ನಕಲಿ ಪರವಾನಿಗೆ ಬಳಸಿ ಮರಳು ಕಳ್ಳ ಸಾಗಾಟ 4 ಮರಳು ಲಾರಿಗಳು ವಶಕ್ಕೆ : ಮೂವರ ಬಂಧನ- ಓರ್ವ ಪರಾರಿ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಮರಳು ಸಾಗಾಟಕ್ಕೆ ನಕಲಿ ಪರವಾನಿಗೆ ಬಳಕೆ, ಅನುಮತಿ ಇಲ್ಲದೆ ಮರಳು ಸಾಗಾಟ, ಮರಳು ಕಳ್ಳತನ ಈ ಮೂರು ಪ್ರಮುಖ ಆರೋಪದಡಿ ಜು. 26 ರಂದು ಬೆಳ್ತಂಗಡಿ ಹಳೆಕೋಟೆ ಎಂಬಲ್ಲಿ 4 ಲಾರಿಗಳನ್ನು ಮರಳು ಸಮೇತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ಚಿಕ್ಕಮಗಳೂರು ನಿವಾಸಿಗಳಾಗಿದ್ದು ಲಾರಿ ಚಾಲಕರಾಗಿದ್ದ ರಾಕೀಬ್, ಅಬ್ದುಲ್ ಸಲಾಂ ಮತ್ತು ವೆಂಕಟೇಶ್ ಎಂಬವರನ್ನು ಬಂಧಿಸಲಾಗಿದೆ. ಓರ್ವ ಚಾಲಕ ಪರಾರಿಯಾಗಿದ್ದಾರೆ.
ಬಂಧಿತರಿಂದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಪದ್ಮಶ್ರೀ ಅವರು ಈ ಕಾರ್ಯಾಚರಣೆ ನಡೆಸಿದ್ದು ಬೆಳ್ತಂಗಡಿ ಪೊಲೀಸರಿಗೆ ಪ್ರಕರಣವನ್ನು ಹಸ್ತಾಂತರಿಸಿ ದ್ದಾರೆ. ಬಂಟ್ವಾಳ ತಾಲೂಕಿನಲ್ಲಿ ಇದೇ ರೀತಿ ನಕಲಿ ಪರ್ಮಿಟ್ ಮಾಡಿಕೊಂಡುವ ದಂಧೆಯೊಂದು ಸಕ್ರೀಯವಾಗಿದೆ ಎಂದ ಗುಮಾನಿಯನ್ನು ಇಲಾಖೆ ವ್ಯಕ್ತಪಡಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.