ತಾಲೂಕಿನ ಇಬ್ಬರು ಸಾಧಕರಿಗೆ ಐಕಾನ್ ಆಫ್ ದಿ ಇಯರ್-2017 ಪ್ರತಿಷ್ಠಿತ ಪ್ರಶಸ್ತಿ

suddi COLORpdf BLDY.p65ಬೆಳ್ತಂಗಡಿ : ಬಳಂಜ ನಿವಾಸಿ ಯುವ ಉದ್ಯಮಿ, ಎನ್ವಿಗ್ರೀನ್ ಬಯೋಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸ್ಥಾಪಕ ಮತ್ತು ಆಡಳಿತ ನಿರ್ದೇಶಕ ಅಶ್ವಥ್ ಹೆಗ್ಡೆ ಬಳಂಜ ಇವರು ದಿ ಬೆಸ್ಟ್ ಯಂಗ್ ಬಿಸಿನೆಸ್ ಮ್ಯಾನ್ ಆಫ್ ದಿ ಇಯರ್ 2017 ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದ ವಿಲಾಸ್ ನಾಯಕ್ ಉಜಿರೆ ಇವರು ಕಲೆ ವಿಭಾಗದಲ್ಲಿ ದಿ ಬೆಸ್ಟ್ ಪೇಂಟಿಂಗ್ ಆರ್ಟಿಸ್ಟ್ ಆಫ್ ದಿ ಇಯರ್ 2017 ಪ್ರಶಸ್ತಿಗಳನ್ನು  ಮುಡಿಲಿಗೇರಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಎರಡು ಯುವ ಸಾಧಕರು ತಾಲೂಕಿನ ಇತಿಹಾಸದಲ್ಲೇ ಪ್ರಥಮ ಭಾರಿಗೆ   ಪ್ರತಿಷ್ಠಿತ ಐಕಾನ್ ಆಫ್  ದಿ ಇಯರ್ ಇಂಡಿಯಾ – 2017  ಪ್ರಶಸ್ತಿಯನ್ನು ಮುಡಿಲಿಗೇರಿಸಿರುವುದು ತಾಲೂಕಿಗೆ ಹೆಮ್ಮೆಯ ವಿಚಾರ. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಕಿರಣ್ ಮೊರೆ ಈ ಪ್ರಶಸ್ತಿಯನ್ನು ಹಸ್ತಾಂತರಿಸಿದರು. ಈ ಕಾರ್ಯಕ್ರಮವನ್ನು ಜಿ ಬಿಸಿನೆಸ್ ವಾಹಿನಿಯ ಸೆಲ್ಫ್ ಮೇಡ್ ಕಾರ್ಯಕ್ರಮದ ಸಹಭಾಗಿತ್ವದಲ್ಲಿ ಎಬಿಆರ್ ಕಾರ್ಪೋರೇಶನ ಆಯೋಜಿಸಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.