ಉಜಿರೆ ರಬ್ಬರ್ ಸೊಸೈಟಿಗೆ ಈಗ ದೇಶದಲ್ಲೇ ನಂಬರ್ ಒಂದು ಸ್ಥಾನ

Rubber socityಉಜಿರೆ : ದೇಶದ ರಬ್ಬರ್ ವ್ಯವಹಾರದಲ್ಲಿ ಇದುವರೆಗೆ ಪ್ರಥಮ ಸ್ಥಾನದಲ್ಲಿದ್ದ ಕೇರಳ ರಾಜ್ಯವನ್ನು ವ್ಯವಹಾರ ಕೌಶಲ್ಯ ವೃದ್ಧಿಯ ಮೂಲಕ ಹಿಮ್ಮೆಟ್ಟಿಸಿ ಪ್ರಥಮ ಸ್ಥಾನಕ್ಕೇರಿರುವ ಉಜಿರೆ ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕೃರಣ ಸಹಕಾರಿ ಸಂಘ 2016-17ನೇ ಸಾಲಿನಲ್ಲಿ 14,843 ಟನ್ ಮಾರಾಟ ವ್ಯವಹಾರವನ್ನು ನಡೆಸುವ ಮೂಲಕ 205.60 ಕೋಟಿ ರೂ. ವ್ಯವಹಾರ ನಡೆಸಿ 44.37 ಲಕ್ಷ ರೂ. ಲಾಭ ಗಳಿಸಿದೆ. ಆ ಮೂಲಕ ಸದಸ್ಯರಿಗೆ 15 ಶೇ. ಡಿವಿಡೆಂಟ್ ಘೋಷಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಶ್ರೀಧರ ಜಿ. ಭಿಡೆ ಹೇಳಿದರು.
ಸಂಘದ ವಾರ್ಷಿಕ ಮಹಾಸಭೆ ಯೊಂದಿಗೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಬ್ಯಾಂಕಿನ ವ್ಯವಹಾರದ ವಿವರ ಬಿಡುಗಡೆಗೊಳಿಸಿದರು.
2677 ಸದಸ್ಯರನ್ನು ಹೊಂದಿರುವ ಸಂಘ 99.70 ಲಕ್ಷ ಪಾಲು ಬಂಡವಾಲ ಹೊಂದಿದೆ, 16.27 ಕೋಟಿ ರೂ. ಠೇವಣಾತಿ, 85.91 ಲಕ್ಷ ಹೊರಬಾಕಿ ಸಾಲ, 7.25 ಕೋಟಿ ಕಾಯ್ದಿಟ್ಟ ನಿಧಿ ಹೊಂದಿದೆ. ಉಜಿರೆಯ ಈ ಸಂಘದ ವ್ಯವಹಾರ ದೇಶದ ರಬ್ಬರ್ ಉತ್ಪಾದನೆಯ ಶೇ. 40 ರಷ್ಟು ಆಗಿದೆ ಎಂದರು.
ಸರಕಾರಕ್ಕೆ 5.89 ಕೋಟಿ ರೂ. ಮಾರಾಟ ತೆರಿಗೆ ಪಾವತಿಸುವ ದಾಖಲೆ ಬರೆದಿರುವ ಸಂಘ ಇವತ್ತು ಹೊರ ಮಾರುಕಟ್ಟೆಯಲ್ಲಿ ಉಜಿರೆ ರಬ್ಬರ್ ಧಾರಣೆಯ ಅನುಸಾರವಾಗಿ ದರ ನಿಗಧಿಮಾಡಿಕೊಳ್ಳುವಷ್ಟರ ಮಟ್ಟಿಗೆ ಪ್ರಭಾವ ಬೀರಿದ್ದು ಇದು ಸದಸ್ಯರಿಗೆ ಹೆಮ್ಮೆ ತಂದಿದೆ ಎಂದರು.
ಸಂಸ್ಕರಣ ಘಟಕದ ಮೂಲಕ ಸಾಧನೆ :
ಸಂಸ್ಕರಣ ಘಟಕದ ಮೂಲಕ 2017 ರಲ್ಲಿ ಕೋಳಿ ಸಾಕಾಣೆ ಸಂಬಂಧಿಸಿದಂತೆ ಮ್ಯಾಟ್ ಮತ್ತು ಇತರ ರಬ್ಬರ್ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡಲಾಗಿದ್ದು ಆ ಮೂಲಕ 49.31 ಲಕ್ಷ ವ್ಯವಹಾರ ದಾಖಲಿಸಿದೆ. ಸಂಸ್ಥೆ ಗುರಿಪಳ್ಳ ಎಂಬಲ್ಲಿನ ಸ್ವಂತ ಜಾಗದಲ್ಲಿ ನಡೆಸುತ್ತಿರುವ ರಬ್ಬರ್ ನರ್ಸರಿಯಲ್ಲಿ 18,197 ತೊಟ್ಟೆಗಿಡಗಳು ಹಾಗೂ 1,300 ಕಸಿ ಕಟ್ಟಿದ ಗಿಡಗಳನ್ನು ಮಾರಾಟ ಮಾಡಲಾಗಿದೆ. ಮುಂದಕ್ಕೆ 50 ಸಾವಿರ ತೊಟ್ಟೆಗಿಡ, 1 ಲಕ್ಷ ಕಸಿಕಟ್ಟಿದ ಗಿಡದ ಗುರಿ ಹೊಂದಲಾಗಿದೆ, ಈ ಮೂಲಕ ವಾರ್ಷಿಕ 2,500 ಮಾನವ ದಿನಗಳಷ್ಟು ಕೆಲಸ ಸ್ಥಳೀಯರಿಗೆ ಲಭ್ಯವಾಗಿದೆ ಎಂದರು.
