂದ ಹೇಳಿಕೆ ದಾಖಲೀಕರಣ

Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ: ಮುಂಡಾಜೆ ಗ್ರಾಮದಲ್ಲಿ ಆಗಸ್ಟ್ ತಿಂಗಳಲ್ಲಿ ಬೆಳಕಿಗೆ ಬಂದಿದ್ದ ಪ್ರಕರಣದಂತೆ, ವಿವಾಹಪೂರ್ವ ಸಂಬಂಧದಿಂದ ಯುವತಿಯೊಬ್ಬರು ಗರ್ಭವತಿಯಾಗಿ ಹೆರಿಗೆಯಾಗಿರುವುದಕ್ಕೆ ಸಂಬಂಧಿಸಿ ಘಟನೆಗೆ ಕಾರಣಕರ್ತರಾಗಿದ್ದ ಯುವಕನ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದ ವಿಚಾರದ ವರದಿ ಸುದ್ದಿ ಪತ್ರಿಕೆಯಲ್ಲಿ ಪ್ರಕಟಗೊಂಡದ್ದನ್ನು ವಿರೋಧಿಸಿ ಯುವತಿ ಪತ್ರಿಕೆಯ ವಿರುದ್ಧ, “ಮಾನಹಾನಿ ಮತ್ತು ಜಾತಿ ನಿಂದನೆ” ಎಂದು ಆಪಾದಿಸಿ ಧರ್ಮಸ್ಥಳ ಠಾಣೆಗೆ ದೂರು ಅರ್ಜಿ ನೀಡಿದ ಘಟನೆ ನಡೆದಿದೆ.
ದೂರು ನೀಡಿರುವ ಯುವತಿ ಸುದ್ದಿ ಪತ್ರಿಕೆ ವರದಿಗಾರ ಅಶ್ರಫ್ ಆಲಿಕುಂಞಿ, ವ್ಯವಸ್ಥಾಪಕ ಮಂಜುನಾಥ ರೈ ಮತ್ತು ಯು.ಪಿ ಶಿವಾನಂದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಪರಿಶಿಷ್ಟ ಪಂಗಡದ ಮಹಿಳೆಯಾದ ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕೇಳಿಕೊಂಡಿದ್ದರು.
ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಅ. 2 ರಂದು ಧರ್ಮಸ್ಥಳ ಠಾಣೆಗೆ ಹೋಗಿ, ಸುದ್ದಿ ಪತ್ರಿಕೆಯ ಆ. 31 ರಿಂದ ಸೆ. 6 ಸಂಚಿಕೆಯಲ್ಲಿ ಸಾಮಾನ್ಯ ಸುದ್ದಿ ವಿಭಾಗದಲ್ಲಿ ಪ್ರಕಟಗೊಂಡಿದ್ದ ಸದ್ರಿ ಪ್ರಕರಣದ ವರದಿಯನ್ನು ಠಾಣಾಧಿಕಾರಿ ಮುಂದೆ ಹಾಜರುಪಡಿಸಲಾಯಿತು. ಬೇರೆ ಪತ್ರಿಕೆಗಳಲ್ಲೂ ಈ ಬಗ್ಗೆ ವರದಿಗಳು ಪ್ರಕಟಗೊಂಡಿರುವುದನ್ನೂ ಎಸ್‌ಐ ಯವರ ಗಮನಕ್ಕೆ ತರಲಾಯಿತು. ಸುದ್ದಿ ಪತ್ರಿಕೆ ಪ್ರಕಟಿಸಿದ ವರದಿಯಲ್ಲಿ ನ್ಯಾಯಾಲಯ ವಿಧಿಸಿರುವ ನಿಯಮದಂತೆ ಸಂತ್ರಸ್ತೆ ಯುವತಿಯ ಹೆಸರನ್ನಾಗಲೀ, ಜಾತಿ ನಿಂದಿತ ಶಬ್ಧಪ್ರಯೋಗವಾಗಲೀ ಮಾಡಿರದ ಬಗ್ಗೆ ಠಾಣಾಧಿಕಾರಿ ದೃಢಪಡಿಸಿಕೊಂಡರು. ಘಟನೆಗೆ ಸಂಬಂಧಿಸಿದಂತೆ ಲಾಯಿಲದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದ ಯುವತಿ ಪೊಲೀಸರಿಗೆ ನೀಡಿದ್ದ ಹೇಳಿಕೆ ಆಧರಿಸಿ ಯುವತಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದುದರಿಂದ ಬಂಟ್ವಾಳ ಎಎಸ್‌ಪಿ ಯವರ ನೇತೃತ್ವದಲ್ಲಿ ಯುವಕನ ವಿರುದ್ಧ ಎಟ್ರಾಸಿಟಿ ಕೇಸು ದಾಖಲಿಸಿದ್ದನ್ನು ಪೊಲೀಸ್ ಬ್ಲಾಗ್ ಮೂಲಕ ಮಾಹಿತಿ ತಿಳಿದು ವರದಿ ಪ್ರಕಟಿಸಿದ್ದೆಂದು ಮನವರಿಕೆ ಮಾಡಿಕೊಡಲಾಯಿತು. ಅಂತೆಯೇ ಠಾಣಾಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡರು.
ಬೇರೆ ಪತ್ರಿಕೆಗಳಲ್ಲಿ ವರದಿಗಳು ಬಂದಿದ್ದರೂ ಸುದ್ದಿಯ ವಿರುದ್ಧ ಮಾತ್ರ ಉದ್ದೇಶಪೂರ್ವಕವಾಗಿ ದೂರು ನೀಡಲಾಗಿತ್ತು. ಇದೇ ದೂರನ್ನು ಆಧರಿಸಿ ಕೆಲವರು ಉದ್ದೇಶಪೂರ್ವಕವಾಗಿ ವೆಬ್‌ಸೈಟ್‌ನಲ್ಲಿ, ಫೇಸ್‌ಬುಕ್ ಮತ್ತು ವಾಟ್ಸ್‌ಆಪ್‌ನಲ್ಲಿ ಸುದ್ದಿ ಪತ್ರಿಕೆ ಮತ್ತು ಸಿಬ್ಬಂದಿಗಳ ಬಗ್ಗೆ ಅಪಪ್ರಚಾರ ಮಾಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.