ವಿಜ್ಞಾನ-ತಂತ್ರಜ್ಞಾನ ಆರೋಗ್ಯ ಕ್ಷೇತ್ರದಲ್ಲಿ ನಂಬರ್ 1 ಆಗುವುದರಲ್ಲಿ ಭಾರತದ ಭವಿಷ್ಯ ಅಡಗಿದೆ : ಸಿ.ಎನ್.ಆರ್. ರಾವ್

dharmasthala sujnana nidhi vitarane 1ಧರ್ಮಸ್ಥಳ : ಭಾರತ ರತ್ನ, ಕೇವಲ ಐಟಿ, ಬ್ಯಾಂಕಿಂಗ್, ಆರ್ಮಿ, ಎಕನಾಮಿಕ್ಸ್‌ನಿಂದ ದೇಶ ಉದ್ಧಾರವಾಗಲು ಸಾಧ್ಯವಿಲ್ಲ, ಹಾಗಿದ್ದರೆ ಅಮೇರಿಕಾಕ್ಕಿಂತ ಜಾಸ್ತಿ ಆರ್ಮಿ ಶಕ್ತಿ ಹೊಂದಿರುವ ಚೈನಾ ನಂಬರ್ 1 ಆಗಬೇಕಿತ್ತು. ಭಾರತದ ಭವಿಷ್ಯ ವಿಜ್ಞಾನ-ತಂತ್ರಜ್ಞಾನ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನಂಬರ್ 1 ಆಗುವುದರಲ್ಲಿ ಮಾತ್ರ ಇದೆ ಎಂದು ಜವಾಹರ್‌ಲಾಲ್ ನೆಹರು ಅತ್ಯಾಧುನಿಕ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು ಇದರ ಅಧ್ಯಕ್ಷ, ಭಾರತ ರತ್ನ ಪ್ರೊ. ಎ. ಎನ್. ಆರ್. ರಾವ್ ಹೇಳಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ವತಿಯಿಂದ ಸೆ. 18 ರಂದು ಧರ್ಮಸ್ಥಳ ಮಹೋತ್ಸವ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ರಾಜ್ಯದ ಸ್ವ ಸಹಾಯ ಸಂಘಗಳ ಸದಸ್ಯರ ಮಕ್ಕಳಿಗೆ ನೀಡಲಾಗುವ ವಿದ್ಯಾರ್ಥಿ ವೇತನ ಸುಜ್ಞಾನನಿಧಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸರಕಾರ ಕಡಿಮೆ ಖರ್ಚು ಮಾಡುತ್ತಿದೆ, ಯುವ ಪೀಳಿಗೆ ಶ್ರಮವಹಿಸಿ ಕೆಲಸ ಮಾಡುವ ಪ್ರವೃತಿ ಬೆಳೆಸಿಕೊಳ್ಳಬೇಕು, ದೇಶದಲ್ಲಿ 4-5 ಕೋಟಿ ಯಷ್ಟು ಮಕ್ಕಳು ಇಂದಿಗೂ ಶಾಲೆಯಿಂದ ಹೊರಗಿದ್ದಾರೆ, ಅವರನ್ನು ಏಳಿಗೆ ಮಾಡದೇ ಹೊರತು ಭಾರತ ಬದಲಾಯಿಸಲು ಸಾಧ್ಯವಿಲ್ಲ, ಹಳ್ಳಿಯ ಮಕ್ಕಳ ಕೈಯಲ್ಲಿ ಭಾರತದ ಭವಿಷ್ಯವಿದೆ, ಹಳ್ಳಿಯ ಮಕ್ಕಳಲ್ಲಿ ಆದಿವಾಸಿಗಳಲ್ಲಿ ಇರುವ ಉತ್ಸಾಹ ಪಟ್ಟಣದ ಮಕ್ಕಳಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಹಳ್ಳಿಯ ಮಕ್ಕಳಿಗಾಗಿ ಏನನ್ನಾದರೂ ಮಾಡಲೇ ಬೇಕಾಗಿದೆ, ಪ್ರತಿಯೊಬ್ಬ ಮಕ್ಕಳಲ್ಲೂ ಓಬ್ಬ ಐಸ್ಟೀನ್, ನ್ಯೂಟನ್ ಇರುತ್ತಾರೆ, ಅವರನ್ನು ಹುಡುಕುವುದು ನಮ್ಮ ಜವಾಬ್ಧಾರಿ, ಕೇವಲ ಐಟಿ ಉದ್ಯೋಗಕ್ಕಷ್ಟೇ
ಯುವ ಜನತೆಯ ಮನಸ್ಥಿತಿ ಮಿತಿ ಹೇರಿಕೊಂಡಿದೆ. ಅದಕ್ಕಾಗಿಯೇ ಅದೇ ಕ್ಷೇತ್ರದಲ್ಲಿರುವವರು ಅತೀ ಹೆಚ್ಚು ನೇಣಿಗೆ ಶರಣಾಗುವುದನ್ನು ಕಾಣುತ್ತಿದ್ದೇವೆ, ಭಾರತದ ಜನತೆ ಸೋಮಾರಿಗಳಾಗಿದ್ದಾರೆ, ಕೇವಲ 4 ಗಂಟೆ ಮಾತ್ರ ಕೆಲಸ ಮಾಡುವ ಪ್ರೊಫೆಸರ್‌ಗಳೇ ಅಧಿಕಗೊಂಡಿದ್ದಾರೆ ಎಂದರು.
