ಮದುವೆ ಸೀರೆಗಳ ಪ್ರತ್ಯೇಕ ವಿಭಾಗದೊಂದಿಗೆ ಉಜಿರೆ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಶುಭಾರಂಭ

durga textiles 1ಉಜಿರೆ : ತಾಲೂಕಿನ ಎಲ್ಲಾ ಗ್ರಾಹಕರ ಪ್ರೀತಿ ವಿಶ್ವಾಸಗಳಿಸಿದ ನವೀನ ಮಾದರಿಯ ವಸ್ತ್ರವಿನ್ಯಾಸಗಳ ಅಪಾರ ಸಂಗ್ರಹದ ನವೀಕೃತ ಹವಾನಿಯಂತ್ರಿತ ಮಳಿಗೆ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ರೆಡಿಮೇಡ್ಸ್ ಉಜಿರೆಯ ಹೃದಯ ಭಾಗದ ಶ್ರೀ ದುರ್ಗಾ ಕಾಂಪ್ಲೇಕ್ಸ್‌ನಲ್ಲಿ ಸೆ-22 ರಂದು ಶುಭಾರಂಭಗೊಂಡಿತು.
ವಿಶ್ವಾಸರ್ಹ ಉತ್ಕೃಷ್ಟ ಉಡುಪುಗಳಿಗೆ ಮನೆಮಾತಾದ ಶ್ರೀ ದುರ್ಗಾ ವಿಸ್ತೃತ ಸ್ಥಳಾವಕಾಶದಲ್ಲಿ ಮದುವೆ ಸೀರೆಗಳ ಪ್ರತ್ಯೇಕ ವಿಭಾಗದೊಂದಿಗೆ ಪ್ರಾರಂಭಗೊಂಡಿದೆ. ಗ್ರಾಹಕರ ಮನವೊಪ್ಪುವ ವೈವಿಧ್ಯಮಯ ವಿನ್ಯಾಸ ಹಾಗೂ ಆಕರ್ಷಣೆಯ ಉಡುಪುಗಳು ಅತೀ ಕಡಿಮೆ ದರದಲ್ಲಿ ಲಭ್ಯವಿವೆ. ಸಿಬ್ಬಂದಿಯ ನಗುಮುಖದ ಸೇವೆಯೇ ಗ್ರಾಹಕರ ಸಂತೃಪ್ತಿ ಸಂತೋಷಕ್ಕೆ ಕಾರಣವಾಗಬಲ್ಲದು. ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಇದುವರೆಗಿನ ಉತ್ತಮ ಗುಣಮಟ್ಟದ ನಂಬುಗೆಯ ಸೇವಾ ವೈಖರಿಯನ್ನು ಮತ್ತಷ್ಟು ವಿಸ್ತರಿಸಿ ಗ್ರಾಹಕರನ್ನು ಸಂತೃಪ್ತಿ, ಸಂತುಷ್ಟಗೊಳಿಸಲು ಕಟಿಬದ್ಧವಾಗಿದೆ. ನವ ನವೀನ ಫ್ಯಾಷನ್ನಿನ ವಸ್ತ್ರ ವೈವಿಧ್ಯಗಳು ಗ್ರಾಹಕರ ಮನಸೂರೆಗೊಳ್ಳುವುದರೊಂದಿಗೆ ಆರಂಭಗೊಂಡಿದೆ.
ನೂತನ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್ ಮಳಿಗೆಯಲ್ಲಿ ವಿವಿಧ ವಿನ್ಯಾಸದ ಸೀರೆಗಳು, ಚೂಡಿದಾರ್ ಪೀಸ್, ಟಾಪ್ಸ್, ನೈಟಿ, ರೇಡಿಮೇಡ್ ಶರ್ಟ್, ಪ್ಯಾಂಟ್, ಶರ್ಟ್ ಪೀಸ್, ಪ್ಯಾಂಟ್ ಪೀಸ್, ಟೀ-ಶರ್ಟ್ಸ್, ಜೀನ್ಸ್ ಪ್ಯಾಂಟ್, ಮಕ್ಕಳ ಬಗೆ ಬಗೆಯ ವಿನ್ಯಾಸದ ಬಟ್ಟೆಗಳು, ಯುನಿಫಾರಂಗಳು ಟವೆಲ್ಸ್, ಒಳ ಉಡುಪುಗಳು, ಸೀಜನಲ್ ಐಟಮ್‌ಗಳು ಹಾಗೂ ಮನೆಮಂದಿಗೆಲ್ಲಾ ಎಲ್ಲಾ ಋತುಮಾನಗಳಲ್ಲಿ ಬೇಕಾಗುವ ವೈವಿಧ್ಯಮಯ ಉಡುಪುಗಳು ಅತೀ ಕಡಿಮೆ ದರದಲ್ಲಿ ದೊರೆಯಲಿವೆ ಎಂದು ಶ್ರೀ ದುರ್ಗಾದ ಮಾಲಕ ಮೋಹನ್ ಚೌಧರಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.