ಮಡಂತ್ಯಾರು ಮೊಸರು ಕುಡಿಕೆ ಉತ್ಸವ- ತಿಳಿದು ಬದುಕುವುದು ಬಾಳು – ಬದುಕಿ ತಿಳಿಯುವುದು ಬಾಳಲ್ಲ : ಫಾ| ಬೆಸಿಲ್ ವಾಸ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

madanthyar astami1ಮಡಂತ್ಯಾರು: ಶ್ರೀಕೃಷ್ಣನ ಬಾಲ್ಯ ಜೀವನ ಮತ್ತು ಏಸುವಿನ ಬಾಲ್ಯ ಜೀವನ ಒಂದಕ್ಕೊಂದು ಸಾಮ್ಯತೆ ಹೊಂದಿದೆ. ಇಂಟರ್‌ನೆಟ್ ಯುಗದಲ್ಲಿ ಬೇರೆ ಬೇರೆ ಬಣ್ಣಗಳನ್ನು ಕಾಣುತ್ತಾರೆ. ಆದರೆ ದೇವರ ಮುಗ್ದತೆಯನ್ನು ಮರೆಯುತ್ತೇವೆ. ಎಲ್ಲರೂ ಒಂದೇ ಎಂಬಂತೆ ತಿಳಿದು ಬದುಕುವುದು ಬಾಳು. ಬದುಕಿ ತಿಳಿಯುವುದು ಬಾಳಲ್ಲ ಎಂದು ಮಡಂತ್ಯಾರು ಸೆಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರುಗಳಾದ ವಂ. ಫಾ| ಬೆಸಿಲ್ ವಾಸ್ ಹೇಳಿದರು.
ಅವರು ಆ.15ರಂದು ಗಣಪತಿ ಮಂಟಪದ ವಠಾರದಲ್ಲಿ ನಡೆದ ಮಡಂತ್ಯಾರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ 28ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಡಂತ್ಯಾರು ಇಂದು ಹಬ್ಬದ ತೇರು ಇದ್ದ ಹಾಗೆ ಕಾಣುತ್ತದೆ. ಸರ್ವ ಧರ್ಮಿಯರು ಇಲ್ಲಿ ಪಾಲ್ಗೊಂಡಿದ್ದಾರೆ. ನಮ್ಮ ಈ ವಿಸ್ತಾರ ಮನೋಭಾವದಿಂದ ಕೃಷ್ಣ ಜನ್ಮಾಷ್ಟಮಿ ಸಮಿತಿ ಹೃದಯ ವೈಶಾಲ್ಯತೆ ಹೊಂದಿದೆ. ನಮ್ಮಲ್ಲಿ ಇನ್ನು ಬೇಕು ಕೋಮು ಸೌಹಾರ್ದತೆಯ ಸಂಕೆತದ ಈ ಹಬ್ಬ ಇನ್ನು ಮುಂದಿನ ದಿನಗಳಲ್ಲಿ ಯಶಸ್ವಿಯನ್ನು ಕಾಣಲಿ ಎಂದರು.
ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬುಡಿಯಾರ್ ರಾಧಾಕೃಷ್ಣ ರೈ ಬಹುಮಾನ ವಿತರಿಸಿ ಮಾತನಾಡಿ, ಸಮಾಜದಲ್ಲಿ ಕಷ್ಟಕರ ವಾತಾವರಣ ಕಾಣುತ್ತೇವೆ. ಇಲ್ಲಿ ಜಾತಿ ಮತ ಬೇದವಿಲ್ಲದೆ ಆಚರಿಸುವ ಎಲ್ಲಾ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಲೆಂದು ಹಾರೈಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ. ಶ್ರೀ ಕೃಷ್ಣನ ಜೀವನ ಚರಿತ್ರೆಯನ್ನು ತಿಳಿಸಿದರು. ಉಜಿರೆ ಗ್ರಾ.ಪಂ. ಸದಸ್ಯ ರವಿ ಕುಮಾರ್ ಬರಮೇಲು ಮಾತನಾಡಿ ನಾವು ಆಚರಿಸುವ ಯಾವುದೇ ಹಬ್ಬ ಹರಿದಿನಗಳನ್ನು ನಮ್ಮ ನಮ್ಮ ಸಂಸ್ಕೃತಿಯನ್ನು ತಿಳಿದು ಆಚರಿಸಿದರೆ ಉತ್ತಮ ಎಂದರು. ವಾಮದಪದವು ಯಜಮಾನ ಇಂಡಸ್ಟ್ರಿಯ ವರದರಾಜ ಪೈ, ಮಡಂತ್ಯಾರು ಜೇಸಿಯ ಅಧ್ಯಕ್ಷ ರಾಜೇಶ್ ಪುಳಿಮಜಲು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಿವೃತ್ತ ಸೈನಿಕರಾದ ಕಾಂತಪ್ಪ ಗೌಡ ಹಟ್ಟತ್ತೋಡಿ, ಸತೀಶ್ ಸುವರ್ಣ ಪಿ. ಇವರನ್ನು ಸನ್ಮಾನಿಸಲಾಯಿತು.
