ನ.ಪಂ : ಪೌರಕಾರ್ಮಿಕರ ದಿನಾಚರಣೆ-ಸನ್ಮಾನ ಅ.1ರಿಂದ ನ.ಪಂ. ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ: ಮುಗುಳಿ

Powra karmika dinacharane sanmanaಬೆಳ್ತಂಗಡಿ: ಸರಕಾರದ ಆದೇಶದಂತೆ ಬೆಳ್ತಂಗಡಿ ನಗರ ಪಂಚಾಯತು ವತಿಯಿಂದ ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮವು ಸೆ.23ರಂದು ನಗರ ಪಂಚಾಯತು ಸಭಾಂಗಣದಲ್ಲಿ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಅವರು ಮಾತನಾಡಿ, ಬೆಳ್ತಂಗಡಿ ನಗರದಲ್ಲಿ 15 ಮಂದಿ ಪೌರಕಾರ್ಮಿಕರು ಇರಬೇಕಿತ್ತು ಆದರೆ ಇಲ್ಲಿರುವುದು ಒಬ್ಬರು ಮಾತ್ರ, ಇತರ 11 ಮಂದಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಗರ ಸ್ವಚ್ಛತೆಯನ್ನು ಪೌರಕಾರ್ಮಿಕರು ಉತ್ತಮವಾಗಿ ನಿರ್ವಹಿಸುತ್ತಿದ್ದು, ಸಾರ್ವಜನಿಕರಿಂದಲೂ ಉತ್ತಮ ಅಭಿಪ್ರಾಯ ಬರುತ್ತಿದ್ದು, ನ.ಪಂ.ದ ಆಡಳಿತ ಮಂಡಳಿ ಮತ್ತು ಪಂಚಾಯತಕ್ಕೆ ಉತ್ತಮ ಹೆಸರು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ಅಕ್ಟೋಬರ್ 1 ರಿಂದ ಬೆಳ್ತಂಗಡಿ ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ಧರಿಸಲಾಗಿದೆ. ಇದರ ಬಗ್ಗೆ ಎಲ್ಲಾ ಅಂಗಡಿಗಳಿಗೂ ಕರಪತ್ರ ಹಂಚಲಾಗಿದೆ. ಗ್ರಾಹಕರಿಗೆ ಪ್ಲಾಸ್ಟಿಕ್ ಬ್ಯಾಗ್ ಕೊಡುವ ಅಂಗಡಿಯವರಿಗೆ ಮತ್ತು ಬಳಕೆ ಮಾಡುವ ಗ್ರಾಹಕರಿಗೂ ದಂಡ ಹಾಕುವಂತೆ ನ್ಯಾಯಾಲಯದ ಆದೇಶ ಕೂಡಾ ಇದೆ. ಇದರ ಬಗ್ಗೆ ಗ್ರಾಹಕರು ಮತ್ತು ವ್ಯಾಪಾರಸ್ಥರು ಸಹಕರಿಸಬೇಕು ಎಂದರು. ಸಮಾರಂಭದಲ್ಲಿ ಹಿರಿಯ ಪೌರಕಾರ್ಮಿಕ ರವಿ ಅವರನ್ನು ನ.ಪಂ. ವತಿಯಿಂದ ಶಾಲು ಹೊದಿಸಿ, ನಗದು ಸಹಿತ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನ.ಪಂ. ಉಪಾಧ್ಯಕ್ಷ ಜಗದೀಶ್ ಡಿ, ಸದಸ್ಯರಾದ ಸಂತೋಷ್ ಕುಮಾರ್ ಜೈನ್, ಮಮತಾ ಶೆಟ್ಟಿ, ನಳಿನಿ, ಲಲಿತಾ, ಶರತ್, ರಾಜೇಶ್, ಮುಖ್ಯಾಧಿಕಾರಿ ಜೆಸಿಂತಾ ಲೂವಿಸ್, ಇಂಜಿನಿಯರ್ ಮಹಾವೀರ್, ಯೋಜನಾಧಿಕಾರಿ ವೆಂಕಟ್ರಮಣ ಶರ್ಮ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪಂಚಾಯತು ಸಿಬ್ಬಂದಿ ವಿಜಯಕುಮಾರ್ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.