ಗುರುವಾಯನಕೆರೆ: ಗಮಕ ವಾಚನ – ಯಕ್ಷಗಾನ ತಾಳಮದ್ದಳೆ

Advt_NewsUnder_1
Advt_NewsUnder_1
Advt_NewsUnder_1

Guruvayanakere gamaka - yakshaganaಉಜಿರೆ: ಯಕ್ಷಗಾನ ಕರಾವಳಿಯ ಸಮೃದ್ಧ ಕಲೆ. ಪೌರಾಣಿಕ ಪ್ರಸಂಗಗಳ ಯಕ್ಷಗಾನ, ತಾಳಮದ್ದಳೆ, ಯಕ್ಷಗಾನ ಕಲಾವಿದರನ್ನು ಪೋಷಿಸಿ ಕಲೆಯನ್ನು ಬೆಳೆಸಬೇಕೆಂದು ಸಾಹಿತಿ, ಸಂಶೋಧಕ ಡಾ| ದೇವಪ್ಪ ದಲ್ಲೋಡಿ ನುಡಿದರು.
ಅವರು ಸೆ.10ರಂದು ಗುರುವಾಯನಕೆರೆ ಶ್ರೀ ವರದ ಪಾಂಡುರಂಗ ವಿಠಲ ಮಂದಿರದಲ್ಲಿ ಶ್ರೀ ಮದವೂರ ವಿಘ್ನೇಶ ಕಲಾ ಸಂಘ (ರಿ) ಗೇರುಕಟ್ಟೆ, ಕರ್ನಾಟಕ ಗಮಕ ಕಲಾ ಪರಿಷತ್ (ರಿ) ದ.ಕ. ಜಿಲ್ಲಾ ಘಟಕ ಸಂಯುಕ್ತ ಆಶ್ರಯದಲ್ಲಿ ಇಡೀ ದಿನ ನಡೆದ ಗಮಕ ಮತ್ತು ತಾಳಮದ್ದಳೆ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಇದೇ ಸಂದರ್ಭ ದಲ್ಲಿ ಕೊ. ಅ. ಉಡುಪ ಪ್ರಶಸ್ತಿ ಪುರಸ್ಕೃತ ಶ್ರೀಕಾಂತ ರಾವ್ ಮುಂಡ್ರುಪ್ಪಾಡಿಯವರನ್ನು ಗೌರವಾರ್ಪಣೆ ಮಾಡಿ ಅಭಿನಂದಿಸ ಲಾಯಿತು. ಖ್ಯಾತ ಯಕ್ಷಗಾನ ಹಿಮ್ಮೇಳ ಕಲಾವಿದ ಮೋಹನ ಬೈಪಾಡಿತ್ತಾಯ, ವೇದ ಮೂರ್ತಿ ರಾಮಕೃಷ್ಣ ಭಟ್ ಕುಂಟಿನಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಮುರಳೀಕೃಷ್ಣ ಆಚಾರ್ ಸಮ್ಮಾನಿತರನ್ನು ಅಭಿನಂದಿಸಿದರು. ಸುವರ್ಣ ಕುಮಾರಿ ಕಲ್ಲೂರಾಯ ಸ್ವಾಗತಿಸಿ, ಮೋಹನ ಕಲ್ಲೂರಾಯ ನಿರೂಪಿಸಿ, ವಂದಿಸಿದರು. ಸಮ್ಮಾನಿತರು ಕೃತಜ್ಞತೆ ವ್ಯಕ್ತಪಡಿಸಿದರು.
ಪೂರ್ವಾಹ್ನ ಗಮಕ ಕಾರ್ಯ ಕ್ರಮವನ್ನು ಕಲಾ ಸಂಘದ ಅಧ್ಯಕ್ಷ ಮಧೂರು ಮೋಹನ ಕಲ್ಲೂರಾಯ ಅಧ್ಯಕ್ಷತೆಯಲ್ಲಿ ಡಾ| ವೇಣುಗೋಪಾಲ ಶರ್ಮ ಉದ್ಘಾಟಿಸಿ, ಶುಭಕೋರಿದರು. ಮಂದಿರದ ಅಧ್ಯಕ್ಷ ಗಣೇಶ ಪ್ರಭು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ರಾಮಕುಂಜೇಶ್ವರ ಕಾಲೇಜಿನ ಪ್ರತೀಕ್ಷಾ ಸರಳಾಯ ಗಮಕವಾಚನ ಹಾಗೂ ಅನರ್ಘ್ಯ ರಾವ್ ವ್ಯಾಖ್ಯಾನ ನಡೆಸಿಕೊಟ್ಟರು. ಖ್ಯಾತ ಸಾಹಿತಿ ಅಂಕಣ ಕಾರ ಪ ರಾಮಕೃಷ್ಣ ಶಾಸ್ತ್ರಿ ಅಧ್ಯಕ್ಷತೆಯಲ್ಲಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ| ದೇಜಪ್ಪ ದಲ್ಲೋಡಿ ಶುಭಾಶಂಸನೆಗೈದರು. ಕೊಯ್ಯೂರು ಸಿ.ಎ. ಬ್ಯಾಂಕ್ ಮೆನೇಜರ್ ಅಶೋಕ ಭಟ್, ಶ್ರೀಶ ಮುಚ್ಚಿನ್ನಾಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಮಧೂರು ಮೋಹನ ಕಲ್ಲೂರಾಯ ಪ್ರಸ್ತಾಪಿಸಿ, ಸುವರ್ಣ ಕುಮಾರಿ ಕಲ್ಲೂರಾಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ದಿ| ಕಾರಿಂಜ ವೆಂಕಟಾಚಲ ಮುಚ್ಚಿನ್ನಾಯ ಸ್ಮರಣಾರ್ಥ ಗೇರುಕಟ್ಟೆ ಶ್ರೀ ಮದವೂರ ವಿಘ್ನೇಶ ಕಲಾ ಸಂಘದ ಕಲಾವಿದರಿಂದ ಹನುಮಾರ್ಜುನ ವೇದ ಮೂರ್ತಿ ಕೆ. ಕೃಷ್ಣಭಟ್ ಕೊಯ್ಯೂರು ಸ್ಮರಣಾರ್ಥ ಶ್ರೀ ರಾಮಕುಂಜೇಶ್ವರ ಕಾಲೇಜು ಉಪನ್ಯಾಸಕರಿಂದ ಸುಭದ್ರಾ ರ್ಜುನ, ವೇದಮೂರ್ತಿ ದಿ| ನಾರಾಯಣ ಭಟ್ ಕುಂಟಿನಿ ಸ್ಮರಣಾ ರ್ಥ ಅರಕಲಗೂಡು ಶ್ರೀ ಕೋದಂಡ ರಾಮ ಯಕ್ಷಗಾನ ಕಲಾ ಸಂಘದ ಸದಸ್ಯರಿಂದ ಕಿರಾತಾರ್ಜುನ ಹಾಗೂ ಡಾ| ದೇಜಪ್ಪ ದಲ್ಲೋಡಿ ಮತ್ತು ಬಳಗದವರಿಂದ ಕರ್ಣಾರ್ಜುನ ಪ್ರಸಂಗಗಳ ಯಕ್ಷಗಾನ ತಾಳಮದ್ದಳೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.