ಶ್ರೀರಾಮ ಕ್ಷೇತ್ರದ ಜಗದ್ಗುರು ಪೀಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 9ನೇ ವರ್ಷದ ಸದ್ಗುರು ಪಟ್ಟಾಭಿಷೇಕದ ವಧ್ಯಂತ್ಯುತ್ಸವ

kanyadi pattabhisheka

kanyadi pattabhisheka 1

ಧರ್ಮಸ್ಥಳ : ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರದ ಜಗದ್ಗುರು ಪೀಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 9ನೇ ವರ್ಷದ ಸದ್ಗುರು ಪಟ್ಟಾಭಿಷೇಕದ ವಧ್ಯಂತ್ಯುತ್ಸವ ಕಾರ್ಯಕ್ರಮವನ್ನು ಮಠದ ಆವರಣದಲ್ಲಿ ಸೆ. 3ರಂದು ನಡೆಯಿತು.
ಉದ್ಘಾಟನೆಯನ್ನು ರಾಜ್ಯ ಸಭಾ ಸದಸ್ಯ ಮತ್ತು ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಪ್ರ. ಕಾರ್ಯದರ್ಶಿ ಬಿ. ಕೆ ಹರಿಪ್ರಸಾದ್ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಬಾರ್ಕೂರು ಆತ್ಮಾನಂದ ಸರಸ್ವತಿ ಐಟಿಐ ಸಂಸ್ಥೆಯ ಕಾರ್ಯಾಧ್ಯಕ್ಷ, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಭಟ್ಕಳ ಮಾಜಿ ಶಾಸಕ ಜೆ. ಡಿ ನಾಯ್ಕ, ಶ್ರೀ ಕ್ಷೇತ್ರ ಧರ್ಮಸ್ಥಳದ ಹಿರಿಯ ಮುತ್ಸದ್ದಿ ಭುಜಬಲಿ ಶುಭ ಕೋರಿದರು.
ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ ವಸಂತ ಬಂಗೇರ ವಹಿಸಿದ್ದರು. ವೇದಿಕೆಯಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕ ರುಕ್ಮಯ್ಯ ಭಂಡಾರಿ, ಅಖಿಲ ಭಾರತ ಬಿಲ್ಲವರ ಯೂನಿಯನ್ ಮಂಗಳೂರು ಅಧ್ಯಕ್ಷ ನವೀನ್‌ಚಂದ್ರ ಡಿ ಸುವರ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತೇಜೋಮಯ ಪೂಜಾರಿ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಉಡುಪಿ ಮಾಜಿ ಶಾಸಕ ರಘುಪತಿ ಭಟ್, ಅಖಿಲ ಭರತ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ತಾ| ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಅನಂತರಾಮ ಚಾರ್ಮಾಡಿ, ಸೀತಾರಾಮ ತೋಳ್ಪಡಿತ್ತಾಯ ಶಾಂತಿವನ ಟ್ರಸ್ಟ್, ಸುಜೀತಾ ವಿ ಬಂಗೇರ, ಟ್ರಸ್ಟಿಗಳಾದ ಮೋಹನ್ ಉಜ್ಜೋಡಿ, ಚಿತ್ತರಂಜನ್, ಪ್ರಮುಖರಾದ ಭೀಮಣ್ಣ ಶಿರ್ಶಿ, ವೆಂಕಟೇಶ್ ನಾಯ್ಕ ಶಿರ್ಶಿ, ವಿ. ಎನ್ ನಾಯ್ಕ ಸಿದ್ದಾಪುರ, ಕೆ.ಜಿ ನಾಯ್ಕ್, ಆನಂದ, ಎಸ್.ಎಮ್ ಹರೀಶ್ ಶಿವಮೊಗ್ಗ, ತಾರಾಮೂರ್ತಿ ಸಾಗರ, ರಾಜೀವ್ ಕೋಟ್ಯಾನ್, ಪ್ರಶಾಂತ್ ನಾಯ್ಕ್ ಕುಮಟಾ, ಎಂ.ಸಿ ನಾಯ್ಕ್ ಹೊನ್ನಾವರ, ಎಂ. ಅರ್ ನಾಯ್ಕ್ ಭಟ್ಕಳ, ಬಾಬು ಮಾಸ್ಟರ್, ಪುಷ್ಪಾ ನಾಯ್ಕ್, ಜಯಂತ ನಡುಬೈಲು, ಎಚ್. ಆರ್ ನಾಯ್ಕ್ ಕುಮಟಾ ಮೊದಲಾವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಟ್ರಸ್ಟಿ ಜೆ.ಎನ್ ನಾಯ್ಕ ವಂದನಾರ್ಪಣೆಗೈದರು. ಜೇಸಿ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಕಾರಾಮ ಸಾಲಿಯಾನ್ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.