ನವಂಬರ್‌ನಲ್ಲಿ ಮಿನಿ ವಿಧಾನ ಸೌಧ ಕಟ್ಟಡ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಬೆಳ್ತಂಗಡಿಗೆ : ಶಾಸಕ ಬಂಗೇರ

Advt_NewsUnder_1
Advt_NewsUnder_1
Advt_NewsUnder_1

2 koti rasthe shilanyasaತೋಟತ್ತಾಡಿ: ನಗರದ ಕೇಂದ್ರದಲ್ಲಿ ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನ ಸೌಧ ಕಟ್ಟಡದ ಉದ್ಘಾಟನೆ, ನಗರ ಪಂಚಾಯತ್ ವ್ಯಾಪ್ತಿಯಲ್ಲಿ 13 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಸೌಲಭ್ಯದ ಉದ್ಘಾಟನೆ ಮತ್ತು ಬೆಳ್ತಂಗಡಿ ಶ್ರೀ ಗುರುದೇವ ಪ. ಪೂ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕಾಗಿ ನವಂಬರ್ ತಿಂಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳ್ತಂಗಡಿಗೆ ಆಗಮಿಸಲಿದ್ದಾರೆ ಎಂದು ಶಾಸಕ ವಸಂತ ಬಂಗೇರ ಘೋಷಿಸಿದರು.
ಸರಕಾರದ ವತಿಯಿಂದ ತೋಟತ್ತಾಡಿ ಮತ್ತು ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳಲಿರುವ ಪ್ರಮುಖ 3 ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಅವರು ಸಭಾ ಕಾರ್ಯಕ್ರಮದಲ್ಲಿ ನಾಗರಿಕರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
3.15 ಕೋಟಿ ರೂ ಕಾಮಗಾರಿಗೆ ಶಿಲಾನ್ಯಾಸ :
ಚಾರ್ಮಾಡಿ- ತೋಟತ್ತಾಡಿ- ತಿಮರಡ್ಡ- ಪೆರ್ನೆಲೆ ಎಸ್.ಟಿ ಕಾಲನಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ 25 ಲಕ್ಷ ರೂ., ಕಕ್ಕಿಂಜೆ- ನೆರಿಯ_ ಪುದುವೆಟ್ಟು ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ 2. ಕೋಟಿ ರೂ., ಮತ್ತು ಕಕ್ಕಿಂಜೆ-ನೆರಿಯ-ಪುದುವೆಟ್ಟು ರಸ್ತೆಯ ಬೆಂದ್ರಾಳ ಎಂಬಲ್ಲಿನ ಸೇತುವೆ ರಚನೆ 65 ಲಕ್ಷ ರೂ. ಈ ಮೂರು ಕಾಮಗಾರಿಗಳಿಗೆ ಶಾಸಕರು ಶಿಲಾನ್ಯಾಸ ನೆರವೇರಿಸಿದರು.
ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡುತ್ತಿಲ್ಲ, ಬಿಜೆಪಿಗರು ತಿಳಿದುಕೊಳ್ಳಲಿ :
ಚಾರ್ಮಾಡಿ ಮತ್ತು ನೆರಿಯ ಈ ಎರಡೂ ಪಂಚಾಯತ್‌ಗಳು ನಮ್ಮ ಪಕ್ಷದ ಆಡಳಿತದಲ್ಲಿಲ್ಲ, ಆದರೂ ಈ ಎರಡು ಪಂಚಾಯತ್ ವ್ಯಾಪ್ತಿಯ ಜನರ ಸಮಸ್ಯೆಗೆ ಸ್ಪಂದಿಸಿ ಒಟ್ಟು 17 ಕೋಟಿ ರೂ. ಗಳಷ್ಟು ಅನುದಾನ ಒದಗಿಸಿಕೊಟ್ಟಿದ್ದೇನೆ. ಆ ಎಲ್ಲಾ ಕಾಮಗಾರಿಗಳಿಗೆ ಟೆಂಡರ್ ಆಗಿದ್ದು ಮುಂದಿನ 5 ತಿಂಗಳಲ್ಲಿ ಕಾಮಗಾರಿ ನಡೆದು ನನ್ನ ಶಾಸಕತ್ವದ ಅವಧಿಯಲ್ಲಿ ನಾನೇ ಅವುಗಳನ್ನು ಉದ್ಘಾಟಿಸಲಿದ್ದೇನೆ. ನಾನು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತೇನೆ ಎಂಬ ಆರೋಪ ಬಿಜೆಪಿಗರು ಮಾಡುತ್ತಿದ್ದು ಇದರಿಂದ ಅವರು ಸತ್ಯಾಂಶ ಮನವರಿಕೆ ಮಾಡಿಕೊಳ್ಳಲಿ ಎಂದು ಶಾಸಕರು ಪ್ರತ್ಯುತ್ತರ ನೀಡಿದರು.
