ಪ್ರೇರಣಾತ್ಮಕ ಬೋಧನೆಯಿಂದ ಭಿನ್ನ ಚಿಂತನೆ

sdm staff asociation prgmಉಜಿರೆ : ವಿದ್ಯಾರ್ಥಿಗಳು ಭಿನ್ನವಾಗಿ ಆಲೋಚಿಸಲು ಪ್ರೇರಣೆ ನೀಡುವಂಥ ಬೋಧನಾ ಕ್ರಮದೊಂದಿಗೆ ಶಿಕ್ಷಕರು ಗುರುತಿಸಿಕೊಳ್ಳಬೇಕು ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಅಭಿಪ್ರಾಯಪಟ್ಟರು.
ಅವರು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯಲ್ಲಿ ಹೊಸದಾಗಿ ಸೇರ್ಪಡೆ ಗೊಂಡ ಬೋಧಕರಿಗಾಗಿ ಜು.20 ರಂದು ಅಧ್ಯಾಪಕರ ಸಂಘ ಏರ್ಪಡಿಸಿದ್ದ ಸಾಂಸ್ಥಿಕ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮ ದಲ್ಲಿ ಎಸ್.ಡಿ.ಎಂ ವೈಶಿಷ್ಟ್ಯತೆ ಕುರಿತು ಮಾತನಾಡಿದರು.
ಬೋಧನೆಯು ಕೇವಲ ಕರ್ತವ್ಯ ನಿರ್ವಹಣೆಯ ಚಟುವಟಿಕೆಯಾಗ ಬಾರದು. ವಿದ್ಯಾರ್ಥಿಗಳನ್ನು ಪ್ರಭಾವಿಸುವ ಹೊಣೆಗಾರಿಕೆಯ ಪಾತ್ರನಿರ್ವಹಿಸಲು ಪೂರಕ ಕ್ರಿಯೆಯನ್ನಾಗಿ ಬೋಧನೆಯನ್ನು ಗ್ರಹಿಸಬೇಕು. ಹಾಗಾದಾಗ ಮಾತ್ರ ತರಗತಿಯೂ ವಿಶಿಷ್ಟವಾಗುತ್ತದೆ. ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ ಎಂದು ಹೇಳಿದರು.
ತರಗತಿಗಳ ಆಚೆಗಿನ ವಿವಿಧ ಕ್ಷೇತ್ರಗಳಲ್ಲಿನ ಕ್ಷಿಪ್ರ ಪ್ರಗತಿಯ ಬದಲಾವಣೆ ಗಳನ್ನು ದೃಷ್ಟಿಯಲ್ಲಿರಿಸಿ ಕೊಂಡು ಶಿಕ್ಷಣರಂಗದಲ್ಲೂ ಪಲ್ಲಟಗಳಾಗಬೇಕು. ಅದಕ್ಕೆ ತಕ್ಕಂತೆ ಶೈಕ್ಷಣಿಕ ವಲಯ ಪ್ರತಿಸ್ಪಂದಿಸಬೇಕು. ಆದರೆ, ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯ ಪ್ರತಿಸ್ಪಂದನೆ ನಿರಾಶಾದಾಯಕವಾಗಿದೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯು ಸ್ಪರ್ಧಾತ್ಮಕ ಜಗತ್ತಿನ ಅನಿವಾರ್ಯತೆಗಳಿಗೆ ಅನುಗುಣವಾದ ಸಮಗ್ರ ಆಯಾಮದ ಶೈಕ್ಷಣಿಕ ಪರಿಸರವನ್ನು ರೂಪಿಸುತ್ತಿದೆ. ಆ ಮೂಲಕ ಉಳಿದ ಶಿಕ್ಷಣ ಸಂಸ್ಥೆಗಳಿಗಿಂತ ಭಿನ್ನವಾಗಿ ಗುರುತಿಸಿ ಕೊಂಡಿದೆ ಎಂದರು. ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಎಸ್. ಮೋಹನ ನಾರಾಯಣ ಅವರು ಕಾಲೇಜಿನ ವಿವಿಧ ಕಾರ್ಯಚಟುವಟಿಕೆಗಳ ಕುರಿತು ಸವಿಸ್ತಾರ ಮಾಹಿತಿಯ ಜೊತೆಗೆ ನಿರ್ವಹಣೆಯ ವಿವಿಧ ಮಾರ್ಗೋ ಪಾಯಗಳ ವಿವರವನ್ನು ಪ್ರಸ್ತುತ ಪಡಿಸಿದರು. ಎಸ್‌ಡಿಎಂ ಪಿಯು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದಿನೇಶ ಚೌಟ, ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಎಂ. ವೈ. ಮಂಜುಳಾ, ಮೌಲ್ಯಮಾಪನ ರಿಜಿಸ್ಟ್ರಾರ್ ಪ್ರೊ. ಅಜಯ್ ಕುಂಬ್ರಬೈಲ್, ಡಾ. ಎ. ಜಯಕುಮಾರ್ ಶೆಟ್ಟಿ, ಡಾ. ಬಿ. ಪಿ. ಸಂಪತ್‌ಕುಮಾರ್ ಎಸ್‌ಡಿಎಂ ಕಾಲೇಜಿಗೆ ಸಂಬಂಧಿಸಿದ ಶೈಕ್ಷಣಿಕ ವಿಶೇಷತೆಗೆ ಸಂಬಂಧಿಸಿದ ವಿವಿಧ ಅಂಶಗಳ ಕುರಿತು ಮಾಹಿತಿ ನೀಡಿದರು. ಅಧ್ಯಾಪಕರ ಸಂಘದ ಕಾರ್ಯದರ್ಶಿ ಪ್ರೊ. ನಾಗರಾಜಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಶಶಿಪ್ರಭಾ ನಿರೂಪಿಸಿದರು. ಧನರಾಜ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.