ಆಧ್ಯಾತ್ಮ ಮತ್ತು ವಿಜ್ಞಾನ ಇವೆರಡೂ ಮಿತಿ ಇಲ್ಲದ ಏಣಿ ಇದ್ದಹಾಗೆ, ಜೀವನದಲ್ಲಿ ಅಂತಹಾ ಮಿತಿ ಇಲ್ಲದ ಏಣಿಯನ್ನು ಹತ್ತುವ ಮಕ್ಕಳನ್ನು ತಯಾರು ಮಾಡಬೇಕು. ಇರುವ ಒಂದೇ ಪ್ರಪಂಚದಲ್ಲಿ ಅದು ಸರಿ ಇಲ್ಲ, ಇದು ಸರಿಯಿಲ್ಲ ಎನ್ನುವುದಕ್ಕಿಂತ ಇದ್ದ ಈ ಪ್ರಪಂಚದಲ್ಲೇ ಸುಖವಾಗಿರಲು ಕಲಿಯಿರಿ ಎಂದು ಅವರು ತಿಳಿಸಿದರು.
ಸುಜ್ಞಾನ ನಿಧಿಗೆ 1 ದಶಕದಲ್ಲಿ 30 ಕೋಟಿ ರೂ. ವಿನಿಯೋಗ
ಸುಜ್ಞಾನನಿಧಿ ಬಗ್ಗೆ ಪ್ರಸ್ತಾವನೆಗೈದು ಸ್ವಾಗತಿಸಿದ ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್. ಮಂಜುನಾಥ್ ಮಾತನಾಡಿ, ಈ ಕಾರ್ಯಕ್ರಮದಡಿ ದೀರ್ಘಾವಧಿ ಶಿಕ್ಷಣಗಳಾದ ವೈದ್ಯಕೀಯ, ತಾಂತ್ರಿಕ ಮುಂತಾದ ಕೋರ್ಸ್‌ಗಳಿಗೆ ಮಾಸಿಕ 1 ಸಾವಿರದಂತೆಯೂ, ಅಲ್ಪಾವಧಿ ಶಿಕ್ಷಣಗಳಾದ ಡಿಡ್ಪೋಮಾ, ನರ್ಸಿಂಗ್, ಡಿಎಡ್ ಮುಂತಾದ ಕೋರ್ಸ್‌ಗಳಿಗೆ ಮಾಸಿಕ 400 ರಂತೆ ಬ್ಯಾಂಕ್ ಖಾತೆ ಮೂಲಕ ನೀಡಲಾಗುತ್ತಿದೆ, 2017-18ರಲ್ಲಿ 6.50 ಕೋಟಿ ರೂ. ಸುಜ್ಞಾನನಿಧಿಯನ್ನು ಪೂಜ್ಯ ಹೆಗ್ಗಡೆಯವರು ಮಂಜೂರು ಮಾಡಿದ್ದಾರೆ. ಈ ವರ್ಷ 4270 ವಿದ್ಯಾರ್ಥಿಗಳಿಗೆ ಪದವಿಗೆ, 576 ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣಕ್ಕೆ ತಲಾ 1 ಸಾವಿರದಂತೆ ಶಿಷ್ಯವೇತನ ದೊರೆಯಲಿದೆ, ಡಿಪ್ಲೋಮಾ ಮಾಡಲು 4123 ಮಕ್ಕಳಿಗೆ, ಮತ್ತಿತರ ಕೋರ್ಸ್‌ಗಳಿಗೆ 1031 ಮಕ್ಕಳಿಗೆ 400 ರಂತೆ ದೊರೆಯಲಿದೆ, ದೀರ್ಘಾವಧಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅವಧಿ ಪೂರ್ತಿಯ ವೇಳೆಗೆ 40 ಸಾವಿರ ದೊರೆಯುತ್ತಿದ್ದು, ಅಲ್ಪಾವಧಿ ವಿದ್ಯಾರ್ಥಿಗಳಿಗೆ 8 ಸಾವಿರ ರೂ. ಪ್ರಯೋಜನ ಸಿಗುತ್ತಿದೆ ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.