ಸಿದ್ದರಾಮಯ್ಯರಿಂದ ದೇಶದಲ್ಲೇ ನಂಬರ್ 1 ಆಡಳಿತ, ನನ್ನದು ಮುಂದೆಂದೂ ಯಾರೂ ಮೀರಿಸಲಾರದ ರೀತಿಯ ಅಭಿವೃದ್ಧಿ ಅನುಷ್ಠಾನ : ರಾಜ್ಯದ ಆಡಳಿತ ಚುಕ್ಕಾಣಿ
ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಂತರವಾಗಿ ಬಡವರ ಪರ ಕಲ್ಯಾಣ ಯೋಜನೆಗಳನ್ನು ತರುತ್ತಿದ್ದು, ಇಡೀ ದೇಶದಲ್ಲೇ ಮಾದರಿ ಮುಖ್ಯಮಂತ್ರಿಯಾಗಿದ್ದಾರೆ. ನನ್ನನ್ನೂ ಕೂಡ ಈ ತಾಲೂಕಿನ ಜನತೆ 5 ಬಾರಿ ಗೆಲ್ಲಿಸಿ ತಮ್ಮೆಲ್ಲರ ಸೇವೆ ಮಾಡುವ ಅವಕಾಶ ಕಲ್ಪಿಸಿದ್ದು, ಈ ಎಲ್ಲಾ ಅವಧಿಗಳಲ್ಲಿ ನಾನು ಮಾಡುತ್ತಿರುವ ಅಭಿವೃದ್ಧಿ ಅನುಷ್ಠಾನ ಯೋಜನೆಗಳು ಇನ್ನೆಂದೂ ಯಾವ ಶಾಸಕ ಬಂದರೂ ಮೀರಿಸಲಾರದಷ್ಟು ಮಾಡಿ ದಾಖಲೆ ನಿರ್ಮಿಸಿಹೋಗಬೇಕು ಎಂಬುದೇ ನನ್ನ ಗುರಿ. ಮುಂದಿನ ತಲೆಮಾರು, ಮೊಮ್ಮಕ್ಕಳು, ಮರಿಮಕ್ಕಳು ಪ್ರಬುಧ್ಧರಾಗಿ ಬಂದಾಗ, ಇದು ನಮ್ಮ ಅಜ್ಜ, ಮುತ್ತಾತ ಮಾಡಿ ಹೋದ ಅಭಿವೃದ್ಧಿ ಯೋಜನೆಗಳು ಎಂದು ನೆನಪಿಸಿಕೊಳ್ಳುವ ರೀತಿಯಲ್ಲಿ ಕೆಲಸ ಮಾಡಿ ಹೋಗಲಿದ್ದೇನೆ ಎಂದರು.
ಮತದಾರರಿಗೆ ಅಗೌರವ ತರುವ ಕೆಲಸ ಮಾಡಿಲ್ಲ : ನನ್ನನ್ನು ಈ ಕ್ಷೇತ್ರದ ಜನ 5 ಬಾರಿ ಶಾಸಕರಾಗಿ ಆರಿಸಿ ಆಶೀರ್ವದಿಸಿ ಕಳಿಸಿದ್ದೀರಿ, ಒಂದು ಬಾರಿ ಶಾಸಕರಾದ ವರೂ ಬಹಳ ದೊಡ್ಡ ಆರೋಪಗಳಿಗೆಲ್ಲಾ ತುತ್ತಾಗಿದ್ದನ್ನು ನೀವು
ಕಂಡಿದ್ದೀರಿ. ಆದರೆ ನನ್ನ ಈ ಸುದೀರ್ಘ ಅವಧಿಯಲ್ಲಿ ಯಾವುದೇ ಆರೋಪಗಳು ನನ್ನ ಮೇಲೆ ಇಲ್ಲ, ಆ ಮೂಲಕ ಮತದಾರರಾಗಿರುವ, ಕ್ಷೇತ್ರದ ಜನರಾಗಿರುವ ನಿಮಗೆ ಅಗೌರವ ರೀತಿಯಲ್ಲಿ ನಾನು ಎಲ್ಲೂ ಯಾವತ್ತೂ ನಡೆದುಕೊಂಡಿಲ್ಲ ಎಂಬ ಆತ್ಮತೃಪ್ತಿ ಮತ್ತು ಗೌರವ ನನ್ನಲ್ಲಿದೆ ಎಂದು ಶಾಸಕರು ಸಭೆಯಲ್ಲಿ ತಿಳಿಸಿದರು.
