HomePage_Banner_
HomePage_Banner_

ಶಿಶಿಲ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ-ಶಂಕುಸ್ಥಾಪನೆ, ಐದು ವರ್ಷಗಳಲ್ಲಿ ತಾಲೂಕಿನಲ್ಲಿ ರೂ.1ಸಾವಿರ ಕೋಟಿ ಅನುದಾನದ ಅಭಿವೃದ್ಧಿ ಕಾಮಗಾರಿ ಅನುಷ್ಠಾನ: ಬಂಗೇರ

shishila sankustapane 1ಶಿಶಿಲ: ಚುನಾವಣೆ ವೇಳೆ ನೀಡಿರುವ 165 ಭರವಸೆಗಳಲ್ಲಿ ಶೇ 95 ಈಗಾಗಲೇ ಈಡೇರಿದ್ದು, ರಾಜ್ಯ ಸರಕಾರ ದೇಶದಲ್ಲೇ ಮಾದರಿ ಸರಕಾರ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಬೆಳ್ತಂಗಡಿ ತಾಲೂಕಿಗೆ ಕಳೆದ ಐದು ವರ್ಷಗಳಲ್ಲಿ ರೂ. 1ಸಾವಿರ ಕೋಟಿ ಅನುದಾನವನ್ನು ವಿವಿಧ ಕಾಮಗಾರಿಗಳಿಗೆ ಸರಕಾರ ಬಿಡುಗಡೆ ಮಾಡಿದ್ದು, ಇದನ್ನು ಎಲ್ಲಾ ಗ್ರಾಮಗಳಿಗೆ ಹಂಚಿಕೆ ಮಾಡಿದ್ದೇನೆ ಎಂದು ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.
ದ.ಕ. ಜಿಲ್ಲಾ ಪಂಚಾಯತ್, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಬೆಳ್ತಂಗಡಿ, ತಾ.ಪಂ. ಬೆಳ್ತಂಗಡಿ, ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ ಹಾಗೂ ಶಿಶಿಲ ಗ್ರಾ.ಪಂ. ಇದರ ಸಂಯುಕ್ತ ಆಶ್ರಯದಲ್ಲಿ ಶಿಶಿಲ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮವು ಸೆ. 18 ರಂದು ನಡೆಯಿತು.
ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಶಾಸಕರು ಕಳೆದ 5 ವರ್ಷಗಳ ಅವಧಿಗಳಲ್ಲಿ ಈ ತಾಲೂಕಿನ ಶಾಸಕನಾಗಿ ಜನರ ಬೇಡಿಕೆಗಳನ್ನು ಬಹುಪಾಲು ಈಡೇರಿಸಿದ ಸಾರ್ಥಕತೆ ನನ್ನಲ್ಲಿದೆ. ರಾಜ್ಯ ಸರಕಾರ ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇದುವರೆಗೆ ರಾಜ್ಯದಲ್ಲಿ ಬಂದ ಯಾವುದೇ ಸರಕಾರ ಇಂತಹ ಯೋಜನೆ ಜಾರಿ ಮಾಡಿಲ್ಲ ಎಂದರು.
ಶಿಶಿಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಜಯಂತಿ ಅಧ್ಯಕ್ಷತೆ ವಹಿಸಿ, ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮದ ಜನರು ಕೈಜೋಡಿಸಬೇಕು ಎಂದು ಕರೆ ನೀಡಿದರು. ಬೆಳ್ತಂಗಡಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಮಾತನಾಡಿ, ಪೇರಿಕೆ ರಸ್ತೆಯ ಕೊಟ್ಟೆತ್ತಾರ್ ಸೇತುವೆ ನಿರ್ಮಾಣವಾಗುವಲ್ಲಿ ರಮೇಶ್ ಬಿ. ಅವರ ಪ್ರಯತ್ನವನ್ನು ಶ್ಲಾಘಿಸಿದರು.
