ಉಜಿರೆ ಜೇಸಿ ಸಪ್ತಾಹ 2017 ಉದ್ಘಾಟನೆ ಹಿರಿಯರ ಜೀವನಾನುಭವ ಯುವಕರಿಗೆ ದಾರಿದೀಪ: ಹರ್ಷೇಂದ್ರ ಕುಮಾರ್

Ujire JCI udgatane 1ಉಜಿರೆ: ಹಿರಿಯರ ಜೀವನಾನುಭವ ಯುವಕರಿಗೆ ಆತ್ಮವಿಶ್ವಾಸ ಮೂಡಿಸುತ್ತದೆ. ಯುವಶಕ್ತಿ ಗುರುಹಿರಿಯರಿಗೆ ಗೌರವ, ಉತ್ತಮ ಸಂಸ್ಕಾರ, ಶಿಸ್ತು ಕಾಪಾಡಿಕೊಂಡು ಉನ್ನತ ಆದರ್ಶದಿಂದ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ನುಡಿದರು.
ಅವರು ಸೆ. 9ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಉಜಿರೆ ಜೇಸಿ ಸಪ್ತಾಹ 2017ನ್ನು ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಿ ಮಾತನಾಡಿದರು. ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವೈ ಶಿವರಾಮಯ್ಯ, ಜೇಸಿ ಪ್ರಾಂತ್ಯ ಡಿ ವಲಯ 15ರ ಉಪಾಧ್ಯಕ್ಷ ಧೀರೇಂದ್ರ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ, ಉದಯವಾಣಿ ಹಿರಿಯ ವರದಿಗಾರ ಲಕ್ಷ್ಮೀ ಮಚ್ಚಿನ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಕೋರಿದರು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಶಿವಾನಿ, ಶಿಕ್ಷಣ ಕ್ಷೇತ್ರ ಹಾಗೂ ಕಲಾವಿದ ವೆಂಕಟಗಿರಿ ಹೊಳ್ಳ, ಉದಯೋನ್ಮುಖ ಯುವ ಉದ್ಯಮಿ ಅಶ್ವಥ್ ಹೆಗ್ಡೆ ಮತ್ತು ಸೇವಾನಿಷ್ಟ ಮೆಸ್ಕಾಂ ಲೈನ್‌ಮೆನ್ ಉಮೇಶ್ ಅವರನ್ನು ಸಂಸ್ಥೆ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ರಮೇಶ ಪೈಲಾರ್, ನವೀನ್, ರಾಜು ಮತ್ತು ರವಿ ಮುಖ್ಯ ಅತಿಥಿಗಳನ್ನು, ಸುರೇಶ್ ಮಾಚಾರ್ ಮತ್ತು ಹರೀಶ ಶೆಟ್ಟಿ ಸಮ್ಮಾನಿತರನ್ನು ಪರಿಚಯಿಸಿದರು. ಸಾಧನಾಶ್ರೀ ಪ್ರಶಸ್ತಿ ಪುರಸ್ಕೃತ ಸೋಮಶೇಖರ ಶೆಟ್ಟಿಯವರಿಗೆ ಗೌರವಾರ್ಪಣೆ ನಡೆಯಿತು. ವಿಜೇಂದ್ರ ದೇವಾಡಿಗ ಸಂದೇಶ ವಾಚಿಸಿ, ದೀಕ್ಷಿತ್ ರೈ ಉದ್ಘಾಟಕರನ್ನು ಪರಿಚಯಿಸಿದರು. ಸುಗುಣಾ ದೇವುದಾಸ್ ನಾಯಕ್ ಜೇಸಿವಾಣಿ ವಾಚಿಸಿದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಮಹೇಶ್ ಕುಮಾರ್ ಶೆಟ್ಟಿ, ಜೇಸಿರೇಟ್ ಮತ್ತು ಜೂ| ಜೇಸಿ ಅಧ್ಯಕ್ಷರು ಉಪಸ್ಥಿತರಿದ್ದರು. ಜೇಸಿ ಅಧ್ಯಕ್ಷ ದೇವುದಾಸ ನಾಯಕ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಡಾ| ಬಿ.ಎ. ಕುಮಾರ ಹೆಗ್ಡೆ ಮುಖ್ಯ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಕಾರ್ಯದರ್ಶಿ ವಿಜೇಂದ್ರ ದೇವಾಡಿಗ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಉಜಿರೆ ಜ್ಯೂ| ಜೇಸಿ ವಿಭಾಗದಿಂದ ವಿವಿಧ ವಿನೋದಾವಳಿಗಳು ಹಾಗೂ ಸಮೂಹ ಉಜಿರೆ ಸಹಭಾಗಿತ್ವದಲ್ಲಿ ಬಲೆತೆಲಿಪಾಲೆ ಮತ್ತು ಮಜಾಭಾರತ ಖ್ಯಾತಿಯ ದೀಪಕ್ ರೈ ನೇತೃತ್ವದಲ್ಲಿ ಮಸ್ಕಿರಿ ತಂಡದ ವರಿಂದ ತೆಲಿಕೆ ಬಂಜಿ ನಿಲಿಕೆ ಹಾಸ್ಯ ಕಾರ್ಯಕ್ರಮ ಪ್ರದರ್ಶನಗೊಂಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.