ಸನ್ಮಾನ :
ಬೆಂದ್ರಾಳ ಮೈದಾನದಲ್ಲಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಶೈಲಜಾ ವಹಿಸಿದ್ದರು. ಸಭೆಯಲ್ಲಿ ಶಾಸಕರುನ್ನು ಚಾರ್ಮಾಡಿ ಗ್ರಾ.ಪಂ ವತಿಯಿಂದ ಅಧ್ಯಕ್ಷೆ ಶೈಲಜಾ ಮತ್ತು ಸದಸ್ಯರುಗಳು ಮತ್ತು ಪಿಡಿಒ ಸನ್ಮಾನಿಸಿದರೆ, ಅಭಿಮಾನಿಗಳ ಪರವಾಗಿ ಇನ್ನೊಂದು ಸನ್ಮಾನ ಕೂಡ ನಡೆಯಿತು.
ವೇದಿಕೆಯಲ್ಲಿ ನೆರಿಯ ಗ್ರಾ.ಪಂ ಅಧ್ಯಕ್ಷ ಪಿ ಮುಹಮ್ಮದ್, ಉಜಿರೆ ಕ್ಷೇತ್ರದ ಜಿ.ಪಂ ಸದಸ್ಯೆ ನಮಿತಾ ಕೆ ಪೂಜಾರಿ, ತಾ.ಪಂ ಚಾರ್ಮಾಡಿ ಕ್ಷೇತ್ರದ ಸದಸ್ಯ ಕೊರಗಪ್ಪ ಗೌಡ, ನೆರಿಯ ಕ್ಷೇತ್ರದ ಸದಸ್ಯ ವಿ.ಟಿ ಸೆಬಾಸ್ಟಿಯನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮತ್ತು ಶಿಲಾನ್ಯಾಸದ ಸ್ಥಳದಲ್ಲಿ ಚಾರ್ಮಾಡಿ ಗ್ರಾ.ಪಂ ಸದಸ್ಯರಾದ ಶಾಜಿ, ದೇಜಪ್ಪ ಪೂಜಾರಿ, ಮುಹಮ್ಮದ್, ಅಬೂಬಕ್ಕರ್, ಸೆಕೀನಾ, ಶೋಭಾ, ದೇವಕಿ, ಶೋಭಾ ಶಿಬಿ, ಮಾಜಿ ಅಧ್ಯಕ್ಷ ಮಮ್ಮಿಕುಂಞಿ ಅರೆಕ್ಕಲ್, ಪ್ರಮುಖರಾದ ಬಿ ಅಶ್ರಫ್ ನೆರಿಯ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗ್ರೇಸಿಯನ್ ವೇಗಸ್, ಯಶೋಧರ ಸುವರ್ಣ ವಳಸಾರಿ, ಅನಂತರಾವ್ ಚಾರ್ಮಾಡಿ, ಓಬಯ್ಯ ಪೂಜಾರಿ ಚಿಬಿದ್ರೆ, ಆಪದ್ಭಾಂಧವ ಚಾರ್ಮಾಡಿ ಹಸನಬ್ಬ, ಹಮೀದ್ ಚಾರ್ಮಾಡಿ, ಅದ್ದು ಬೀಟಿಗೆ, ಬಾಲಕೃಷ್ಣ ಗೌಡ ಪಾದೆ ಬೀಟಿಗೆ, ಸನತ್ ಮೂರ್ಜೆ, ಎಂ. ಜೆ ಸೆಬಾಸ್ಟಿಯನ್ ನೆರಿಯ, ಪಿ. ಕೆ ರಾಜನ್, ಲೆತೀಫ್ ಕತ್ತರಿಗುಡ್ಡೆ, ಮೊದಲಾದವರು ಉಪಸ್ಥಿತರಿದ್ದರು. ಇಲಾಖಾ ಅಧಿಕಾರಿಗಳಾದ ಲೋಕೋಪಯೋಗಿ ಇಲಾಖಾ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲ, ಸಹಾಯಕ ಅಭಿಯಂತರ ತೌಸೀಫ್, ಕೆ. ಆರ್‌ಐಡಿಯಲ್ ಅಭಿಯಂತರ ಪಾಟೀಲ್, ಸಮಾಜ ಕಲ್ಯಾಣ ಇಲಾಖಾ ತಾ| ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಉಪಸ್ಥಿತರಿದ್ದರು.
ಗ್ರಾ.ಪಂ. ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರದೀಪ್ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.