ಓಡಿಲ್ನಾಳದಲ್ಲಿ ಭತ್ತದ ನಾಟಿ ಪ್ರಾತ್ಯಕ್ಷಿಕೆ ಹಾಗೂ ಕೆಸರುಗದ್ದೆ ಆಟೋಟ ಸ್ಪರ್ಧೆ

Advt_NewsUnder_1
Advt_NewsUnder_1
Advt_NewsUnder_1

odinalaಓಡಿಲ್ನಾಳ: ಕಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಗೇರುಕಟ್ಟೆ ಇದರ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಬೆಳ್ತಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋ., ನವೋದಯ ಸ್ವ ಸಹಾಯ ಗುಂಪುಗಳ ಒಕ್ಕೂಟ ಗೇರುಕಟ್ಟೆ, ಗ್ರಾ.ಪಂ ಕುವೆಟ್ಟು ಮತ್ತು ಕಳಿಯ, ಸ್ನೇಹ ಸಂಗಮ ಅಟೋ ಚಾಲಕ ಮಾಲಕರು ಗೇರುಕಟ್ಟೆ, ಹಾಲು ಉತ್ಪಾದಕರ ಸಹಕಾರಿ ಸಂಘ ಗೇರುಕಟ್ಟೆ, ನಾಳ, ಓಡಿಲ್ನಾಳ, ಮದ್ದಡ್ಕ, ಯುವಶಕ್ತಿ ಭದ್ರಕಜೆ ಮತ್ತು ಓಡಿಲ್ನಾಳ ಮತ್ತು ಶಕ್ತಿ ಯುವಕ ಮಂಡಲ ರೇಷ್ಮೆರೋಡ್ ಇವುಗಳ ಜಂಟಿ ಸಹಕಾರದೊಂದಿಗೆ ಜು. 30 ರಂದು ಓಡಿಲ್ನಾಳ ಗ್ರಾಮದ ಸೇಡಿ ತೋಮಸ್ ಪಿರೇರಾ ಅವರ ಗದ್ದೆಯಲ್ಲಿ ಭತ್ತ ನಾಟಿ ಪ್ರಾತ್ಯಕ್ಷಿಕೆ ಹಾಗೂ ಕೆಸರುಗದ್ದೆ ಆಟೋಟ ಸ್ಪರ್ಧೆ, ಕಂಬಳ ಪ್ರದರ್ಶನ  ನಡೆಯಿತು.
ಕಾರ್ಯಕ್ರಮವನ್ನು ಸುಳ್ಯ ಕೆವಿಜಿ ದಂತ ಮಹಾವಿದ್ಯಾಲಯದ ಪ್ರೊಫೆಸರ್, ದಂತ ವಿಭಾಗದ ಮುಖ್ಯಸ್ಥರೂ ಆಗಿರುವ ಡಾ| ಎಂ.ಎಂ ದಯಾಕರ್ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಳಿಯ ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು ವಹಿಸಿದ್ದರು. ಭತ್ತದ ನಾಟಿ ಪ್ರಾತ್ಯಕ್ಷಿಕೆಯನ್ನು ಓಡಿಲ್ನಾಳ ನಡುಮನೆ ನಾರಾಯಣ ಭಟ್ ಎನ್.ಕೆ ಅವರು ಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.