ಬೆಳ್ತಂಗಡಿ : ಸ್ವಚ್ಛತಾ ಅಭಿಯಾನ

swacchathe 2

swacchathe 1

swacchathe

swacchathe3ಬೆಳ್ತಂಗಡಿ : ವಕೀಲ ಸಂಘ ಬೆಳ್ತಂಗಡಿ ಇದರ ವತಿಯಿಂದ, ನ.ಪಂ ಬೆಳ್ತಂಗಡಿ ಪತ್ರಕರ್ತರ ಸಂಘ ಬೆಳ್ತಂಗಡಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೆಳ್ತಂಗಡಿ ಶಾಖೆ, ರೋಟರಿ ಕ್ಲಬ್ ಬೆಳ್ತಂಗಡಿ, ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಸಂಸ್ಥೆ ಬೆಳ್ತಂಗಡಿ, ಮಂಜುಶ್ರೀ ಜೇಸಿಐ ಬೆಳ್ತಂಗಡಿ, ರೋಟರಿ ಆನ್ಸ್ ಕ್ಲಬ್ ಬೆಳ್ತಂಗಡಿ, ರಿಕ್ಷಾ ಮಾಲಕರ ಮತ್ತು ಚಾಲಕರ ಸಂಘ ಸಂತೆಕಟ್ಟೆ, ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಶನ್ ಮತ್ತು ಜೌಷಧಿ ವ್ಯಾಪಾರಸ್ಥರ ಸಂಘ ಬೆಳ್ತಂಗಡಿ ಇದರ ಸಹಭಾಗಿತ್ವದಲ್ಲಿ ಇಂದು(ಅ.2) ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಪ್ರಯುಕ್ತ ಬೆಳ್ತಂಗಡಿ ಪೇಟೆಯಿಂದ ನ್ಯಾಯಾಲಯದ ಆವರಣದವರೆಗೆ ಸ್ವಚ್ಛತಾ ಅಭಿಯಾನ ನಡೆಯಿತು.
ಕಾರ್ಯಕ್ರಮವನ್ನು ಬೆಳ್ತಂಗಡಿ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಸತೀಶ್ ಎಸ್.ಟಿ. ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಸೇವಿಯರ್ ಪಾಲೇಲಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ನ.ಪಂ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ನ.ಪಂ ಉಪಾಧ್ಯಕ್ಷ, ಬೆಳ್ತಂಗಡಿ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಗದೀಶ ಡಿ., ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ್ ಬಳಂಜ, ಬೆಳ್ತಂಗಡಿ ಶಾಖೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನ ಪ್ರಬಂಧಕರ ಎಚ್. ಶೀನಪ್ಪ ನಾಕ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಸುಧೀರ್ ಪ್ರಭು, ಸ್ಥಳೀಯ ಸಂಸ್ಥೆ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್‌ನ ಅಧ್ಯಕ್ಷ ರಮಾನಂದ ಸಾಲ್ಯಾನ್, ಬೆಳ್ತಂಗಡಿ ಮಂಜುಶ್ರೀ ಜೇಸಿಐ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್, ಬೆಳ್ತಂಗಡಿ ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ವೈಷ್ಣವಿ ಪ್ರಭು, ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಶನ್ ಉಪಾಧ್ಯಕ್ಷ ಸೆಬಾಸ್ಟಿಯನ್ ಕೆ.ಕೆ., ಸಂತೆಕಟ್ಟೆ ರಿಕ್ಷಾ ಮಾಲಕ ಮತ್ತು ಚಾಲಕರ ಸಂಘದ ಅಧ್ಯಕ್ಷ ಬಾಬು ಗೌಡ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.