ಸನ್ಮಾನ : ಈ ಸಂದರ್ಭದಲ್ಲಿ ಶಿಶಿಲ ಗ್ರಾಮಕ್ಕೆ ಸರಕಾರದಿಂದ ಹಲವಾರು ಕಾಮಗಾರಿಗಳನ್ನು ಮಂಜೂರು ಮಾಡಿಸಿ ಕೊಟ್ಟ ಶಾಸಕ ಕೆ. ವಸಂತ ಬಂಗೇರ ಇವರಿಗೆ ಶಿಶಿಲ ಗ್ರಾ.ಪಂ. ಮತ್ತು ಊರವರ ಪರವಾಗಿ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು. ಗ್ರಾ.ಪಂ. ನೂತನ ಸಭಾಭವನ ನಿರ್ಮಿಸಿದ ಗುತ್ತಿಗೆದಾರ ಮಂಜುನಾಥ ಕಾಮತ್ ಅವರನ್ನು ಪಂಚಾಯತು ವತಿಯಿಂದ ಶಾಸಕರು ಸನ್ಮಾನಿಸಿದರು.
ವೇದಿಕೆಯಲ್ಲಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಬಸವರಾಜ್ ಕೆ. ಅಯ್ಯಣ್ಣನವರ್, ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಸ.ಕಾ ಇಂಜಿನಿಯರ್ ಸಿ.ಆರ್. ನರೇಂದ್ರ, ಸಮಾಜ ಕಲ್ಯಾಣಾಧಿಕಾರಿ ಮೋಹನ್ ಕುಮಾರ್, ಮೆಸ್ಕಾಂ ಧರ್ಮಸ್ಥಳ ಜೆ.ಇ. ಪುಟ್ಟರಾಜು, ಲೋಕೋಪಯೋಗಿ ಇಲಾಖಾ ಇಂಜಿನಿಯರ್ ತೌಸಿಫ್ ಅಹ್ಮದ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ನವೀನ್ ಕುಮಾರ್, ಶಿಶಿಲ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಅಮ್ಮಿ ಬಿ.ಪಿ, ಉಪಾಧ್ಯಕ್ಷೆ ಗೀತಾ, ಗ್ರಾ.ಪಂ. ಸದಸ್ಯರಾದ ಪದ್ಮನಾಭ ಕೆ., ಅಮ್ಮು, ಉಪಸ್ಥಿತರಿದ್ದರು. ಗ್ರಾ.ಪಂ ಸದಸ್ಯ ರಾಜಾರಾಮ ಎನ್.ಎಸ್.ಡಿ ಸ್ವಾಗತಿಸಿದರು. ಕೆಡಿಪಿ ಸದಸ್ಯ ರಮೇಶ್. ಭೈರಕಟ್ಟ ಕಾರ್ಯಕ್ರಮ ನಿರೂಪಿಸಿ ಗ್ರಾ.ಪಂ. ಸದಸ್ಯ ಸೂರಜ್ ನೆಲ್ಲಿತ್ತಾಯ ವಂದಿಸಿದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಕಾಂಗ್ರೆಸ್ ಗ್ರಾಮೀಣ ಬ್ಲಾಕ್ ಅಧ್ಯಕ್ಷ ಶ್ರೀನಿವಾಸ ಕಿಣಿ, ತಾಲೂಕು ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ರೆಖ್ಯ, ಬೆಳ್ತಂಗಡಿ ಎ.ಪಿ.ಎಂ.ಸಿ ಸದಸ್ಯ ಎ.ಸಿ. ಮಾಥ್ಯು, ಹತ್ಯಡ್ಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಡ್ಕಾಡಿ ಜಗನ್ನಾಥ ಗೌಡ , ಮಾಜಿ ತಾ.ಪಂ. ಅಧ್ಯಕ್ಷ ವಿಜಯಕುಮಾರ್ ಜೈನ್, ನಿಡ್ಲೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸೆಬಾಸ್ಟಿಯನ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಬಿ. ಶಿವರಾಮ ಶಿಶಿಲ, ಕಿಸಾನ್ ಘಟಕದ ಗ್ರಾಮ ಸಮಿತಿ ಅಧ್ಯಕ್ಷ ರಾಮಚಂದ್ರ ಕೆ., ಮಾಜಿ ಜಿ.ಪಂ. ಸದಸ್ಯ ನಾರಾಯಣ ಕೆ., ಪ್ರಗತಿ ಪರ ಕೃಷಿಕ ವ್ಯಾಸ ಎನ್.ವಿ, ಇಂಜಿನಿಯರ್ ಕೌಶಿಕ್ ಮುಂತಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.