ಬೆಳ್ತಂಗಡಿಯಲ್ಲಿ ವರ್ಲ್ಡ್ ಫಾರ್ಮಾಸಿಸ್ಟ್ ದಿನಾಚರಣೆ ಕ್ಷಯ ರೋಗ ಮುಕ್ತ ಭಾರತ : ಮಾಹಿತಿ ಕಾರ್ಯಗಾರ

Avshadha vyaparasthara sangada dinacharaneಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ದ.ಕ. ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳು, ದ.ಕ. ಜಿಲ್ಲಾ ಉಪ ಔಷಧ ನಿಯಂತ್ರಣಾಧಿಕಾರಿಗಳು ಮತ್ತು ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿಗಳು ಇವರ ಸಂಯುಕ್ತ ಆಶ್ರಯದಲ್ಲಿ ಕ್ಷಯ ರೋಗ ಮುಕ್ತ ಭಾರತ ಮಾಹಿತಿ ಕಾರ್ಯಗಾರ ಮತ್ತು ವರ್ಲ್ಡ್ ಫಾರ್ಮಾಸಿಸ್ಟ್ ದಿನಾಚರಣೆ ಸೆ.25 ರಂದು ಬೆಳ್ತಂಗಡಿ ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಕ್ಷಯ ರೋಗ ನಿಯಂತ್ರಕ ಡಾ| ಬದ್ರುದ್ದೀನ್ ಎಂ.ಎನ್. ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಕ್ಷಯ ರೋಗ ಎಂಬುದು ಅನಾದಿಯಿಂದಲೂ ಇದ್ದ ಕಾಯಿಲೆ, ಇದರ ನಿವಾರಣೆಗೆ ನಿರಂತರವಾಗಿ ಕಾರ್ಯಕ್ರಮಗಳು ನಡೆಯುತ್ತಾ ಬಂದಿದೆ. ಕ್ಷಯ ರೋಗ ಮುಕ್ತ ಭಾರತ ನಿರ್ಮಾಣದಲ್ಲಿ ನಾವೆಲ್ಲ ಕೈಜೋಡಿಸಬೇಕಾಗಿದೆ ಎಂದು ಕರೆ ನೀಡಿ, ಕ್ಷಯ ರೋಗ ನಿವಾರಣೆಗೆ ಫಾರ್ಮಾಸಿಸ್ಟ್‌ಗಳು ನೀಡಬೇಕಾದ ಮಾಹಿತಿ ಬಗ್ಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಡಿ. ಜಗದೀಶ್ ಮಾತನಾಡಿ, ಔಷಧಿ ವ್ಯಾಪಾರಸ್ಥರು ಮತ್ತು ಫಾರ್ಮಾಸಿಸ್ಟ್ ಗಳು ಕ್ಷಯ ರೋಗ ಮುಕ್ತ ಭಾರತ ನಿರ್ಮಾಣಕ್ಕೆ ತಮ್ಮದೇ ಆದ ವಿಶೇಷ ಸೇವೆಯನ್ನು ನೀಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೊಸ, ಹೊಸ ಮೆಡಿಕಲ್ ಶಾಪ್ ತೆರೆಯುವುದರ ಬದಲು, ಪ್ಯಾರಮೆಡಿಕಲ್‌ನಲ್ಲಿ ವಿಪುಲ ಅವಕಾಶವಿದ್ದು, ತಮ್ಮ ಮಕ್ಕಳ ಬಗ್ಗೆ ಚಿಂತನೆ ನಡೆಸಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಹಾಯಕ ಔಷಧ ನಿಯಂತ್ರಕರು-1 ವೃತ್ತ ಮಂಗಳೂರು ರಮಾಕಾಂತ ಕುಂಟೆ, ಜಿಲ್ಲಾ ಔಷಧ ಪರೀಕ್ಷಕ ಧನಂಜಯ ಹೆಚ್, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು ಶೆಟ್ಟಿ, ಬೆಳ್ತಂಗಡಿ ದಾಮೋದರ ಆಸ್ಪತ್ರೆಯ ಡಾ| ಸುಧೀರ್ ಪ್ರಭು ಮಾತನಾಡಿ ವರ್ಲ್ಡ್ ಫಾರ್ಮಾಸಿಸ್ಟ್ ದಿನಾಚರಣೆಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಹಿರಿಯ ಫಾರ್ಮಾಸಿಸ್ಟ್ ಕಜೆಕಾರು ಮೆಡಿಕಲ್ ಮಾಲಕ ನವೀನ್ ಇವರನ್ನು ಸಂಘದ ಪರವಾಗಿ ಶಾಲು ಹೊದಿಸಿ, ಪೇಟ ತೊಡಿಸಿ ಸನ್ಮಾನಿಸಲಾಯಿತು.
ಅಮರ್‌ಡ್ರಗ್ ಹೌಸ್ ಬೆಳ್ತಂಗಡಿಯ ಸುಜಾತ ಇವರ ಪ್ರಾರ್ಥನೆ ಬಳಿಕ ಡಿ. ಜಗದೀಶ್ ಸ್ವಾಗತಿಸಿದರು. ಗುರುವಾಯನಕೆರೆ ಚಂದ್ರ ಮೆಡಿಕಲ್‌ನ ಮಾಲಕ ವೆಂಕಟ್ರಮಣ ಭಟ್ ಸನ್ಮಾನಿತರನ್ನು ಪರಿಚಯಿಸಿದರು. ಸುಜಿತ್ ಭಿಡೆ, ಶ್ರೀಧರ್ ಉಜಿರೆ, ಅಶ್ವಿನಿ, ಮುರಳೀಧರ್ ಅತಿಥಿಗಳನ್ನು ಗೌರವಿಸಿದರು. ಶಿಕ್ಷಕ ಲಯನ್ಸ್ ಕ್ಲಬ್ ಅಧ್ಯಕ್ಷ ಧರಣೇಂದ್ರ ಕೆ. ಜೈನ್ ಕಾರ್ಯಕ್ರಮ ನಿರೂಪಿಸಿ, ಸಂಘದ ಕಾರ್ಯದರ್ಶಿ ಪ್ರಕಾಶ್. ಹೆಚ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.