ಬೆಳ್ತಂಗಡಿ ವಕೀಲರ ಸಂಘದ ಅಧಕ್ಷರಾಗಿ ಸೇವಿಯರ್ ಪಾಲೇಲಿ ಆಯ್ಕೆ

suddi COLORpdf BLDY.p65ಬೆಳ್ತಂಗಡಿ : ಬೆಳ್ತಂಗಡಿ ವಕೀಲರ ಸಂಘದ ಮುಂದಿನ 2 ವರ್ಷದ ಅವಧಿಗೆ ಅಧ್ಯಕ್ಷರಾಗಿ ಸೇವಿಯರ್ ಪಾಲೇಲಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮನೋಹರ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿರಿಯ ವಕೀಲರ ಸಮಿತಿ ಅಧಕ್ಷರಾಗಿ ಶಶಿಕಿರಣ್ ಜೈನ್ ಆಯ್ಕೆಯಾಗಿದ್ದಾರೆ.
ಉಪಾಧಕ್ಷರಾಗಿ ಶ್ರೀನಿವಾಸ ಗೌಡ, ಕೋಶಾಧಿಕಾರಿಯಾಗಿ ಗಣೇಶ್ ಗೌಡ ಮತ್ತು ಜೊತೆ ಕಾರ್ಯದರ್ಶಿಯಾಗಿ ಮಮ್ತಾಜ್ ಬೇಗಂ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ.ಕೆ ಧನಂಜಯ ರಾವ್, ಜೆ. ಕೆ ಪೌಲ್, ಬದರಿನಾಥ ಸಂಪಿಗೆತ್ತಾಯ, ಶೈಲೇಶ್ ಟೋಸರ್ ಮತ್ತು ಸುಭಾಶಿನಿ ಅನಂತ್ ಆಯ್ಕೆಯಾಗಿದ್ದಾರೆ.
ವಕೀಲರ ಸಂಘದ ವಾರ್ಷಿಕ ಮಹಾಸಭೆಯ ಅಧಕ್ಷತೆಯನ್ನು ನಿರ್ಗಮನ ಅಧಕ್ಷರಾದ ಸುಬ್ರಹ್ಮಣ್ಯ ಕುಮಾರ್, ಅಗರ್ತ ವಹಿಸಿದ್ದರು. ಚುನಾವಣಾಧಿಕಾರಿಯಾಗಿ ಹಿರಿಯ ವಕೀಲರಾದ ಶಿವ ಕುಮಾರ್, ಎಸ್. ಎಂ ಕಾರ್ಯನಿರ್ವಹಿಸಿದ್ದರು. ನಿರ್ಗಮನ ಉಪಾದ್ಯಕ್ಷರಾದ ವಸಂತ ಮರಕಡ ಸ್ವಾಗತಿಸಿ, ನಿರ್ಗಮನ ಕಾರ್ಯದರ್ಶಿ ಶಿವಯ್ಯ ಎಸ್. ಎಲ್ ವರದಿ ವಾಚಿಸಿದರು. ಸುಭಾಶಿನಿ ಅನಂತ್ ಕಾರ್ಯಕ್ರಮ ನಿರೂಪಿಸಿದರು. ನಿಯೋಜಿತ ಕಾರ್ಯದರ್ಶಿ ಮನೋಹರ ಕುಮಾರ್ ವಂದಿಸಿದರು.
ಅದ್ಯಕ್ಷರಾಗಿ ಆಯ್ಕೆಯಾದ ಸೇವಿಯರ್ ಪಾಲೇಲಿಯವರು ಸಿರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಶನ್‌ನ ರಾಜ್ಯ ಅಧ್ಯಕ್ಷರಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿಯುತ್ತಿದ್ದಾರೆ. ಪ್ರಧಾನ ಕಾರ್ಯದರ್ಶಿ ಮನೋಹರ ಕುಮಾರ್ ಇಳಂತಿಲ ಗ್ರಾಮ ಪಂಚಾಯತ್ ಮಾಜಿ ಅಧಕ್ಷರಾಗಿದ್ದು ಹಾಲಿ ಸದಸ್ಯರಾಗಿರುತ್ತಾರೆ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.