ಸಮಿತಿಯ ಸ್ಥಾಪಕಾಧ್ಯಕ್ಷರಾದ ಕೆ. ಪ್ರಭಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು| ಭೂಮಿಕಾ, ಕು| ಸದಾನ, ಕು| ಪಲ್ಲವಿ ಪ್ರಾರ್ಥನೆ ಹಾಡಿದರು.
ತೀರ್ಪುಗಾರರಾಗಿ ಸೇವೆ ಸಲ್ಲಿಸುತ್ತಿದ್ದ ಸಂಜೀವ ಶೆಟ್ಟಿ ಮುಗೆರೋಡಿ, ಅಟೋರಿಕ್ಷ ಚಾಲಕ ಮಾಲಕ ಬಿ.ಎಂ.ಸಿ. ಸದಸ್ಯರಾಗಿ ನೇಮಕಗೊಂಡಿರುವ ಉಮೇಶ್ ಕುಮಾರ್ ಕೋಟೆ, ಫೋಟೊಗ್ರಾಫಿ ನವೀನ್ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪದ್ಮನಾಭ ಸುವರ್ಣ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಸದಸ್ಯ ಪ್ರತೀವರ್ಷ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸುತಿದ್ದ ಹೃದಯಘಾತದಿಂದ ನಿಧನ ಹೊಂದಿದ ವಿಶ್ವನಾಥ ಪಲ್ಕೆ ಇವರ ನಿಧನಕ್ಕೆ 1 ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಜೀವ ಶೆಟ್ಟಿ ಮುಗೆರೋಡಿ, ತಾ.ಪಂ. ಸದಸ್ಯ ಜೋಯಲ್ ಮೆಂಡೋನ್ಸಾ, ಗ್ರಾ.ಪಂ. ಸದಸ್ಯ ಅದ್ದುಲ್ ರಹಿಮಾನ್ ಪಡ್ಪು ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷ ಅರುಣ್ ಸಾಲಿಯಾನ್, ಗೌರವಾಧ್ಯಕ್ಷ ರೂಪೇಶ್ ಆಚಾರ್ಯ, ಉಮೇಶ್ ಕುಮಾರ್ ಕೋಟೆ, ಕಾರ್ಯದರ್ಶಿ ಸತೀಶ್ ಸಾಲ್ಯಾನ್, ಜೊತೆಕಾರ್ಯದರ್ಶಿ ದಿನೇಶ್ ಎಂ. ಪಾಂಗಾಳ, ಶ್ರೀನಿವಾಸ ಟೈಲರ್, ಪ್ರಶಾಂತ್ ಎಂ. ಪ್ರತಿಮಾನಿಲಯ, ವೀರೇಂದ್ರ ಕುಮಾರ್, ಶಂಕರ್ ಶೆಟ್ಟಿ, ನಾರಾಯಣ ಪೂಜಾರಿ, ನಾರಾಯಣ ನಾವಡ, ಕುಶಾಲಪ್ಪ ಗೌಡ, ರಮೇಶ್, ಸದಾಶಿವ ಹೆಗ್ಡೆ, ಕಿರಣ್ ಕುಮಾರ್, ರೋಹಿತ್ ಪೂಜಾರಿ, ಜಯ ಕೆ. ಪಾಂಡವರಕಲ್ಲು, ಜನಾರ್ಧನ ಶೆಟ್ಟಿಗಾರ ಮರಕಡ, ಚಂದ್ರ, ಗಿರಿಯಪ್ಪ ಪೂಜಾರಿ, ಪ್ರಮೋದ್ ಕುಮಾರ್, ವೆಂಕಟರಮಣ ಗೌಡ, ವಿಶ್ವನಾಥ ಪೂಜಾರಿ, ಎ.ಪಿ.ಎಂ.ಸಿ. ನಿರ್ದೇಶಕಿ ಶ್ರೀಮತಿ ಸೆಲೆಸ್ತಿನ್ ಡಿಸೋಜ ಮೊದಲಾದವರು ಸಹಕರಿಸಿದರು. ಬೆಳಿಗ್ಗೆ ಉದ್ಘಾಟನಾ ಸಮಾರಂಭವನ್ನು ನ್ಯಾಯವಾದಿ ವಸಂತ ಮರಕಡ ನೆರವೇರಿಸಿದರು. ಅಟೊ ರಿಕ್ಷಾ ಚಾಲಕರ ಮಾಲಕ ಸಂಘದ ಅಧ್ಯಕ್ಷ ಸುಧಾಕರ ಶೆಣೈ ಖಂಡಿಗ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದ ನಂತರ ಭದ್ರಾವತಿ ಬೀಟ್ಸ್ ಆರ್ಕೇಸ್ಟ್ರಾ ಇವರಿಂದ ಸಂಗೀತ ರಸಮಂಜರಿ ನಡೆಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.