ಹೈನುಗಾರಿಕೆಗೆ ಈ ವರ್ಷವೂ ರೂ.50 ಸಾವಿರ ಬಡ್ಡಿ ರಹಿತ ಸಾಲ

Advt_NewsUnder_1
Advt_NewsUnder_1
Advt_NewsUnder_1

Masika KDPಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಪಂಚಾಯತದ ಮಾಸಿಕ ಕೆ.ಡಿ.ಪಿ. ಸಭೆ ಪಂಚಾಯತದ ಅಧ್ಯಕ್ಷೆ ದಿವ್ಯಜ್ಯೋತಿ ಅವರ ಅಧ್ಯಕ್ಷತೆಯಲ್ಲಿ ಸೆ.7ರಂದು ಪಂಚಾಯತು ಸಭಾಂಗಣದಲ್ಲಿ ಜರುಗಿತು.
ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ ಬಸವರಾಜ್, ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ, ತಾಲೂಕು ಸಂಯೋಜಕ ಜಯಾನಂದ ಲಾಯಿಲ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪಶುಸಂಗೋಪನಾ ಇಲಾಖೆಯ ಪ್ರಗತಿ ವರದಿ ನೀಡಿದ ಡಾ| ರತ್ನಾಕರ ಮಲ್ಯ ಇಲಾಖೆಯಿಂದ ಹೈನುಗಾರರಿಗೆ ಈ ವರ್ಷವೂ ರೂ.50 ಸಾವಿರ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಮುಂದುವರಿದಿದೆ. ಇದನ್ನು ಹೈನುಗಾರರು ಒಂದು ವರ್ಷದ ಒಳಗೆ ಕಟ್ಟಬೇಕು ಎಂದು ತಿಳಿಸಿದರು. ಮೆಸ್ಕಾಂ ಇಲಾಖೆಯಿಂದ ಗಂಗಾಕಲ್ಯಾಣ ಯೋಜನೆಯಲ್ಲಿ 10 ಘಟಕಗಳಿಗೆ ಈಗಾಗಲೇ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಹೇಳಿದರು.
ಕೃಷಿ ಇಲಾಖೆಯ ಪ್ರಗತಿ ವರದಿ ನೀಡಿದ ಸಹಾಯಕ ಕೃಷಿ ನಿರ್ದೇಶಕ ತಿಲಕ್‌ಪ್ರಸಾದ್ ಅವರು ಕಳೆದ ಸಾಲಿಗಿಂತ ಈ ವರ್ಷ ಅಧಿಕ ಮಳೆ ಬಿದ್ದಿದೆ. ಆದರೆ ವಾಡಿಕೆ ಮಳೆಯಲ್ಲಿ ಈ ವರ್ಷ ಕಡಿಮೆಯಾಗಿದೆ ಎಂದರು. ತಾಲೂಕಿನ 241 ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕ್ರಮ ನಡೆಯುತ್ತಿದ್ದು, ಅಕ್ಷರದಾಸೋಹ ಕಚೇರಿಗೆ ಪೂರ್ಣ ಕಾಲಿಕ ಎಫ್.ಡಿ.ಸಿ. ಒಬ್ಬರನ್ನು ನೇಮಕ ಗೊಳಿಸುವಂತೆ ಸಹಾಯಕ ನಿರ್ದೇಶಕ ಲಕ್ಷ್ಮಣ ಶೆಟ್ಟಿಯವರು ಬೇಡಿಕೆ ಸಲ್ಲಿಸಿದರು.
ಶಿಶುಅಭಿವೃದ್ಧಿ ಯೋಜನೆಯ ಬಗ್ಗೆ ಮಾಹಿತಿ ನೀಡಿದ ಸಿಡಿಪಿಓ ಸರಸ್ವತಿಯವರು ಬೆಳ್ತಂಗಡಿ ತಾಲೂಕಿನಲ್ಲಿ ಇದುವರೆಗೆ 5,966 ಭಾಗ್ಯಲಕ್ಷ್ಮೀ ಬಾಂಡ್‌ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು. ಅಂಗನವಾಡಿಗಳಲ್ಲಿ ಮೊಟ್ಟೆ ತಿನ್ನದ ಮಕ್ಕಳಿಗೆ ಹಣ್ಣು ಕೊಡುವ ವ್ಯವಸ್ಥೆ ಮಾಡುವಂತೆ ಅಧ್ಯಕ್ಷರು ಸೂಚಿಸಿದರು. ಇದಕ್ಕೆ ಅನುದಾನದ ಕೊರತೆ ಇವರು ಬಗ್ಗೆ ತಿಳಿಸಿದ ಸಿಡಿಪಿಓ ಅವರು ಸರಕಾರಕ್ಕೆ ಬರೆದುಕೊಳ್ಳಲಾಗಿದೆ ಎಂದರು.
