ಜಲಸಾಕ್ಷರತಾ ಆಂದೋಲನಾ ತರಬೇತಿ ಕಾರ್ಯಾಗಾರ

jala saksharatha andolana 1ಬೆಳ್ತಂಗಡಿ : ಕರ್ನಾಟಕ ಸರಕಾರ ಲೋಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಸಾಕ್ಷರತಾ ಸಮಿತಿ ಇದರ ಆಶ್ರಯದಲ್ಲಿ ತಾಲೂಕಿನ ಗ್ರಾಮ ಪಂಚಾಯತು ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಸಾಕ್ಷರತಾ ಪ್ರೇರಕರಿಗೆ ಜಲ ಸಾಕ್ಷರತಾ ಆಂದೋಲನಾ ತರಬೇತಿ ಕಾರ್ಯಾಗಾರ ಜು.25ರಂದು ಬೆಳ್ತಂಗಡಿ ತಾಲೂಕು ಪಂಚಾಯತು ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ತಾ.ಪಂ ಅಧ್ಯಕ್ಷೆ ಶ್ರೀಮತಿ ದಿವ್ಯಜ್ಯೋತಿ ಅವರು ಉದ್ಘಾಟಿಸಿ, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಗಳು ಎದುರಾಗುವ ನಿಟ್ಟಿನಲ್ಲಿ ಮಳೆಗಾಲದ ಈ ಸಮಯದಲ್ಲಿ ಜಲವನ್ನು ಸಂರಕ್ಷಿಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು. ಭೂಮಿಗೆ ನೀರಿಂಗಿಸುವುದು, ಮಳೆಕೊಯ್ಲು ಕಾರ್ಯವನ್ನು ಮಾಡುವುದರಿಂದ ಭೂಮಿಯ ಜಲ ಮಟ್ಟ ಏರಿಕೆಯಾಗುವುದರ ಜೊತೆಗೆ ನೀರನ್ನು ಸಂರಕ್ಷಿಸಿದಂತಾಗುತ್ತದೆ ಎಂದು ತಿಳಿಸಿದರು.
ದ.ಕ. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸುಧಾಕರ್ ಅವರು ಜಲ ಸಾಕ್ಷರತಾ ಆಂದೋಲನದ ಬಗ್ಗೆ ಮಾಹಿತಿ ನೀಡಿ, ನೀರಿನ ಮೂಲ, ಇದರ ಮಹತ್ವ, ಮತ್ತು ಸಂರಕ್ಷಣೆ ಬಗ್ಗೆ ಜನರಿಗೆ ಮಾಹಿತಿ ನೀಡಿ ಅವರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸಗಳಾಗಬೇಕು, ಮಳೆಗಾಲದ ಒಂದು ವರ್ಷದಲ್ಲಿ 5 ಸೆಂಟ್ಸ್ ಜಾಗದಲ್ಲಿ 7ಲಕ್ಷ ಲೀಟರ್ ಮಳೆ ಬೀಳುತ್ತದೆ. 1 ಎಕ್ರೆ ಪ್ರದೇಶದಲಿ 1.4 ಕೋಟಿ ಲೀಟರ್ ಮಳೆ ನೀರು ಬೀಳುತ್ತದೆ. ಇದನ್ನು ಸಂರಕ್ಷಿಸುವ ಕಾರ್ಯ ನಡೆದಲ್ಲಿ ನಮಗೆ ನೀರಿನಲ್ಲಿ ಯಾವುದೇ ಬರಗಾಲ ಬರಲು ಸಾಧ್ಯವಿಲ್ಲ ಎಂದರು. ಮನೆ, ಶಾಲೆ, ಸರಕಾರಿ ಕಟ್ಟಡ, ಅಂಗನವಾಡಿ ಮೊದಲಾದ ಕಡೆಗಳಲ್ಲಿ ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸುವ ಮತ್ತು ಶುದ್ದೀಕರಣ ಗೊಳಿಸಿ, ಬಾವಿ, ಕೊಳವೆಬಾವಿಗೆ ಬಿಡುವ ಹಲವಾರು ಮಾದರಿಗಳನ್ನು ಅವರು ಚಿತ್ರ ಸಹಿತ ವಿವರಿಸಿದರು.
ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿಯವರು ಜಲಸಾಕ್ಷರತಾ ಆಂದೋಲನ ಚಟುವಟಿಕೆಗಳ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿ, ಪ್ರತಿ ಗ್ರಾಮ ಪಂಚಾಯತ್ ಹಂತದಲ್ಲಿ ಈಗಾಗಲೇ ಆಯ್ಕೆಯಾಗಿರುವ ಗ್ರಾಮ ವಿಕಾಸ ಪ್ರೇರಕರನ್ನೇ, ಜಲಪ್ರೇರಕರನ್ನಾಗಿ ಬಳಸಿಕೊಳ್ಳಬಹುದು. ಗ್ರಾಮ ಮಟ್ಟದಲ್ಲಿ ಒಂದು ಸಲಹಾ ಸಮಿತಿ ನೇಮಕ ಮಾಡುವ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ತಾ.ಪಂ. ವ್ಯವಸ್ಥಾಪಕಿ ಶ್ರೀಮತಿ ಸುವರ್ಣ ಜೆ. ಹೆಗ್ಡೆ, ಸಹಾಯಕ ಲೆಕ್ಕಾಧಿಕಾರಿ ಗಣೇಶ್ ಪೂಜಾರಿ, ಉದ್ಯೋಗ ಖಾತರಿ ಪ್ರಭಾರ ಸಹಾಯಕ ನಿರ್ದೇಶಕಿ ಸಫನಾ ಉಪಸ್ಥಿತರಿದ್ದರು. ತಾಲೂಕು ಸಂಯೋಜಕ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.