ಮದ್ಯಪಾನದ ಪೊರೆ ಕಳಚಿದಾಗ ಶುದ್ದ ಜೀವನ ಸಾಧ್ಯ : ಡಾ| ಹೆಗ್ಗಡೆ

Advt_NewsUnder_1
Advt_NewsUnder_1
Advt_NewsUnder_1

dhamasthla madyavarjana shibiraಉಜಿರೆ: ವ್ಯಸನಿಯಲ್ಲಿ ಬದಲಾವಣೆಯನ್ನು ತರುವಲ್ಲಿ ಮದ್ಯವರ್ಜನ ಶಿಬಿರದ ಪಾತ್ರ ಮಹತ್ತರವಾದುದು. ಮದ್ಯ ಸೇವನೆ ಮಾಡಿದ ದಿನಗಳಲ್ಲಿರುವ ಪರಿಸ್ಥಿತಿಯನ್ನು ಅವಲೋಕನ ಮಾಡುವಂತೆ ಮುಂದಿನ ದಿನಗಳಲ್ಲಿ ವ್ಯಸನಮುಕ್ತ ಬದುಕಿನ ಸಂತೋಷದ ಕ್ಷಣಗಳನ್ನು ಕನಸು ಕಾಣುವಂತೆ ಶಿಬಿರಗಳಲ್ಲಿ ಪ್ರೇರಣೆ ನೀಡಲಾಗುವುದು. ಈ ಶಿಬಿರಗಳಲ್ಲಿ ಶಿಬಿರಾರ್ಥಿಗಳು ವ್ಯಸನದ ಪೊರೆ ಕಳಚಲು ಮತ್ತು ಶುದ್ದ ಜೀವನ ನಡೆಸಲು ಕುಡಿತದ ದೋಷವನ್ನು ಮತ್ತುದೈವಿಕದೋಷವನ್ನು ಅರಿಯಲು ಮಾರ್ಗದರ್ಶನ ನೀಡಲಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟರು.
ಅವರು ಉಜಿರೆಯ ಲಾಯಿಲ ಗ್ರಾಮದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಸೆ.11 ರಂದು ನಡೆಸಲಾದ 96ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಮಾತನಾಡುತ್ತಿದ್ದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾರ್ಯನಿರ್ವಾಹಕ ನಿರ್ದೇಶಕ ಡಾ|ಎಲ್.ಎಚ್.ಮಂಜುನಾಥ್ ಮಾತನಾಡಿ, ಸಾರ್ಥಕ ಬದುಕಿಗೆ ಈ ಶಿಬಿರ ದಾರಿ ದೀಪವಾಗಲಿ. ಕುಡಿತ ವರ್ಜನೆಗೆ ಆಧ್ಯಾತ್ಮದ ಬಲ ಬೇಕು. ಶ್ರಮಪಟ್ಟು ದುಡಿದು ಕುಟುಂಬವನ್ನು ಕಾಪಾಡಬೇಕು. ಪಾನಮುಕ್ತತೆಯ 100ನೇ ದಿನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಆಚರಿಸಬೇಕೆಂದರು.
ಈ ಶಿಬಿರದಲ್ಲಿ ರಾಜ್ಯದ 24 ಜಿಲ್ಲೆಯ 90 ಶಿಬಿರಾರ್ಥಿಗಳು ಹಾಜರಿದ್ದರು. ಶಿಬಿರದಲ್ಲಿರುವ ಬಹುತೇಕ ಮಂದಿ ಸರ್ಕಾರಿ ನೌಕರರು, ಪೋಲಿಸ್ ಇಲಾಖೆಯವರು, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಕೃಷಿ ಇಲಾಖೆಯವರಾಗಿರುತ್ತಾರೆ. ಸ್ವ ಉದ್ಯೋಗಿಗಳು ಮತ್ತು ಕೃಷಿಕ ಕುಟುಂಬದವರು ಭಾಗವಹಿಸಿದ್ದರು. ಪ್ರಸ್ತುತ ಮಾದಕ ವಸ್ತುಗಳ ಚಟವುಳ್ಳವರು ಬರುತ್ತಿರುವುದು ಸಾಮಾನ್ಯವಾಗಿದೆ. ಶೇ.10 ಮಂದಿ ಭಾಗವಹಿಸಿದವರಲ್ಲಿ ವೈವಾಹಿಕ ಭಿನ್ನಾಭಿಪ್ರಾಯದೊಂದಿಗೆ ವಿಚ್ಚೇದನ ಪಡೆದವರೂ ಇದ್ದಾರೆ. ಈ ಕೇಂದ್ರದಲ್ಲಿ ಶಿಬಿರಾರ್ಥಿಗಳ ಮನಪರಿವರ್ತನೆಗೆ ವೈಜ್ಞಾನಿಕ ಚಿಕಿತ್ಸೆಯನ್ನು, ಪರಿಣಾಮಕಾರಿ ಸಲಹೆಯನ್ನು ಮತ್ತು ಎಂಟು ದಿನಗಳ ಕಾಲ ಸಂಪೂರ್ಣ ಮನಸ್ಸು ಹತೋಟಿಯಲ್ಲಿಡುವ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಚಟುವಟಿಕೆ ಗಳನ್ನು ಮಾಡುವುದರೊಂದಿಗೆ ಶಿಬಿರಾರ್ಥಿಗಳ ಪರಿವರ್ತನೆ ಮಾಡಲಾ ಗುತ್ತದೆ ಎಂದು ಸಂಸ್ಥೆಯ ನಿರ್ದೇಶಕ ವಿವೇಕ್ ವಿ.ಪಾಸ್ ಅಭಿಪ್ರಾಯಪಟ್ಟರು. ಅವರು ಶೀಘ್ರವೇ 100ನೇ ಶಿಬಿರವನ್ನು ಅರ್ಥಪೂರ್ಣವಾಗಿ ನಡೆಸಲಾ ಗುವುದೆಂದು ತಿಳಿಸಿದರು. ಶಿಬಿರವನ್ನು ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್, ಶಿಬಿರಾಧಿಕಾರಿ ವಿದ್ಯಾಧರ್, ಆರೋಗ್ಯ ಸಹಾಯಕಿ ಶ್ರೀಮತಿ ಫಿಲೋಮಿನಾ ನಿರ್ವಹಿಸಿದರು. 8 ದಿನದ ಕಾರ್ಯಕ್ರಮದಲ್ಲಿ ಕೆ.ಎಸ್.ಹೆಗ್ಡೆಯ ಮನೋರೋಗ ವಿಭಾಗದ ವೈದ್ಯರುಗಳು, ಸಲಹೆಗಾರರು, ಸಂಪನ್ಮೂಲ ವ್ಯಕ್ತಿಗಳು, ನವಜೀವನ ಸದಸ್ಯರು, ಸಾಂಸ್ಕೃತಿಕ ತಂಡದವರು, ಶ್ರೀ ಧ.ಮಂ.ಆಸ್ಪತ್ರೆಯ ವೈದ್ಯರುಗಳು ಸಹಕರಿಸಿದ್ದರು. ಮುಂದಿನ ಶಿಬಿರ ಸ.೧೮ ಕ್ಕೆ ಆರಂಭವಾಗಲಿದೆ ಎಂದು ವೇದಿಕೆಯ ಪ್ರಕಟನೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.