ಅರಣ್ಯ ಇಲಾಖೆಯವರು ಈಗಾಗಲೇ ತಮ್ಮ ಇಲಾಖೆಯಿಂದ ಬಿ.ಪಿ.ಎಲ್. ಕುಟುಂಬಗಳಿಗೆ ಗ್ಯಾಸ್ ಹಾಗೂ ಸ್ಟವ್ ವಿತರಿಸುವ ಬಗ್ಗೆ ಲಿಸ್ಟ್ ಮಾಡಿದ್ದಾರೆ. ಆದರೆ ಈಗಾಗಲೇ ಹಲವು ಗ್ರಾಮಗಳಲ್ಲಿ ಕೇಂದ್ರ ಸರಕಾರದ ಅನಿಲ ಭಾಗ್ಯ ಯೋಜನೆಯಲ್ಲಿ ಗ್ಯಾಸ್‌ನ್ನು
ವಿತರಿಸಲಾಗಿದ್ದು ಅರಣ್ಯ ಇಲಾಖೆಯವರ ಲಿಸ್ಟ್‌ನಲ್ಲಿದ್ದವರು ಕೂಡಾ ಇದರಲ್ಲಿ ಪಡೆದುಕೊಂಡಿದ್ದಾರೆ. ಆದ್ದರಿಂದ ಇಲಾಖಾಧಿಕಾರಿಗಳು ಲಿಸ್ಟನ್ನು ಪುನರ್‌ಪರಿಶೀಲನೆ ಮಾಡುವಂತೆ ಅಧ್ಯಕ್ಷೆ ದಿವ್ಯಜ್ಯೋತಿ ಸೂಚನೆ ನೀಡಿದರು.
ಇನ್ನು ಮುಂದೆ ಕಾಮಗಾರಿ ಟೆಂಡರ್‌ನಲ್ಲಿ ಪ.ಜಾತಿ ಮತ್ತು ಪ.ಪಂಗಡದ ಗುತ್ತಿಗೆದಾರಿಗೆ ಶೇ. 75 ಕಾಮಗಾರಿಗಳನ್ನು ನೀಡಬೇಕು ಎಂದು ಸರಕಾರದ ಆದೇಶ ಬಂದಿದೆ. 5 ಕಾಮಗಾರಿಯಲ್ಲಿ 3 ಕಾಮಗಾರಿಯನ್ನು ಅವರಿಗೆ ಮೀಸಲೀಡಬೇಕಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್. ನರೇಂದ್ರ ಮಾಹಿತಿ ನೀಡಿದರು. ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ಇದರ ನೇಮಕಾತಿಗೆ ಬರೆದುಕೊಳ್ಳಲಾಗಿದೆ ಎಂದು ಸರಸ್ವತಿಯವರು ಸಭೆಯ ಗಮನಕ್ಕೆ ತಂದರು. ರೇಷ್ಮೆ, ಸಹಕಾರಿ, ಕುಡಿಯುವ ನೀರಿನ ಯೋಜನೆ, ಆರೋಗ್ಯ, ಅರಣ್ಯ ಇಲಾಖೆ ಬೆಳ್ತಂಗಡಿ, ವೇಣೂರು, ಉಪ್ಪಿನಂಗಡಿ, ಸಾಮಾಜಿಕ ಅರಣ್ಯ, ಶಿಕ್ಷಣ, ತೋಟಗಾರಿಕೆ, ಬಿ.ಸಿ.ಎಂ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಗತಿ ವರದಿ ನೀಡಿದರು. ಕಾರ್ಯನಿರ್ವಾಹಣಾಧಿಕಾರಿ ಬಸವರಾಜ್ ಸ್ವಾಗತಿಸಿ, ತಾಲೂಕು ಸಂಯೋಜಕ ಜಯಾನಂದ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.