ಬೆಳ್ತಂಗಡಿ ಮದರ್ ತೆರೇಸಾ ರಸ್ತೆ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

Theresa rasthe udgataneಬೆಳ್ತಂಗಡಿ : ಬೆಳ್ತಂಗಡಿ ನ.ಪಂ ೨ನೇ ವಾರ್ಡ್‌ನಲ್ಲಿ ಸುಮಾರು ರೂ.2 ಲಕ್ಷ ವೆಚ್ಚದಲ್ಲಿ ನೂತನವಾಗಿ ಇಂಟರ್‌ಲಾಕ್ ಅಳವಡಿಸಿ ನಿರ್ಮಿಸಲಾದ `ಮದರ್ ತೆರೇಸಾ ರಸ್ತೆ’ಯ ಉದ್ಘಾಟನಾ ಸಮಾರಂಭ ಸೆ.15ರಂದು ಜರುಗಿತು.
ನೂತನ ರಸ್ತೆಯನ್ನು ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಉದ್ಘಾಟಿಸಿ, ಈ ವಾರ್ಡ್‌ನ ಸದಸ್ಯ ಹಾಗೂ ನ.ಪಂ. ಉಪಾಧ್ಯಕ್ಷ ಜಗದೀಶ್ ಅವರ ಮುತುವರ್ಜಿಯಲ್ಲಿ ಇಂಟರ್‌ಲಾಕ್ ಹಾಕಿ ರಸ್ತೆ ನಿರ್ಮಿಸಿ ಈ ಭಾಗದ ಜನರ ಬೇಡಿಕೆಯನ್ನು ಈಡೇರಿಸಲಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯಬೇಕಾದರೂ ಜನರ ಸಹಕಾರ ಬೇಕು ಎಂದರು.
ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನ ಪ್ರಧಾನ ಧರ್ಮಗುರು ರೆ| ಫಾ| ಬೊನವೆಂಚರ್ ನಜ್ರೆತ್ ನಾಮಫಲಕವನ್ನು ಅನಾವರಣಗೊಳಿಸಿ ಶುಭ ಹಾರೈಸಿದರು. ನಪಂ ಉಪಾಧ್ಯಕ್ಷ ಜಗದೀಶ್ ಡಿ. ಅವರು ಮಾತನಾಡಿ ಈ ರಸ್ತೆ ನಿರ್ಮಾಣ ಸೇರಿದಂತೆ ಈ ಭಾಗದ ಅಭಿವೃದ್ಧಿಗೆ ನ.ಪಂ ಅಧ್ಯಕ್ಷರು ಪೂರ್ಣ ಸಹಕಾರ ನೀಡಿದ್ದಾರೆ. ಚುನಾವಣೆ ಸಮಯ ನಾನು ನೀಡಿದ ಆಶ್ವಾಸನೆಗಳನ್ನು ಅಧ್ಯಕ್ಷರ ಸಹಕಾರದಲ್ಲಿ ಈಡೇರಿಸುತ್ತಾ ಬಂದಿದ್ದೇನೆ. ಇನ್ನು ನೇತಾಜಿ ರಸ್ತೆ ಮತ್ತು ಅಲ್ಲಾಟ ಬಡವಣೆ ಅಭಿವೃದ್ಧಿ ಬೇಡಿಕೆ ಇದ್ದು, ಅದನ್ನು ಈಡೇರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ನ್ಯಾಯವಾದಿ ಅಲೋಸೀಯಸ್ ಲೋಬೊ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆನ್ನಿ ಟೀಚರ್ ಸ್ವಾಗತಿಸಿ, ಪಿಲಿಚಂಡಿಕಲ್ಲು ಶಾಲಾ ಮುಖ್ಯೋಪಾಧ್ಯಾಯ ರೋನಾಲ್ಡ್ ಡಿ’ಮೆಲ್ಲೋ ವಂದಿಸಿದರು.
ಕಾರ್ಯಕ್ರಮದಲ್ಲಿ ಸ್ಥಳದಾನಿ ತೋಮಸ್ ಲೋಬೋ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಹೆನ್ರಿ ಲೋಬೊ, ನ.ಪಂ ಮುಖ್ಯಾಧಿಕಾರಿ ಜೆಸಿಂತಾ ಲೂಯಿಸ್, ಇಂಜಿನಿಯರ್ ಮಹಾವೀರ ಆರಿಗಾ, ಕಾಶ್ಮೀರ್ ಮಿನೇಜಸ್, ವಿಜಯ ಸಿಕ್ವೇರಾ, ರೋನಾಲ್ಡ್ ಲೋಬೊ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.