ನಾಟಿ ವೈದ್ಯ ಬೇಬಿ ಪೂಜಾರಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಕರ್ಗಿ ಶೆಟ್ಟಿಗೆ ಸನ್ಮಾನ

good future school atidonji koota1ಪಿಲ್ಯ : ಗುಡ್‌ಪ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ಗಮ್ಮತ್‌ದ ಕೂಟ ಕಾರ್‍ಯಕ್ರಮವು ಆ. 5ರಂದು ಜರುಗಿತು.
ಕಾರ್ಯಕ್ರಮವನ್ನು ಪಿಲ್ಯದ ನಾಟಿ ವೈದ್ಯ ಬೇಬಿ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಆಟಿ ತಿಂಗಳ ಹಿಂದಿನ ಗತ ವರ್ಷಗಳ ವಿಶೇಷತೆ ಹಾಗೂ ನೆನಪುಗಳನ್ನು ಮರುಕಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕ ನಸೀರ್ ಅಹಮ್ಮದ್ ಖಾನ್ ಮಾತನಾಡಿ ತುಳುನಾಡ ಸಂಸ್ಕೃತಿ ಪರಂಪರೆ ಇತಿಹಾಸವನ್ನು ಈ ಮೂಲಕವಾಗಿ ಉಳಿಸಿ ಬೆಳೆಸಿ ಯುವ ಪೀಳಿಗೆಗೆ ತಿಳಿಯಪಡಿಸಿ, ಜೀವಂತವಾಗಿಡಬೇಕು ಎಂದು ಉದ್ದೇಶದಿಂದ, ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ನಾಟಿ ವೈದ್ಯ ಬೇಬಿ ಪೂಜಾರಿ ಮತ್ತು ರಾಜ್ಯ ಪ್ರಶಸ್ತಿ ವಿಜೇತೆ ಶ್ರೀಮತಿ ಕರ್ಗಿ ಶೆಟ್ಟಿ ಅಳದಂಗಡಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಶ್ರೀಮತಿ ಕರ್ಗಿ ಶೆಟ್ಟಿ ಪಾಡ್ದಾನ ಹಾಡಿ ರಂಜಿಸಿದರು. ಗ್ರಾ.ಪಂ. ಅಧ್ಯಕ್ಷ ಸತೀಶ್ ಕುಮಾರ್ ಮಿತ್ತಮಾರು ಮಾತನಾಡಿ ಆಟಿಯ ತಿಂಗಳ ವಿಶೇಷತೆಯನ್ನು, ಮಹತ್ವವನ್ನು ಯುವ ಪೀಳಿಗೆಗೆ ತೋರಿಸುವ ಒಳ್ಳೆಯ ಕೆಲಸವನ್ನು ಶ್ಲಾಘಿಸಿದರು. ಪ್ರಗತಿಪರ ಕೃಷಿಕ ವಿಶ್ವನಾಥ ಕುದ್ಯಾಡಿಯವರು ಸಂದರ್ಭೊಚಿತವಾಗಿ ಮಾತನಾಡಿ ಸಂಚಾಲಕ ತೀರ್ಥರೂಪರಾದ ಅನ್ವರ್ ಖಾನ್ ಸಾಹೇಬರ ನೆನಪು ಮಾಡಿ ಅವರು ಒಬ್ಬ ಒಳ್ಳೆಯ ಸಚ್ಚಾರಿತ್ರ್ಯವುಳ್ಳ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು. ಅವರ ಹೆಸರಿನಲ್ಲಿ ಈ ಸಂಸ್ಥೆಯು ಉತ್ತಮ ರೀತಿಯಲ್ಲಿ ಬೆಳೆಯಲಿ ಎಂದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಾಜಿಕುರಿಯನ್ ಶುಭಹಾರೈಸಿದರು. ವೇದಿಕೆಯಲ್ಲಿ ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯ ರವಿ ಕೋಟ್ಯಾನ್, ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ನಿವೃತ್ತ ಕಾರ್ಯ ನಿರ್ವಾಹಣಾಧಿಕಾರಿ ಸುರೇಶ್ ಜೈನ್ ಪೆರಡಾಳು, ಮೊಹಮ್ಮದ್ ಆರೀಫ್ ಉಪಸ್ಥಿತರಿದ್ದರು. ಶಿಕ್ಷಕ ರಕ್ಷಕ ಸಂಘದ ಹರಿಣಾಕ್ಷಿ ಲತೀಶ್, ರಸಿಕ ಜೈನ್, ಶುಭ ವಿಥಲ ಕೋಟ್ಯಾನ್, ರೇಖಾ ವಸಂತ್, ಶಿಕ್ಷಕಿಯರಾದ ಶ್ರೀಮತಿ ವಜ್ರೇಶ್ವರಿ, ಶ್ರೀಮತಿ ಶ್ರೀದೇವಿ, ಶ್ರೀಮತಿ ಸೌಮ್ಯ, ಶ್ರೀಮತಿ ಅಕ್ಷಯ, ಶ್ರೀಮತಿ ಶರ್ವಾಣಿ ಶ್ರೀಮತಿ ಪವಿತ್ರ, ಕುಮಾರಿ ನಿಶ್ಮಿತ, ದೈಹಿಕ ಶಿಕ್ಷಕ ಹರ್ಷ ಸಹಕರಿಸಿದರು. ಲಯನ್ ವಿಜಯ ಕುಮಾರ್ ಜೈನ್ ಪ್ರಸ್ತಾವಿಸಿ, ಮುಖ್ಯ ಶಿಕ್ಷಕಿ ಶ್ರೀಮತಿ ನಿರ್ಮಲಾ ನಿರೂಪಿಸಿ, ಶಿಕ್ಷಕಿ ವಿಶಾಲಾಕ್ಷಿ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.