ಸದ್ಭಾವನಾ ವೇದಿಕೆ ಬೆಳ್ತಂಗಡಿಯಿಂದ ಈದ್ ಸೌಹಾರ್ದ ಕೂಟ

Savhardaಬೆಳ್ತಂಗಡಿ : ವಿಜ್ಞಾನ ನಮಗೆ ಕಣ್ಣು ಕಿವಿ ಮೂಗು ನಾಲಗೆ ಹೀಗೆ ದೇಹದ ಅವಯವಗಳ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ಕಲಿಸಿಕೊಟ್ಟಿರಬಹುದು, ಆದರೆ ಕಣ್ಣಿನಿಂದ ಯಾವುದನ್ನು ನೋಡಬೇಕು- ನೋಡಬಾರದು, ಕಿವಿಯಿಂದ ಏನನ್ನು ಕೇಳಬೇಕು- ಕೇಳಬಾರದು, ನಾಲಗೆಯಿಂದ ಏನು ಸವಿಯಬೇಕು-ಸವಿಯಬಾರದು ಇತ್ಯಾದಿಯಾಗಿ ಕಲಿಸಿಕೊಟ್ಟದ್ದು ಧರ್ಮವಾಗಿದೆ. ಧರ್ಮ ಮನಸ್ಸನ್ನು ವಿಶಾಲಗೊಳಿಸುವುದು ಮತ್ತು ಅಂತರಂಗವನ್ನು ಬೆಳಗಿಸುವುದಾಗಿದೆ ಎಂದು ಶಾಂತಿ ಪ್ರಕಾಶನ ಮಂಗಳೂರು ಇಲ್ಲಿನ ವ್ಯವಸ್ಥಾಪಕ ಮುಹಮ್ಮದ್‌ಕುಂಞಿ ಹೇಳಿದರು.
ಸದ್ಭಾವನಾ ವೇದಿಕೆ ಬೆಳ್ತಂಗಡಿ ಇದರ ವತಿಯಿಂದ ಸೆ.10 ರಂದು ಬೆಳ್ತಂಗಡಿ ಸಮಾಜ ಮಂದಿರ ಬಳಿಯ ಎಸ್‌ಡಿಎಂ ಪಿನಾಕಿ ಹಾಲ್‌ನಲ್ಲಿ ನಡೆದ ಈದ್ ಸೌಹಾರ್ದ ಕೂಟ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ಈ ಜಗತ್ತಿನಲ್ಲಿ ಅನ್ಯರು ಎಂದರೆ ಯಾರೂ ಇಲ್ಲ, ಎಲ್ಲರೂ ನಮ್ಮವರೇ, ಇನ್ನೊಬ್ಬರ ಇಷ್ಟವನ್ನು ನನ್ನ ಇಷ್ಟವೆಂದು ಪರಿಗಣಿಸುವುದು, ಇನ್ನೊಬ್ಬರ ಸಂತೋಷ ನನ್ನ ಸಂತೋಷ ಎಂದುಕೊಳ್ಳುವುದು, ಇನ್ನೊಬ್ಬರ ದುಃಖದಲ್ಲಿ ನಮ್ಮದೆಂದೇ ಪಾಲು ಪಡೆಯುವುದು ನಿಜವಾದ ಮನುಷ್ಯತ್ವ, ನಾವು ಮನುಷ್ಯರಿಗೆ ನೋವು ಕೊಟ್ಟು ದೇವರನ್ನು ಪ್ರೀತಿಸುತ್ತೇವೆ ಎಂಬ ಭಾವನೆಹೊಂದಿದ್ದರೆ ಅದಕ್ಕಿಂತ ದೊಡ್ಡ ಅಜ್ಞಾನ ಬೇರೊಂದಿಲ್ಲ, ಇಲ್ಲಿ ಒಬ್ಬನನ್ನು ಕೋಮುವಾದಿ ಎಂದು ಎನ್ನುವು ದಾದರೆ ಆತ ಒಳಗೊಂಡಿರುವ ಧರ್ಮದ ಬಗ್ಗೆ ಆತನಿಗೆ ಬದ್ಧತೆ ಇಲ್ಲವೇ ಇಲ್ಲ ಎಂದೇ ವ್ಯಾಖ್ಯಾನಿಸ ಬಹುದು, ಜಗತ್ತಿನಲ್ಲಿ ದೇವರ ಸೃಷ್ಠಿಯಾಗಿರುವ ಸೂರ್ಯ, ಚಂದ್ರ, ನಕ್ಷತ್ರಗಳು ಎಂದಿಗೂ ಪರಸ್ಪರ ಶತ್ರುಗಳಲ್ಲ, ಹಾಗಾದರೆ ದೇವ ಸೃಷ್ಟಿಗಳಾಗಿರುವ ಮನುಷ್ಯರೇಕೆ ಪರಸ್ಪರ ಶತ್ರುಗಳಾಗುತ್ತಾರೆ ಎಂಬ ಜಿಜ್ಞಾಸೆಗಳನ್ನು ಮುಂದಿಟ್ಟರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಸದ್ಭಾವನಾ ವೇದಿಕೆ ಅಧ್ಯಕ್ಷ ಸುರೇಶ್ ಎಂ.ವಿ. ಮಾತನಾಡಿ, ಎಲ್ಲಾ ಬಣ್ಣದ ಮಿಶ್ರಣ ಬಿಳಿ ಬಣ್ಣ, ಬಿಳಿ ಶಾಂತಿಯ ಸಂಕೇತ, ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳು ಗಟ್ಟಿಯಾಗಿ ಪ್ರೀತಿ ವಿಶ್ವಾಸವಿದ್ದಲ್ಲಿ ಇನ್ನೊಂದು ಸ್ವರ್ಗವನ್ನು ಹುಡುಕುವ ಅಗತ್ಯವಿಲ್ಲ, ಈ ಪ್ರಪಂಚವೇ ಸ್ವರ್ಗವಾಗುತ್ತದೆ ಎಂದರು. ಕಾರ್ಯಕ್ರಮ ಸಂಚಾಲಕ ಹಾಜಿ ಅಬ್ದುಲ್ ಲೆತೀಫ್ ಸಾಹೆಬ್ ಕೊಲ್ಪೆದಬೈಲು ಪ್ರಸ್ತಾವನೆಗೈದು ಸ್ವಾಗತಿಸಿದರು. ಸದೀದ್ ಮುಹಮ್ಮದ್ ಕುರ್‌ಆನ್ ಆಯ್ದ ಸೂಕ್ತಗಳ ಪಠಣಗೈದರು. ಎಂ.ಎ. ಜಲೀಲ್ ಉಪ್ಪಿನಂಗಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.