ಉತ್ತಮ ಆಡಳಿತ – ಸರಕಾರಿ ಅನುದಾನ ಸದ್ಬಳಕೆ ಕುವೆಟ್ಟು ಗ್ರಾ.ಪಂ.ಗೆ `ಗಾಂಧಿ ಗ್ರಾಮ ಪುರಸ್ಕಾರ’

Advt_NewsUnder_1
Advt_NewsUnder_1
Advt_NewsUnder_1

Ashok Kotyan new

ಕುವೆಟ್ಟು ಗ್ರಾಮ ಪಂಚಾಯತು ಗಾಂಧಿ ಗ್ರಾಮ ಪುರಸ್ಕಾರ ಪಡೆಯಲು ಪಂಚಾಯತು ವ್ಯಾಪ್ತಿಯಲ್ಲಿ ನಡೆದ ಪ್ರಾಮಾಣಿಕ ಅಭಿವೃದ್ಧಿ ಕಾರ್ಯಗಳು, ಗುರುಹಿರಿಯರ ಮಾರ್ಗದರ್ಶನ, ಜನಪ್ರತಿನಿಧಿಗಳು, ಪಂಚಾಯತು ಸದಸ್ಯರು, ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಸಿಬ್ಬಂದಿ ವರ್ಗದವರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. – ಅಶೋಕ್ ಕೋಟ್ಯಾನ್ ಅಧ್ಯಕ್ಷರು ಗ್ರಾ.ಪಂ. ಕುವೆಟ್ಟು

ಗುರುವಾಯನಕೆರೆ : ಪಂಚಾಯತದ ಉತ್ತಮ ಆಡಳಿತ, ಸರಕಾರಿ ಅನುದಾನ ಸದ್ಭಳಕೆ, ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು, ಸಮರ್ಪಕ ತೆರಿಗೆ ವಸೂಲಿ, ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಸಾಧನೆ ಮೊದಲಾದ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಗಣಿಸಿ ಕುವೆಟ್ಟು ಗ್ರಾಮ ಪಂಚಾಯತ್‌ಗೆ ರಾಜ್ಯ ಸರಕಾರದ ಪಂಚಾಯತ್ ರಾಜ್ ಇಲಾಖೆ 2017-18ನೇ ಸಾಲಿನ `ಗಾಂಧಿ ಗ್ರಾಮ ಪುರಸ್ಕಾರ’ ನೀಡಿ ಗೌರವಿಸಿದೆ.
ಈ ಸಂಬಂಧ ಸರಕಾರದ ಪ್ರಧಾನ ಕಾರ್ಯದರ್ಶಿಗಳು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಜಿಲ್ಲಾ ಪಂಚಾಯತ್ ಮೂಲಕ ಗ್ರಾಮ ಪಂಚಾಯತ್‌ಗೆ ಅಧಿಕೃತ ಆದೇಶ ಕಳುಹಿಸಿದ್ದು, ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅ.2 ರಂದು ನಡೆಯುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ರಾಜ್ಯದ ರಾಜ್ಯಪಾಲ ಅಥವಾ ಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು, ಉನ್ನತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಮ್ಮುಖ ಪ್ರಶಸ್ತಿ ಪತ್ರ, ಫಲಕವನ್ನು ನೀಡಿ ಗೌರವಿಸಲಿದ್ದಾರೆ. ಪ್ರಶಸ್ತಿ ಸ್ವೀಕರಿಸುವುದಕ್ಕಾಗಿ ಕುವೆಟ್ಟು ಗ್ರಾ.ಪಂ. ಅಧ್ಯಕ್ಷ ಅಶೋಕ್ ಕೋಟ್ಯಾನ್, ಅಭಿವೃದ್ಧಿ ಅಧಿಕಾರಿ ರವೀಂದ್ರ ನಾಯಕ್
ಹಾಗೂ ತಾ.ಪಂ. ಕಾರ್ಯ ನಿರ್ವಾಹಣಾಧಿ ಕಾರಿಯವರಿಗೆ ಪತ್ರ ಬರಲಿದೆ. ಪ್ರಶಸ್ತಿಗೆ ಆಯ್ಕೆಯಾದ ಗ್ರಾ.ಪಂ.ಗೆ ಸರಕಾರ ರೂ.೫ಲಕ್ಷ ಅನುದಾನವನ್ನು ನೀಡಲಿದೆ.
ಪ್ರಶಸ್ತಿಗೆ ಪರಿಗಣಿಸಲ್ಪಟ್ಟ ಅಂಶಗಳು : ಪಂಚಾಯತ್ ಆಡಳಿತದಲ್ಲಿ ಪಾರದರ್ಶಕತೆ, ಗ್ರಾಮೀಣ ಅಭಿವೃದ್ಧಿ ಯೋಜನೆಯ ಪರಿಪೂರ್ಣ ಅನುಷ್ಠಾನ, ಗರಿಷ್ಠ ಪ್ರಮಾಣದಲ್ಲಿ ಆದಾಯ ಮೂಲಗಳ ಕ್ರೋಢಿಕರಣ, ಯೋಜನೆಗಳ ಅನುಷ್ಠಾನದಲ್ಲಿ ಜನರ ಸಹಭಾಗಿತ್ವ, ಪಂಚಾಯತು ವ್ಯಾಪ್ತಿಯಲ್ಲಿ ನೈರ್ಮಲಿಕರಣ, ನರೇಗಾ ಯೋಜನೆಯಲ್ಲಿ ವಿವಿಧ ಕಾಮಗಾರಿಗಳ ಅನುಷ್ಠಾನ, ಗ್ರಾ.ಪಂ. ವ್ಯಾಪ್ತಿಯಲ್ಲಿ ಕೈಗೊಂಡ ಸ್ವಚ್ಛತಾ ಕಾರ್ಯಕ್ರಮಗಳು, ಶಾಸನ ಬದ್ಧ 14ನೇ ಹಣಕಾಸು ಯೋಜನೆಯಿಂದ ಬಂದ ಅನುದಾನವನ್ನು ಸಂಪೂರ್ಣ ವಿನಿಯೋಗಿಸಿರುವುದು, ತೆರಿಗೆ ವಸೂಲಾತಿಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿರುವುದು, ಘನತ್ಯಾಜ್ಯ ವಿಲೇವಾರಿಯನ್ನು ಹಂತ, ಹಂತವಾಗಿ ಸಮರ್ಪಕ ವ್ಯವಸ್ಥೆ ಕೈಗೊಳ್ಳುತ್ತಿರುವುದು ಮೊದಲಾದ ಮಾನದಂಡಗಳನ್ನು ಪಂಚತಂತ್ರದ ಮೂಲಕ ನಿಗದಿಪಡಿಸಿ, ತಾಲೂಕಿನ ಅತಿ ಹೆಚ್ಚು ಅಂಕ ಗಳಿಸಿರುವ ಮೂರು ಪಂಚಾಯತುಗಳನ್ನು ಅರ್ಹತೆ ಮೇರೆಗೆ ಆಯ್ಕೆಗೊಳಿಸಲಾಯಿತು. ನಂತರ ಅರ್ಹತೆ ಪಡೆದ ಗ್ರಾ.ಪಂ.ಗಳ ಸ್ಥಳ ಹಾಗೂ ದಾಖಲಾತಿ ಪರಿಶೀಲನೆ ಮಾಡಿ ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಕುವೆಟ್ಟು ಗ್ರಾ.ಪಂ.ನ್ನು ಈ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.