HomePage_Banner_
HomePage_Banner_
HomePage_Banner_

ಮುಂಡಾಜೆ-ಕಲ್ಮಂಜ-ಧರ್ಮಸ್ಥಳ ರಸ್ತೆಗೆ 7ಕೋಟಿ ರೂ. ಮಂಜೂರು: ಶಾಸಕ ಬಂಗೇರ

ಎರಡು ರಸ್ತೆಗಳಿಗೆ 18 ಕೋಟಿ ರೂ. ಮಂಜೂರು
ಉಜಿರೆ – ಬೆಳಾಲು- ಕುಪ್ಪೆಟ್ಟಿ ರಸ್ತೆ ಮತ್ತು ಕಕ್ಕಿಂಜೆ- ನೆರಿಯ- ಪುದುವೆಟ್ಟು (6 ರಿಂದ 15 ಕಿ.ಮೀ. ವರೆಗೆ) ಈ ರಸ್ತೆಗೆ 18 ಕೋಟಿ ರೂ. ಮಂಜೂರಾಗಿದೆ ಎಂದೂ ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ. ಮುಂಡಾಜೆ- ಧರ್ಮಸ್ಥಳ ರಸ್ತೆಗೆ ಟೆಂಡರ್ ಆಗಿದ್ದು ಈ ಎರಡು ರಸ್ತೆಗಳ ಪ್ರಕ್ರೀಯೆಗಳು ನಡೆಯುತ್ತಿದೆ.

ಮುಂಡಾಜೆ: ಮುಂಡಾಜೆ – ಕಲ್ಮಂಜ ಈ ಎರಡು ಗ್ರಾಮಗಳ ಜನರ ಬಹುವರ್ಷಗಳ ಬೇಡಿಕೆಯಾದ ಮುಂಡಾಜೆ – ಕಲ್ಮಂಜ- ಧರ್ಮಸ್ಥಳ ರಸ್ತೆಗೆ ಕೇಂದ್ರ ರಸ್ತೆ ನಿಧಿಯಿಂದ 7 ಕೋಟಿ ರೂ. ಮಂಜೂರುಗೊಂಡಿದ್ದು ಟೆಂಡರ್ ಪ್ರಕ್ರೀಯೆ ಪೂರ್ಣಗೊಂಡಿದೆ. ಶೀಘ್ರವೇ ಕಾಮಗಾರಿ ಅನುಷ್ಠಾನಕ್ಕೆ ಬರಲಿದೆ ಎಂದು ಶಾಸಕ ವಸಂತ ಬಂಗೇರ ಹೇಳಿದರು.
ಜು. 25 ರಂದು ಮುಂಡಾಜೆ ಗ್ರಾಮ ಸಭೆಗೆ ವಿಶೇಷ ಭೇಟಿ ನೀಡಿದ ವೇಳೆ ಸದ್ರಿ ರಸ್ತೆಯ ಪರವಾಗಿ ಗ್ರಾಮಸ್ಥರಾದ ಲ| ಅಶ್ರಫ್ ಆಲಿಕುಂಞಿ, ಲ| ನಾಮದೇವ ರಾವ್ ಮತ್ತು ಅಗರಿ ರಾಮಣ್ಣ ಶೆಟ್ಟಿ ಅವರು ಪ್ರಸ್ತಾಪವೆತ್ತಿದಾಗ ಶಾಸಕರು ಈ ರೀತಿ ಪ್ರತಿಕ್ರೀಯಿಸಿದರು.
ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಮುಂಡಾಜೆ ಗ್ರಾ.ಪಂ. ಅಧ್ಯಕ್ಷೆ ಶಾಲಿನಿ ವಿಜಯಕುಮಾರ್ ವಹಿಸಿದ್ದರು. ಉಜಿರೆ ಜಿ.ಪಂ. ಸದಸ್ಯೆ ನಮಿತಾ, ಗ್ರಾ.ಪಂ. ಉಪಾಧ್ಯಕ್ಷೆ ವಸಂತಿ ರಾಜ್‌ಗೋಪಾಲ್, ಸದಸ್ಯರಾದ ಸುಮನಾ ಗೋಖಲೆ, ಚೆನ್ನಕೇಶವ ನಾಯ್ಕ, ನಾರಾಯಣ ಗೌಡ ದೇವಸ್ಯ, ಸುರೇಶ್ ಕುಮಾರ್, ಗಣೇಶ್ ಬಂಗೇರ, ಸುಮನಾ ಗೋಖಲೆ, ಚಂದ್ರಾವತಿ, ಅಶ್ವಿನಿ ಹೆಬ್ಬಾರ್, ಹೇಮಾವತಿ, ಪಶುಸಂಗೋಪನೆ ಡಾ| ಪ್ರಶಾಂತ್ ಸಭೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಇಲಾಖಾ ಮಾಹಿತಿ ನೀಡಿದರು. ಪ್ರಭಾರ ಅಭಿವೃದ್ಧಿ ಅಧಿಕಾರಿ ಸಂಜೀವ ನಾಯ್ಕ ಸ್ವಾಗತಿಸಿ ವರದಿ ಮಂಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.