26 ಕಡೆ ಖರೀದಿ ಕೇಂದ್ರ :
ಸಂಸ್ಥೆ ಈಗಾಗಲೇ 26 ಕಡೆ ಖರೀದಿ ಶಾಖೆ ತೆರೆದು ಗ್ರಾಹಕರಿಗೆ ಅನುಕೂಲತೆ ಮಾಡಿಕೊಟ್ಟಿದೆ, ಮುಂದಕ್ಕೆ ಅಗತ್ಯವಿರುವಲ್ಲಿ ವಿಸ್ತರಣೆ ಮಾಡುವಲ್ಲಿಯೂ ತಯಾರಿದೆ. ಎಲ್ಲಾ ಖರೀದಿ ಕೇಂದ್ರಗಳನ್ನು ಕಂಪ್ಯೂಟರೀಕೃತಗೊಳಿಸಿ ಆನ್‌ಲೈನ್‌ನಡಿಗೆ ತರುವುದು, ಸಂಘದ ಶಾಖೆಗಳಿಗೆ ಸ್ವಂತ ನಿವೇಶನ ಖರೀದಿಸಿ ಕಟ್ಟಡ ರಚನೆ, ರಬ್ಬರ್ ಟ್ಯಾಪಿಂಗ್ ತರಬೇತಿ, ಉತ್ತಮ ಧಾರಣೆಗಾಗಿ ರಫ್ತು ಮಾಡುವ ಕ್ರಮ, ಇತ್ಯಾದಿ ಪ್ರಮುಖ ಉದ್ದೇಶಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಂ.ಆರ್.ಎಫ್, ಅಪೋಲೋ ಕಂಪೆನಿಗೂ ರಬ್ಬರ್:
ನೈಜ ರಬ್ಬರನ್ನು ರಾಷ್ಟ್ರದ ಪ್ರತಿಷ್ಠಿತ ಟಯರ್ ಕಂಪೆನಿಗಳಾದ ಎಂ.ಆರ್.ಎಫ್ ಮತ್ತು ಅಪೋಲೋ ಅಲ್ಲದೆ ದೇಶದ ಮೂಲೆ ಮೂಲೆಯ 300 ಕ್ಕೂ ಮೇಲ್ಪಟ್ಟು ಉತ್ಪಾದಕ ಕಂಪೆನಿಗಳೊಂದಿಗೆ ವ್ಯವಹಾರ ಕುದುರಿಸಿ ನೇರ ಮಾರುಕಟ್ಟೆ ಒದಗಿಸಿ ಉತ್ತಮ ಧಾರಣೆ ಸಿಗುವಂತೆ ಮಾಡಲಾಗುತ್ತಿದೆ ಎಂದರು.
ಉಪಸ್ಥಿತಿ: ಪತ್ರಿಕಾ ಗೋಷ್ಠಿಯಲ್ಲಿ ಉಪಾಧ್ಯಕ್ಷ ಎನ್. ಪದ್ಮನಾಭ ಮಾಣಿಂಜ, ನಿರ್ದೇಶಕರಾದ ಜಯಶ್ರೀ ಡಿ.ಎಂ. ಗೌಡ, ಚಿನ್ನಮ್ಮ, ಕೆ. ರಾಮ ನಾಯ್ಕ, ಅಬ್ರಹಾಂ ಬಿ.ಎಸ್, ಸೋಮನಾಥ ಬಂಗೇರ, ಇ. ಸುಂದರ ಗೌಡ, ಗ್ರೇಸಿಯನ್ ವೇಗಸ್, ಅನಂತ ಭಟ್ ಮಚ್ಚಿಮಲೆ, ವಿ.ವಿ. ಅಬ್ರಾಹಾಂ, ಪದ್ಮ ಗೌಡ ಎಚ್, ಡಾ| ಶಶಿಧರ ಡೋಂಗ್ರೆ, ವಿಶೇಷ ಆಹ್ವಾನಿತ ಕೆ.ಜೆ. ಆಗಸ್ಟಿನ್, ಬಾಲಕೃಷ್ಣ ಗೌಡ ಕೆ, ಬಾಲಕೃಷ್ಣ ಎಸ್. (ಪದನಿಮಿತ್ತ) ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲ| ರಾಜು ಶೆಟ್ಟಿ ಬೆಂಗೆತ್ಯಾರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.